ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀರಾಮುಲು, ಸುರೇಶ ಬಾಬು ವಿರುದ್ಧ ಜನಾಂದೋಲನಕ್ಕೆ ಹಿರೇಮಠ್ ಆಗ್ರಹ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 14: ‌ಸಂಸದ ಶ್ರೀರಾಮುಲು ಮತ್ತು ಶಾಸಕ ಸುರೇಶ್ ಬಾಬು ವಿರುದ್ಧ ಜನಾಂದೋಲನ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ‌ ಅಧ್ಯಕ್ಷ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರಿಗೆ ಇವರಿಬ್ಬರು ಲಂಚದ ಆಮಿಷ ಒಡ್ಡಿದ್ದರು. ಹಾಗಾಗಿ ಇವರ ಉಮೇದುವಾರಿಕೆಯನ್ನು ರದ್ದುಪಡಿಸಬೇಕು ಎಂದು ಅವರು ಚುನಾವಣಾ ‌ಆಯೋಗವನ್ನು ಒತ್ತಾಯಿಸಿದ್ದಾರೆ.

ಬೇಲ್ ಗಾಗಿ ಡೀಲ್ ವಿಡಿಯೋಗೂ ನನಗೂ ಸಂಬಂಧವಿಲ್ಲ : ಶ್ರೀರಾಮುಲುಬೇಲ್ ಗಾಗಿ ಡೀಲ್ ವಿಡಿಯೋಗೂ ನನಗೂ ಸಂಬಂಧವಿಲ್ಲ : ಶ್ರೀರಾಮುಲು

ಶ್ರೀರಾಮುಲು ಮತ್ತು ಸುರೇಶ್ ಬಾಬು ಮೇಲೆ ಗಂಭೀರ ಪ್ರಕರಣಗಳಿವೆ. "ಇವರು ಮುಖ್ಯ ನ್ಯಾಯಮೂರ್ತಿಯವರಿಗೆ ರೂಪಾಯಿ 160 ಕೋಟಿ ಮೊತ್ತದ ಆಮಿಷ ‌ನೀಡಲು‌ ಮುಂದಾಗಿದ್ದರು," ಎಂದು ಅವರು ಕಿಡಿಕಾರಿದ್ದಾರೆ.

Hiremath wants election commission to reject Sriramulu & Suresh Babus nomination

ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಇಂಥವರ ವಿರುದ್ಧ ‌ಜನಾಂದೋಲನ ಬೆಳೆಯಬೇಕು ಎಂದು ಹಿರೇಮಠ್ ಆಗ್ರಹಿಸಿದ್ದಾರೆ.

English summary
Karnataka assembly elections 2018: SR Hiremath, president of Samaj Parivarthan Samudaya, demanded election commission to reject nominations of MP B Sriramulu and MLA Suresh Babu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X