ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಹಕರಿಗೆ ಸಿಹಿಸುದ್ದಿ ಕೊಟ್ಟ ಹುಬ್ಬಳ್ಳಿ ಹೋಟೆಲ್ ಉದ್ಯಮಿಗಳು!

|
Google Oneindia Kannada News

ಹುಬ್ಬಳ್ಳಿ, ಜೂನ್ 1: ಕೆಲವು ದಿನಗಳಿಂದ 10 ರೂ. ಮತ್ತು 20 ರೂ. ಮುಖಬೆಲೆಯ ನಾಣ್ಯಗಳನ್ನು ತೆಗೆದುಕೊಳ್ಳಲು ಅಂಗಡಿ ಮಾಲೀಕರು ತಿರಸ್ಕರಿಸುತ್ತಿದ್ದರು. ಆದರೆ ಹುಬ್ಬಳ್ಳಿಯ ಹೋಟೆಲ್ ವರ್ತಕರು ಆ ಆತಂಕವನ್ನು ಇಲ್ಲವಾಗಿಸಿದ್ದಾರೆ. 10 ಮತ್ತು 20 ರೂ. ಮುಖಬೆಲೆಯ ನಾಣ್ಯಗಳನ್ನು ಸ್ವೀಕರಿಸಲಾಗುವುದು ಎಂದು ಘೋಷಿಸಿದ್ದಾರೆ.

10 ರೂ. ನಾಣ್ಯಗಳು ಬಿಡುಗಡೆಯಾದ ಹೊಸದರಲ್ಲಿ ಚಲಾವಣೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಮಾರುಕಟ್ಟೆಗೆ ಹೋದಾಗ ಕೆಲವು ಅಂಗಡಿಯವರು ನಾಣ್ಯವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರು. 10. ರೂಗಳ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿದ್ದರಿಂದ, ಗ್ರಾಹಕರಿಂದ ನಾಣ್ಯ ಸ್ವೀಕಾರ ಮಾಡಲು ನಿರಾಕರಿಸುತ್ತಿದ್ದರು.

ನಕಲಿ ನೋಟು ಸಂಖ್ಯೆ ಭಾರೀ ಹೆಚ್ಚಳ: ಆರ್‌ಬಿಐ ವರದಿನಕಲಿ ನೋಟು ಸಂಖ್ಯೆ ಭಾರೀ ಹೆಚ್ಚಳ: ಆರ್‌ಬಿಐ ವರದಿ

ಈ ಗೊಂದಲ್ಲಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿತ್ತು. 10 ರೂ. ಮುಖಬೆಲೆಯ ನಾಣ್ಯಗಳು ಸಂಪೂರ್ಣ ಮಾನ್ಯವಾಗಿದೆ, ಅವು ನಕಲಿಯಲ್ಲ. 10 ರೂಪಾಯಿ ನಾಣ್ಯಗಳನ್ನು ಎಲ್ಲಾ ರೀತಿಯ ವಹಿವಾಟುಗಳಿಗೆ ಬಳಸಬಹುದು ಎಂದು ಕೇಂದ್ರ ಹಣಕಾಸು ಸಚಿವ ಪಂಕಜ್ ಚೌಧರಿ ಹೇಳಿಕೆ ನೀಡಿದ್ದರು.

Hotel Owners At Hubballi Will Allow 10 And 20 Rs Coins

ಹೋಟೆಲ್ ಉದ್ಯಮಿಗಳು; 10 ರೂಪಾಯಿ ನಾಣ್ಯಗಳ ಚಲಾವಣೆ ಮೇಲೆ ಇದ್ದ ಆತಂಕವನ್ನು ಹುಬ್ಬಳ್ಳಿ ಹೋಟೆಲ್ ಉದ್ಯಮಿಗಳು ದೂರ ಮಾಡಿದ್ದಾರೆ. 10 ಮತ್ತು 20 ರೂಪಾಯಿಗಳ ನಾಣ್ಯವನ್ನು ಸ್ವೀಕರಿಸುತ್ತೇವೆ ಎಂದು ಹೋಟೆಲ್ ಮುಂದೆ ಫಲಕಗಳನ್ನು ಹಾಕಿದ್ದಾರೆ.

ಈಗಾಗಲೇ ಹುಬ್ಬಳ್ಳಿಯ ನೀಲಿಜನ್‌ ರಸ್ತೆಯಲ್ಲಿರುವ ಬಹುತೇಕ ಹೋಟೆಲ್‌ಗಳಲ್ಲಿ 10, 20 ರೂಪಾಯಿ ಮುಖಬೆಲೆಯ ನಾಣ್ಯಗಳನ್ನು ಸ್ವೀಕರಿಸುವ ಮೂಲಕ ನಾಣ್ಯಗಳ ಚಲಾವಣೆಗೆ ನಾಂದಿ ಹಾಡಿದ್ದಾರೆ.

ಖಾತೆಗೆ ಬಂತು ಕೋಟಿ ಕೋಟಿ ಹಣ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಶಾಕ್!ಖಾತೆಗೆ ಬಂತು ಕೋಟಿ ಕೋಟಿ ಹಣ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಶಾಕ್!

Hotel Owners At Hubballi Will Allow 10 And 20 Rs Coins

ಬೇಡಿಕೆಯಿಲ್ಲದಿದ್ದರೂ ಬರುತ್ತಿರುವ ನಾಣ್ಯ; 10 ರೂ.ಗಳ ನಾಣ್ಯಕ್ಕೆ ಬೇಡಿಕೆಯಿಲ್ಲ. ಬ್ಯಾಂಕ್‌ಗಳಿಗೆ ಬರುವ ಗ್ರಾಹಕರು 10 ರೂ. ನೋಟುಗಳನ್ನು ಕೇಳುತ್ತಾರೆ. ಆದರೆ ನಾಣ್ಯಗಳನ್ನು ಯಾರು ಸ್ವೀಕರಿಸುವುದಿಲ್ಲ ಎಂಬ ಮಾತು ಬ್ಯಾಂಕ್‌ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಕೆಲವು ಬ್ಯಾಂಕ್‌ಗಳಲ್ಲಿ ಮೂಟೆಗಟ್ಟಲೇ 10 ರೂ. ನಾಣ್ಯಗಳು ಚಲಾವಣೆಯಾಗದೆ ಉಳಿದುಕೊಂಡಿವೆ. ಆದರೂ ನಾಣ್ಯಗಳು ಬ್ಯಾಂಕ್‌ಗಳಿಗೆ ಬರುತ್ತಲೇ ಇವೆ. ಕಾಯಿನ್‌ ಮೇಳ ಮಾಡಿ 10 ರೂ ನಾಣ್ಯದ ವಿತರಣೆಗೆ ಯತ್ನಿಸಿದರೂ, ಜನರಲ್ಲಿ ನಾಣ್ಯದ ಮಾನ್ಯತೆ ಮೇಲೆ ಸಂಶಯ ಇರುವುದರಿಂದ ಆಸಕ್ತಿ ತೋರುತ್ತಿಲ್ಲ.

English summary
Rupee 10 coins are legal tender. Hubballi hotel owners association decided to receive 10 and 20 rupees coins from customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X