ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಯಾಣಿಕ ಸ್ನೇಹಿಯಾದ ಹುಬ್ಬಳ್ಳಿ ರೈಲು ನಿಲ್ದಾಣ

|
Google Oneindia Kannada News

ಹುಬ್ಬಳ್ಳಿ, ಜನವರಿ 31 : ಹುಬ್ಬಳ್ಳಿ ರೈಲು ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಮಾಡಲು ನೈಋತ್ಯ ರೈಲ್ವೆ ಹಲವು ಕ್ರಮಗಳನ್ನು ಕೈಗೊಂಡಿದೆ. ರೈಲು ನಿಲ್ದಾಣದ ಕಟ್ಟಡಗಳನ್ನು ಟರ್ಮಿನಲ್‌ಗಳಾಗಿ ವಿಭಾಗ ಮಾಡಲಾಗಿದೆ. ಇದರಿಂದಾಗಿ ಜನರು ಸುಲಭವಾಗಿ ಗುರುತಿಸಲು ಸಹಾಯಕವಾಗಲಿದೆ.

ರೈಲ್ವೆ ನಿಲ್ದಾಣದ ಗೇಟ್‌ಗಳನ್ನು ಪ್ರವೇಶದ್ವಾರ, ನಿರ್ಗಮನ ದ್ವಾರ ಎಂದು ಬದಲಾವಣೆ ಮಾಡಲಾಗಿದೆ. ಗೇಟ್‌ ನಂಬರ್‌ಗಳನ್ನು ಸಹ ನೀಡಲಾಗಿದೆ. ಪಾದಾಚಾರಿಗಳ ಸೇತುವೆ ಮೇಲೆ ಫ್ಲಾಟ್‌ ಫಾರಂ, ಪ್ರವೇಶ ದ್ವಾರ, ನಿರ್ಗಮನ ದ್ವಾರದ ಮಾಹಿತಿ ನೀಡುವ ಫಲಕ ಹಾಕಲಾಗಿದೆ.

ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ

Hubballi Railway Station Turns As Passenger Friendly

ನೈಋತ್ಯ ರೈಲ್ವೆ ತನ್ನ ವಿಭಾಗದ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ವಿಭಾಗದ ವ್ಯಾಪ್ತಿಯ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ಈ ರೀತಿ ಬದಲಾವಣೆ ಮಾಡಲಾಗುತ್ತದೆ.

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಡಿಪಿಆರ್‌ ಸಿದ್ಧ

ರೈಲು ನಿಲ್ದಾಣದ ದಕ್ಷಿಣ ಭಾಗಕ್ಕೆ ಟರ್ಮಿನಲ್ 1 ಎಂದು ಹೆಸರು ಇಡಲಾಗಿದೆ. ಮೂರು ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಗೇಟ್‌ ನಂಬರ್ 1ಕ್ಕೆ ನೀಡಲಾಗಿದೆ. ಗೇಟ್ 2 ಮತ್ತು 3 ಉತ್ತರ ಭಾಗದಲ್ಲಿವೆ. ಗದಗ ರಸ್ತೆ ಭಾಗದಲ್ಲಿ ಟರ್ಮಿನಲ್ 2 ಇದೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಪ್ರೀ-ಪೇಯ್ಡ್ ಆಟೋ ಸೇವೆ ಆರಂಭಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಪ್ರೀ-ಪೇಯ್ಡ್ ಆಟೋ ಸೇವೆ ಆರಂಭ

ಇದರಿಂದಾಗಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಿದ್ದೇವೆ? ಎಂದು ಪ್ರಯಾಣಿಕರು ಗುರುತಿಸುವುದು ಬಹಳ ಸರಳವಾಗಿದೆ. ಇದರಿಂದಾಗಿ ಕ್ಯಾಬ್ ಚಾಲಕರು, ಆಟೋ ಚಾಲಕರಿಗೂ ಅನುಕೂಲವಾಗಿದೆ. ಪ್ರಯಾಣಿಕರನ್ನು ಡ್ರಾಪ್ ಮಾಡಲು ಮತ್ತು ಪಿಕಪ್ ಮಾಡುವುದು ಸುಲಭವಾಗಿದೆ.

English summary
South Western Railway (SWR) changed Hubballi railway station as passenger friendly. Station building named as terminals to enable easy identification and reference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X