ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೇಷ್ಯಾ ಸ್ಟುಡೆಂಟ್ಸ್ ಒಲಿಂಪಿಕ್ಸ್ ಗೆ ಹುಬ್ಬಳ್ಳಿಯ ಸಹನಾ ಕುಲಕರ್ಣಿ

By Basavaraj
|
Google Oneindia Kannada News

ಹುಬ್ಬಳ್ಳಿ, ಜೂನ್ 29 : ಮಲೇಷ್ಯಾದಲ್ಲಿ ಇದೇ ಜೂನ್ 29ರಿಂದ ಜುಲೈ 1ರ ವರಗೆ ನಡೆಯಲಿರುವ 3ನೇ ಅಂತಾರಾಷ್ಟ್ರೀಯ ಸ್ಟುಡೆಂಟ್ಸ್ ಒಲಿಂಪಿಕ್ ಗೇಮ್ಸ್ ಗೆ ಹುಬ್ಬಳ್ಳಿಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಹನಾ ಕುಲಕರ್ಣಿ ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿ ಕೆಎಲ್ ಇ ಸಂಸ್ಥೆಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಇ ಅಂಡ್ ಸಿ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿನಿ ಸಹನಾ ಕುಲಕರ್ಣಿ ಸ್ಟುಡೆಂಟ್ಸ್ ಒಲಿಂಪಿಕ್ ಗೇಮ್ಸ್ ನ ಮಹಿಳಾ ವಿಭಾಗದ ಟೇಬಲ್ ಟೆನಿಸ್ ನಲ್ಲಿ ಸ್ಪರ್ಧೆ ಮಾಡಲಿದ್ದು, ಮಂಗಳವಾರ ಮಲೇಷ್ಯಾಗೆ ಪ್ರಯಾಣ ಬೆಳೆಸಿದರು.

Hubballi girl Sahana Kulkarni selected for Malaysia student olympics

ಸ್ಟುಡೆಂಟ್ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ರಾಜ್ಯದ ಏಕೈಕ ವಿದ್ಯಾರ್ಥಿನಿ ಸಹನಾ ಆಗಿದ್ದು, ಉಳಿದಂತೆ ಟೇಬಲ್ ಟೆನಿಸ್ ಪಂದ್ಯಾವಳಿಯ 22 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ರಾಜ್ಯದ ಪ್ರತೀಕ್ ಘೋಡ್ಸೆ, ಅಭಿಷೇಕ್ ಕಠಾರೆ ಭಾಗವಹಿಸುತ್ತಿದ್ದಾರೆ.

ಮಧ್ಯಮ ಕುಟುಂಬದಿಂದ ಬಂದಿರುವ ಸಹನಾಳಿಗೆ ಬಾಲ್ಯದಿಂದಲೂ ಟೇಬಲ್ ಟೆನಿಸ್ ಅಚ್ಚುಮೆಚ್ಚಿನ ಕ್ರೀಡೆಯಾಗಿತ್ತು. ಇವರ ತಂದೆ ಶ್ರೀನಿವಾಸ ಕುಲಕರ್ಣಿ ಖಾಸಗಿ ಕಂಪನಿಯೊಂದರ ಉದ್ಯೋಗಿ ಆಗಿದ್ದು, ತಾಯಿ ಇಂಧು ಕುಲಕರ್ಣಿ ಜೆಎಸ್ ಎಸ್ ಕಾಲೇಜಿನಲ್ಲಿ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಹುಬ್ಬಳ್ಳಿಯಲ್ಲಿನ್ನು 'ಬಾಡಿಗೆ' ಎನ್‍ಫೀಲ್ಡ್, ಹರ್ಲೆ ಡೇವಿಡ್ಸನ್!ಹುಬ್ಬಳ್ಳಿಯಲ್ಲಿನ್ನು 'ಬಾಡಿಗೆ' ಎನ್‍ಫೀಲ್ಡ್, ಹರ್ಲೆ ಡೇವಿಡ್ಸನ್!

ಹುಬ್ಬಳ್ಳಿ ಟೇಬಲ್ ಟೆನಿಸ್ ಅಸೋಸಿಯೇಷನ್ ನಿಂದ ತರಬೇತಿ ಪಡೆದಿರುವ ಸಹನಾ, 2009ರಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡತೊಡಗಿದ್ದಳು. ಈಗಾಗಲೇ 121 ಟ್ರೋಫಿ ಹಾಗೂ ಮೆಡಲ್ ಗೆದ್ದಿರುವ ಸಹನಾ 16 ಬಾರಿ ರಾಷ್ಟ್ರೀಯ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾಳೆ.

Hubballi girl Sahana Kulkarni selected for Malaysia student olympics

ರಾಜ್ಯಮಟ್ಟದ 51 ಪಂದ್ಯಾವಳಿಯ ಪ್ರಶಸ್ತಿಗಳನ್ನು ಸಹನಾ ಮುಡಿಗೇರಿಸಿಕೊಂಡಿದ್ದಾಳೆ. ಗುಜರಾತ್‍ ನ ವಡೋದರದಲ್ಲಿ 2016ರಲ್ಲಿ ನಡೆದ ರಾಷ್ಟ್ರಮಟ್ಟದ ಸ್ಟೂಡೆಂಟ್ಸ್ ಒಲಿಂಪಿಕ್ ನ ಟೇಬಲ್ ಟೆನಿಸ್ ನ ಸಿಂಗಲ್ ವಿಭಾಗದಲ್ಲಿ ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಳು.

ಬಿವಿಬಿ ಕಾಲೇಜ್‍ ನಿಂದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಮೂರು ಸಲ ಯೂನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾಳೆ.

"ಚಿಕ್ಕಂದಿನಿಂದಲೇ ಸಹನಾಳಿಗೆ ತರಬೇತಿ ನೀಡಲಾಗುತ್ತಿತ್ತು. ಅವಳಿಗೆ ಪ್ರಶಸ್ತಿ ಮೇಲೆ ಪ್ರಶಸ್ತಿ ಬರುತ್ತಿದ್ದಂತೆ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಿತು.

ಈ ಬೆಳೆವಣಿಗೆ ಎಲ್ಲರಿಗೂ ಖುಷಿ ತರಿಸಿದೆ" ಎಂದು ಹುಬ್ಬಳ್ಳಿ ಟೇಬಲ್ ಟೆನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

English summary
Sahana Kulkarni, who is engineering student of BVB Engineering Collage has went for participating in 3rd International Students Olympics Games held at Malayshia. She is only women representative from our state in this game. Its proud to Hubballi as well as North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X