ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.19 ರಿಂದ ಹುಬ್ಬಳ್ಳಿ ಸಿದ್ಧಾರೂಢಮಠದ ಶಿವರಾತ್ರಿ ಉತ್ಸವ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ, 15 : ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢಮಠದ 115ನೇ ಶಿವರಾತ್ರಿ ಜಾತ್ರಾ ಮಹೋತ್ಸವ ಫೆಬ್ರವರಿ 19 ರಿಂದ 27 ರವರೆಗೆ ಜರುಗಲಿದೆ ಎಂದು ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಧರಣೇಂದ್ರ ಜವಳಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 19 ರಿಂದ 27 ರವರೆಗೆ ಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದ್ದು ಫೆಬ್ರವರಿ 25ರಂದು ಮಹಾರಥೋತ್ಸವ ಜರುಗಲಿದೆ. ಫೆಬ್ರವರಿ 27 ರಂದು ಸಂಜೆ 6ಕ್ಕೆ ಕೌದಿ ಪೂಜೆಯೊಂದಿಗೆ ಶಿವರಾತ್ರಿ ಉತ್ಸವ ಸಮಾರೋಪಗೊಳ್ಳಲಿದೆ ಎಂದರು.

Hubballi Siddharuda Math Mahashivaratri 115th utsav from February 19 to 27

ಶಿವರಾತ್ರಿ ಅಂಗವಾಗಿ ಮಠದಲ್ಲಿ ಒಂದು ವಾರ ಪರ್ಯಂತ ವಿವಿಧ ಕಾರ್ಯಕ್ರಮ ಜರುಗಲಿದ್ದು, ಫೆಬ್ರವರಿ 24ರ ಶಿವರಾತ್ರಿಯಂದು ಸಿದ್ದಾರೂಢರ ಪಾಲಕಿ ಉತ್ಸವವು ವಾದ್ಯ ಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ ಮರಳಿ ಮಠಕ್ಕೆ ಆಗಮಿಸುವುದು. ನಂತರ ಅಹೋರಾತ್ರಿ ಜಾಗರಣೆ ನಡೆಯಲಿದೆ.

ಫೆಬ್ರವರಿ 19ರಂದು ಸಂಜೆ 4ಕ್ಕೆ ಮಠದ ದಾಸೋಹ ಭವನದಲ್ಲಿ ಸಭೆ ಕರೆಯಲಾಗಿದ್ದು, ಸಲಹೆ ಸೂಚನೆ ನೀಡುವವರು ಆಗಮಿಸಬಹುದಾಗಿದೆ.

ಫೆ.19 ರಿಂದ ಫೆ. 24 ರವರೆಗೆ ದಿನನಿತ್ಯ ರಾತ್ರಿ 8ಕ್ಕೆ ಪ್ರಮುಖ ಕಲಾವಿದರಿಂದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಂದು ಹೇಳಿದರು.

Hubballi Siddharuda Math Mahashivaratri 115th utsav from February 19 to 27

ಉತ್ತರ ಕರ್ನಾಟಕದ ಪ್ರಸಿದ್ಧ ಮಠ : ಇಲ್ಲಿಯ ಹಳೇಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಶ್ರೀ ಸಿದ್ಧಾರೂಢಮಠವು ಉತ್ತರ ಕರ್ನಾಟಕದ ಖ್ಯಾತ ಯಾತ್ರಾ ಸ್ಥಳವಾಗಿದೆ.

ಇಲ್ಲಿಗೆ ಪ್ರತಿನಿತ್ಯ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ದಿನವೂ ಇಲ್ಲಿ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ. ಬರುವ ಭಕ್ತರಿಗೆ ವಸತಿ ಮಾಡಲು ಯಾತ್ರಿ ನಿವಾಸವನ್ನೂ ನಿರ್ಮಿಸಲಾಗಿದೆ. ಫೆ. 25 ರ ಮಹಾರಥೋತ್ಸವಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷಿಸಲಾಗಿದೆ.

English summary
Hubballi Siddharuda Math Mahashivaratri 115th utsav start from February 19 to 27 at Hubballi. The lord Siddharuda idol rathotsava held on feb 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X