ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.5ರಿಂದ ಹುಬ್ಬಳ್ಳಿ-ಗೋವಾ ಬಸ್ ಸೇವೆ; ವೇಳಾಪಟ್ಟಿ

|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 04: ಲಾಕ್ ಡೌನ್ ಘೋಷಣೆ ಬಳಿಕ ಸ್ಥಗಿತಗೊಂಡಿದ್ದ ಹುಬ್ಬಳ್ಳಿ-ಗೋವಾ ಬಸ್ ಸೇವೆಯನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶನಿವಾರದಿಂದ ಆರಂಭಿಸಲಿದೆ. ಉಭಯ ರಾಜ್ಯಗಳ ಪ್ರತಿದಿನ ಹಲವಾರು ಜನರು ಸಂಚಾರ ನಡೆಸುತ್ತಾರೆ.

ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಗೋವಾಕ್ಕೆ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮೊದಲ ಹಂತದಲ್ಲಿ ಪಣಜಿಗೆ 4 (3ವೇಗಧೂತ, 1 ರಾಜಹಂಸ), ವಾಸ್ಕೋ ಮತ್ತು ಮಡಗಾಂವ್‌ಗೆ ತಲಾ ಒಂದು ಬಸ್ ಸಂಚಾರ ನಡೆಸಲಿದೆ.

Recommended Video

Malingaರನ್ನು ಮಿಸ್ ಮಾಡಿಕೊಂಡ Mumbai Indians | Oneindia Kannada

 ಗೋವಾ ಗಡಿಗಳು ಓಪನ್; ಇನ್ನು ಗೋವಾಗೆ ಹೋಗಲು ಯಾವುದೇ ನಿರ್ಬಂಧವಿಲ್ಲ ಗೋವಾ ಗಡಿಗಳು ಓಪನ್; ಇನ್ನು ಗೋವಾಗೆ ಹೋಗಲು ಯಾವುದೇ ನಿರ್ಬಂಧವಿಲ್ಲ

ಲಾಕ್‌ ಡೌನ್‌ಗೆ ಮೊದಲು ಹುಬ್ಬಳ್ಳಿಯಿಂದ ಪಣಜಿಗೆ 1 ರಾಜಹಂಸ, 8 ವೇಗಧೂತ ಬಸ್ ಸಂಚಾರ ನಡೆಸುತ್ತಿತ್ತು. ವಾಸ್ಕೋ ಮತ್ತು ಮಡಗಾಂವ್‌ಗೆ ಒಂದು ಬಸ್ ಸೇರಿ ಒಟ್ಟು 11 ಬಸ್‌ಗಳು ಸಂಚಾರ ನಡೆಸುತ್ತಿದ್ದವು.

ಶುಕ್ರವಾರದಿಂದ ಗೋವಾಕ್ಕೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಶುಕ್ರವಾರದಿಂದ ಗೋವಾಕ್ಕೆ ಕೆಎಸ್ಆರ್‌ಟಿಸಿ ಬಸ್ ಸಂಚಾರ

Hubballi And Goa Bus Service From September 5

ವೇಳಾಪಟ್ಟಿ: ಪಣಜಿಗೆ ಸಂಚಾರ ನಡೆಸುವ ರಾಜಹಂಸ ಬಸ್ ಬೆಳಗ್ಗೆ 8 ಗಂಟೆಗೆ ಹೊರಡಲಿದೆ. ವೇಗಧೂತ ಬಸ್‌ಗಳು ಬೆಳಗ್ಗೆ 8.30, 10.30 ಮತ್ತು ರಾತ್ರಿ 11.45ಕ್ಕೆ ಹುಬ್ಬಳ್ಳಿಯಿಂದ ಹೊರಡಲಿವೆ.

ಹುಬ್ಬಳ್ಳಿಗೆ ಬಂಪರ್ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ ಹುಬ್ಬಳ್ಳಿಗೆ ಬಂಪರ್ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ

ಪಣಜಿಯಿಂದ ಹುಬ್ಬಳ್ಳಿಗೆ ಬರುವ ರಾಜಹಂಸ ಬಸ್ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ವೇಗಧೂತ ಬಸ್ ಬೆಳಗ್ಗೆ 10.30, ಮಧ್ಯಾಹ್ನ 3 ಗಂಟೆ ಮತ್ತು ಸಂಜೆ 5.15ಕ್ಕೆ ಹೊರಡಲಿವೆ. ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಬಸ್ ಸಂಚಾರ ನಡೆಸಲಿದೆ.

ಅಂಕೋಲಾ ಮಾರ್ಗವಾಗಿ ಸಂಚಾರ : ಮಡಗಾಂವ್‌ಗೆ ಹೋಗುವ ಬಸ್ ಬೆಳಗ್ಗೆ 8.30ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದೆ. ಕಲಘಟಗಿ, ಯಲ್ಲಾಪುರ, ಅಂಕೋಲಾ, ಕಾರವಾರ, ಸದಾಶಿವಗಢ, ಕಾಣಕೋಣ ಮಾರ್ಗವಾಗಿ ಸಂಚಾರ ನಡೆಸಲಿದ್ದು, 2.30ಕ್ಕೆ ಮಡಗಾಂವ್ ತಲುಪಲಿದೆ. ಮಧ್ಯಾಹ್ನ 3ಕ್ಕೆ ಮಡಗಾಂವ್‌ನಿಂದ ಹೊರಡುವ ಬಸ್ ರಾತ್ರಿ 9ಕ್ಕೆ ಹುಬ್ಬಳ್ಳಿ ತಲುಪಲಿದೆ.

ವಾಸ್ಕೋಗೆ ಹೋಗುವ ಬಸ್ ಹುಬ್ಬಳ್ಳಿಯಿಂದ ರಾತ್ರಿ 12.30ಕ್ಕೆ ಹೊರಡಲಿದೆ. ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗದಲ್ಲಿ ಸಂಚಾರ ನಡೆಸಲಿದ್ದು ಬೆಳಗ್ಗೆ 6ಕ್ಕೆ ವಾಸ್ಕೋ ತಲುಪಲಿದೆ. ವಾಸ್ಕೋದಿಂದ ಮಧ್ಯಾಹ್ನ 1.30ಕ್ಕೆ ಹೊರಡುವ ಬಸ್ ಹುಬ್ಬಳ್ಳಿಗೆ ಸಂಜೆ 7.30ಕ್ಕೆ ಆಗಮಿಸಲಿದೆ.

English summary
The North Western Karnataka Road Transport Corporation (NWKRTC) said that bus service between Hubballi and Goa will resume from September 5, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X