ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಮುಂಬೈ ನಡುವೆ ಹೊಸ ವಿಮಾನ, ವೇಳಾಪಟ್ಟಿ

|
Google Oneindia Kannada News

ಹುಬ್ಬಳ್ಳಿ, ಜನವರಿ 25 : ಹುಬ್ಬಳ್ಳಿ ಮತ್ತು ಮುಂಬೈ ನಡುವೆ ನೇರ ವಿಮಾನ ಸೇವೆ ಆರಂಭವಾಗುತ್ತಿದೆ. ಹಲವು ವಿಮಾನಯಾನ ಸಂಸ್ಥೆಗಳು ವಿವಿಧ ನಗರಗಳಿಂದ ಹುಬ್ಬಳ್ಳಿಗೆ ಈಗಾಗಲೇ ಸಂಪರ್ಕ ಕಲ್ಪಿಸುತ್ತಿವೆ.

ಇಂಡಿಗೋ ಹುಬ್ಬಳ್ಳಿ-ಮುಂಬೈ ನಡುವೆ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. 2020ರ ಮಾರ್ಚ್ 29ರಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಏರ್ ಬಸ್ ಎ320 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

ವೇಳಾಪಟ್ಟಿ : ಹುಬ್ಬಳ್ಳಿ-ಮುಂಬೈ ನಡುವಿನ ವಿಮಾನ ಹಾರಾಟದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 11.25ಕ್ಕೆ ಹೊರಡುವ ವಿಮಾನ 12.50ಕ್ಕೆ ಮುಂಬೈ ತಲುಪಲಿದೆ.

ತುಮಕೂರು ಅಥವ ಕೋಲಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ತುಮಕೂರು ಅಥವ ಕೋಲಾರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ

Hubballi Mumbai IndiGo To Introduces New Flight

ಮಧ್ಯಾಹ್ನ 1.30ಕ್ಕೆ ಮುಂಬೈನಿಂದ ಹೊರಡುವ ವಿಮಾನ 2.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಟಿಕೆಟ್ ಬುಕ್ ಮಾಡಲು ಇಂಡಿಯೋ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಶೀಘ್ರ ಬೆಂಗಳೂರು-ಕಲಬುರಗಿ-ತಿರುಪತಿ ನಡುವೆ ವಿಮಾನ ಹಾರಾಟ ಶೀಘ್ರ ಬೆಂಗಳೂರು-ಕಲಬುರಗಿ-ತಿರುಪತಿ ನಡುವೆ ವಿಮಾನ ಹಾರಾಟ

ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾ ನಿಲ್ದಾಣವಾಗಿದೆ. 2016ರಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ನೂತನ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡಲಾಗಿದ್ದು, 2, 600 ಮೀಟರ್‌ಗೆ ರನ್‌ ವೇ ವಿಸ್ತರಣೆ ಮಾಡಲಾಗಿದೆ.

ಸ್ಟಾರ್ ಏರ್, ಏರ್ ಇಂಡಿಯಾ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ವಿವಿಧ ನಗರಗಳಿಂದ ಹುಬ್ಬಳ್ಳಿಗೆ ವಿಮಾನ ಸೇವೆಯನ್ನು ಒದಗಿಸುತ್ತಿವೆ. ತಿರುಪತಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಸಂಪರ್ಕವಿದೆ.

English summary
IndiGo airlines has introduced a new flight between the Hubballi and and Bengaluru. Flight will run from March 20, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X