• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ ರೈಲು ನಿಲ್ದಾಣದ ಸೌಂದರ್ಯಕ್ಕೆ ಕೇಂದ್ರ ಸಚಿವ ಪಿಯೂಶ್​ ಗೋಯಲ್ ಫಿದಾ

|

ಹುಬ್ಬಳ್ಳಿ, ನವೆಂಬರ್ 4: ಉತ್ತರ ಕರ್ನಾಟಕ ಅತಿ ದೊಡ್ಡ ರೈಲ್ವೆ ನಿಲ್ದಾಣವಾದ ಹುಬ್ಬಳ್ಳಿಯ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣದ ಸೌಂದರ್ಯ ಮತ್ತು ಅಲಂಕಾರ ಕಂಡು ಕೇಂದ್ರ ರೈಲ್ವೆ ಸಚಿವ ಪಿಯೂಶ್​ ಗೋಯಲ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಜನವರಿಯಲ್ಲಿ ಲೋಕಾರ್ಪಣೆ ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಜನವರಿಯಲ್ಲಿ ಲೋಕಾರ್ಪಣೆ

ತಮ್ಮ ಟ್ವಿಟ್ಟರ್ ಖಾತೆ ಮೂಲಕ ಗುಣಗಾನ ಮಾಡಿರುವ ಅವರು, ""ಕರ್ನಾಟಕದ ಹುಬ್ಬಳ್ಳಿ ಜಂಕ್ಷನ್ ರೈಲ್ವೆ ನಿಲ್ದಾಣವು ಪ್ರಯಾಣಿಕರಿಗೆ ಸ್ವಚ್ಛತೆ, ರೋಮಾಂಚಕ ಬೆಳಕು, ಸುಂದರೀಕರಣ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಸಂತೋಷಕರ ಅನುಭವವನ್ನು ನೀಡುತ್ತಿದೆ'' ಎಂದು ಬರೆದುಕೊಂಡಿದ್ದಾರೆ.

ಅಸದೇ ರೀತಿ ರೈಲ್ವೆ ನಿಲ್ದಾಣದಲ್ಲಿ ವರ್ಧಿತ ಮೂಲಸೌಕರ್ಯ ಹೆಚ್ಚಳ ಮತ್ತು ಹೊಸ ಪ್ರಯಾಣಿಕ-ಸ್ನೇಹಿ ಸೌಲಭ್ಯಗಳು ಈ ನಿಲ್ದಾಣವನ್ನು ಒಂದು ಭಿನ್ನವಾಗಿ ಕಾಣುವಂತೆ ಮಾಡುತ್ತವೆ ಎಂದು ಕೇಂದ್ರ ಸಚಿವ ಪಿಯೂಶ್​ ಗೋಯಲ್ ಟ್ವಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಹುಬ್ಬಳ್ಳಿ ರೈಲ್ವೇ ನಿಲ್ದಾಣವನ್ನು ಆಧುನಿಕರಿಸಲಾಗಿದ್ದು, ಇತ್ತೀಚೆಗಷ್ಟೇ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಸಿದ್ದಾರೂಢ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು.

   Hindu ಭಾವನೆಗಳನ್ನು ಘಾಸಿಗೊಳಿಸಿದ್ರಾ Amithabh bachan | KBC | Oneindia Kannada

   ಇದೀಗ ಸ್ವಚ್ಛತೆ ಹಾಗೂ ಆಧುನಿಕ ವ್ಯವಸ್ಥೆಗಳ ಜೊತೆಗೆ ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಈ ನಿಲ್ದಾಣಕ್ಕೆ ಕೇಂದ್ರ ಸಚಿವರು ಮನಸೋತಿದ್ದಾರೆ.

   English summary
   Union Railway Minister Piyush Goyal expressed his delight at the beauty and decoration of Siddaroodha Swamiji Railway Station at Hubballi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X