ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ - ಧಾರವಾಡ ತ್ವರಿತ ಬಸ್ ಗೆ 27% ಹೆಚ್ಚು ಟೆಕೆಟ್ ದರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 29: ಹುಬ್ಬಳ್ಳಿ - ಧಾರವಾಡ ನಡುವೆ ಸಂಚರಿಸುವ ತ್ವರಿತ ಬಸ್ ಸೇವೆ (BRTS)ಗೆ ಎರಡು ಪಟ್ಟು ಟೆಕೆಟ್ ದರವನ್ನು ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಸರ್ಕಾರ 12% ದರವನ್ನು ಹೆಚ್ಚಿಸಲು ಆದೇಶ ನೀಡಿದೆ. ಆದರೆ BRTS ಸಂಸ್ಥೆಯವರು ಅದನ್ನೂ ಮೀರಿ ಶೇ. 27% ದಷ್ಟು ಬಸ್ ದರವನ್ನು ಹೆಚ್ಚಿಸಿದ್ದಾರೆ. ಅಂದರೆ ಸುಮಾರು 7ರಿಂದ ‌8 ರೂಪಾಯಿ ಹೆಚ್ಚಿಸಿದಂತಾಗಿದೆ. ಇದರಿಂದ ಪ್ರಯಾಣಿಕರಿಗೆ ಹೊರೆ ಆಗಲಿದ್ದು, ಕೆಎಸ್ ಆರ್ ಟಿಸಿಗೆ ಒಂದು ನ್ಯಾಯ, ಬಿ‌ಆರ್ ಟಿಎಸ್ ಗೆ ಒಂದು ನ್ಯಾಯಾನಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕಾರ್ಮಿಕರ ಕುಟುಂಬ ಸದಸ್ಯರಿಗೂ ಉಚಿತ ಬಿಎಂಟಿಸಿ ಪಾಸ್ ಕಾರ್ಮಿಕರ ಕುಟುಂಬ ಸದಸ್ಯರಿಗೂ ಉಚಿತ ಬಿಎಂಟಿಸಿ ಪಾಸ್

Hubballi Dharwad BRTS Price Hike

ಇದಲ್ಲದೇ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ "ದರ ಹೆಚ್ಚಾಗಿದೆ ಸಹಕರಿಸಿ" ಅಂತ ಲೇಬಲ್ ಹಚ್ಚಲಾಗಿದ್ದು, ಮುಂಜಾನೆ 10.00 ಗಂಟೆ ಆದರೂ ಕೇವಲ 2 ಕೌಟರ್ ಗಳಲ್ಲಿ ಟಿಕೆಟ್ ವಿತರಿಸಲಾಗುತ್ತಿದೆ. ಇದರಿಂದ ಸರತಿ ಸಾಲಿನಲ್ಲಿ ನಿಂತು ಸಾಕಷ್ಟು ಸಮಯವನ್ನು ಟಿಕೆಟ್ ಪಡೆಯುವದರಲ್ಲೇ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ.

English summary
Hubbali - Dharwad BRTS has doubled its ticket prices,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X