ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಿನ್ನಿಸ್ ದಾಖಲೆ ಪುಟ ಸೇರಿದ ಹುಬ್ಬಳ್ಳಿಯ ಬೈಸಿಕಲ್ ಕ್ಲಬ್

|
Google Oneindia Kannada News

ಹುಬ್ಬಳ್ಳಿ, ಜನವರಿ 27 : ಹುಬ್ಬಳ್ಳಿಯಲ್ಲಿ ಆಯೋಜನೆ ಮಾಡಲಾಗಿದ್ದ ಸೈಕ್ಲೋತ್ಸವ ಗಿನ್ನಿಸ್ ದಾಖಲೆಯ ಪುಟ ಸೇರಿದೆ. ವಿ.ಆರ್.ಎಲ್.ಸಮೂಹ ಸಂಸ್ಥೆ ಸಹಯೋಗದೊಂದಿಗೆ ಹುಬ್ಬಳ್ಳಿಯ ಬೈಸಿಕಲ್ ಕ್ಲಬ್ ಸೈಕ್ಲೋತ್ಸವ ಆಯೋಜನೆ ಮಾಡಲಾಗಿತ್ತು.

ಶನಿವಾರ ವಿ.ಆರ್.ಎಲ್. ಸಮೂಹ ಸಂಸ್ಥೆಯ ಎಂ.ಡಿ. ಆನಂದ ಸಂಕೇಶ್ವರ ಅವರು ಸೈಕ್ಲೋತ್ಸವಕ್ಕೆ ಚಾಲನೆ ನೀಡಿದರು. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉಪಸ್ಥಿತರಿದ್ದರು.

ಭಾರತ ಸೇರಿದಂತೆ 80 ದೇಶ ಸೈಕಲ್ ಮೇಲೆ ಸುತ್ತಿರುವ 71ರ 'ಯುವಕ'!ಭಾರತ ಸೇರಿದಂತೆ 80 ದೇಶ ಸೈಕಲ್ ಮೇಲೆ ಸುತ್ತಿರುವ 71ರ 'ಯುವಕ'!

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸೈಕ್ಲೋತ್ಸವದಲ್ಲಿ 1186 ಜನರು 3.2 ಕಿ.ಮೀ.ವರೆಗೆ ಸೈಕಲ್ ಓಡಿಸುವ ಮೂಲಕ ದಾಖಲೆ ಮಾಡಿದ್ದರು. ಶನಿವಾರ ಹುಬ್ಬಳ್ಳಿಯಲ್ಲಿ ನಡೆದ ಸೈಕ್ಲೋತ್ಸವದಲ್ಲಿ 2000ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು 4 ಕಿ.ಮೀ. ಸೈಕಲ್ ಓಡಿಸುವ ಮೂಲಕ ಈ ದಾಖಲೆಯನ್ನು ಮುರಿದರು.

Hubballi bicycle club awarded Guinness World record

ಗಿನ್ನಿಸ್ ದಾಖಲೆ ನಿರ್ಮಿಸಲು ಸೈಕ್ಲಿಸ್ಟ್‌ಗಳು ಮೊದಲನೇ ಪ್ರಯತ್ನದಲ್ಲಿ ವಿಫಲರಾದರು. 2ನೇ ಪ್ರಯತ್ನದಲ್ಲಿ ಕುಸುಗಲ್ ಗ್ರಾಮದಿಂದ ಆರಂಭವಾದ ಯಾತ್ರೆ ಆಕ್ಸ್‌ಫರ್ಡ್‌ ಕಾಲೇಜ್‌ವರೆಗೂ ಯಶಸ್ವಿಯಾಗಿ ನಡೆಯಿತು.

ಸಿದ್ಧ ಸೇವೆ: ಬಿಎಂಟಿಸಿ ಬಸ್ ನಿಲ್ದಾಣಗಳಲ್ಲೂ ಬಾಡಿಗೆ ಬೈಕ್ಸಿದ್ಧ ಸೇವೆ: ಬಿಎಂಟಿಸಿ ಬಸ್ ನಿಲ್ದಾಣಗಳಲ್ಲೂ ಬಾಡಿಗೆ ಬೈಕ್

Hubballi bicycle club awarded Guinness World record

ಗಿನ್ನಿಸ್ ಸಂಸ್ಥೆಯಿಂದ ಲಂಡನ್ ಮೂಲದ ಸ್ವಪ್ನಿಲ್ ಡಂಗ್ರೀಕರ್ ಅವರು ಸೈಕ್ಲೋತ್ಸವವನ್ನು ವೀಕ್ಷಿಸಿ ಸ್ಥಳದಲ್ಲಿಯೇ ತೀರ್ಪನ್ನು ಪ್ರಕಟಿಸಿದರು.

ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಇಂತಹದ್ದೊಂದು ವಿಶಿಷ್ಟ ಸಾಧನೆ ಮಾಡಿದೆ. 15 ವರ್ಷ ಮೇಲ್ಪಟ್ಟು 60 ವರ್ಷದವರೆಗಿನ ಸೈಕ್ಲಿಸ್ಟ್‌ಗಳು ಗಿನ್ನಿಸ್ ದಾಖಲೆಯಲ್ಲಿ ಪಾಲ್ಗೊಂಡರು.

English summary
Hubballi bicycle club awarded Guinness World record on January 26, 2019. More than 2000 cyclist traveled 4 km and created the Guinness record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X