ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದು ಸಂಘಟನೆಗಳ ಪಟ್ಟು: 3 ದಿನಗಳ ಗಡುವು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್‌ 17: ನಗರದ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಮೂರು ದಿನಗಳ ಗಡುವು ನೀಡಿದ ಹಿಂದು ಪರ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಪ್ರಸ್ತುತ ವರ್ಷ ಹಬ್ಬ ಆಚರಣೆಗೆ ಮಹಾನಗರ ಪಾಲಿಕೆ ಒಪ್ಪಿಗೆ ನೀಡುವಂತೆ ಪಾಲಿಕೆ ಆಯುಕ್ತರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದರು. ಈ ಮೂಲಕ ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯಲು ಆಗದು ಎಂಬ ಸ್ಪಷ್ಟವಾದ ಸಂದೇಶ ರವಾನೆ ಮಾಡಿದರು.

ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಒಮ್ಮತದ ಆಭಿಪ್ರಾಯಕ್ಕೆ ಬಂದಿದ್ದು, ಇಂದಿನ ಮನವಿ ಪ್ರತಿಯನ್ನು ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಡಲು ಮೂರು ದಿನ ಗಡುವು ನೀಡಿದರು. ‌

ಗಣೇಶನ ಜೊತೆ 'ಅಪ್ಪು' ಕರೆತರುತ್ತಿದ್ದಾರೆ ಹುಬ್ಬಳ್ಳಿಯ ಕಲಾವಿದರು!ಗಣೇಶನ ಜೊತೆ 'ಅಪ್ಪು' ಕರೆತರುತ್ತಿದ್ದಾರೆ ಹುಬ್ಬಳ್ಳಿಯ ಕಲಾವಿದರು!

ಈ ಹಿಂದೆ ನಗರದ ಮೂರು ಸಾವಿರಮಠದ ಸಭಾಭವನದಲ್ಲಿ ನಡೆದ ವಿವಿಧ ಹಿಂದೂಪರ ಸಂಘಟನೆ ಮತ್ತು ಗಣೇಶೋತ್ಸವ ಸಮಿತಿ ಸಭೆಯಲ್ಲಿ ತೆಗೆದುಕೊಂಡ ಒಮ್ಮತದ ನಿರ್ಣಯಗಳಿಗೆ ಬದ್ಧವಾಗುವಂತೆ ಸಹ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ರಾಣಿ ಚೆನ್ನಮ್ಮ ಗಜಾನನೋತ್ಸವ ಸಮಿತಿಯ ಮುಖ್ಯಸ್ಥ ಹನುಮಂತ ನಿರಂಜನ ಹೇಳಿದರು.

ಗಜಾನನ ಉತ್ಸವ ಸಮಿತಿ ಮುಖಂಡರು, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ರಾಣಿ ಚನ್ನಮ್ಮ ಗಜಾನನೋತ್ಸವ ಸಮಿತಿ ಸಂಘಟನೆಗಳ ಮುಖಂಡರ ಕಾರ್ಯಕರ್ತರು ಪಾಲ್ಗೊಂಡು ಸಂಘಟನೆಯನ್ನು ಬಲಿಷ್ಠಗೊಳಿಸಿ, ಒಗ್ಗಟ್ಟಾಗಿ ಹೋರಾಡಬೇಕು. ಎಷ್ಟೇ ಕಷ್ಟ ಎದುರಾದರೂ ಇಟ್ಟ ಹೆಜ್ಜೆ ಹಿಂದೆ ಇಡಬಾರದು. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದೇ ನಮ್ಮ ಅಂತಿಮ ಧ್ಯೇಯವಾಗಿರಬೇಕು ಎಂದು ಒಮ್ಮತ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ಹನುಮಂತ ಮಾಹಿತಿ ನೀಡಿದರು.

 ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಏಕಿಲ್ಲ?

ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಏಕಿಲ್ಲ?

ಮುಸ್ಲಿಂ ಸಮುದಾಯದವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದಾದರೆ, ನಮಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಯಾಕೆ ಅವಕಾಶವಿಲ್ಲ. ಪಾಲಿಕೆ ದ್ವಂದ್ವನೀತಿ ಅನುಸರಿಸುವುದು ಬಿಡಬೇಕು. ಈದ್ಗಾ ಮೈದಾನದಲ್ಲಿಯೇ ರಾಣಿ ಚೆನ್ನಮ್ಮ ಗಜಾನನೋತ್ಸವ ಸಮಿತಿ ರಚನೆಯಾಗಿದೆ. ಹೋರಾಟದ ಮನೋಭಾವದ ವ್ಯಕ್ತಿಗಳು ನಮ್ಮ ಜೊತೆ ಸೇರಿಕೊಳ್ಳಬಹುದು ಎಂದು ಹೋರಾಟಗಾರರು ತಿಳಿಸಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ; ಪ್ರಹ್ಲಾದ್‌ ಜೋಶಿ ಹೇಳಿದ್ದೇನು?ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ; ಪ್ರಹ್ಲಾದ್‌ ಜೋಶಿ ಹೇಳಿದ್ದೇನು?

 ವಿವಾದ ಬೇಡ ಎಂದರೆ ಗಣೇಶ ಉತ್ಸವಕ್ಕೆ ಅವಕಾಶ ಕೊಡಲಿ

ವಿವಾದ ಬೇಡ ಎಂದರೆ ಗಣೇಶ ಉತ್ಸವಕ್ಕೆ ಅವಕಾಶ ಕೊಡಲಿ

ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ನಾವು ಮುಂದಾಗುತ್ತಿಲ್ಲ. ವಿವಾದ ಬೇಡ ಎನ್ನುವುದಾದರೆ ಮುಸ್ಲಿಮರು ನಮ್ಮ ಜೊತೆ ಸೇರಿ, ಸೌಹಾರ್ದಕ್ಕೆ ನಾಂದಿಯಾಗಲಿ. ಗಣೇಶ ಉತ್ಸವ ಆಚರಿಸಲು ಅವಕಾಶ ನೀಡಿ ಎಂದು ಪಾಲಿಕೆ ಆಯುಕ್ತರಿಗೆ ಅವರಾಗಿಯೇ ಪ್ರಸ್ತಾವ ಸಲ್ಲಿಸಲಿ. ಅವರ ಈ ನಡೆ ರಾಜ್ಯಕ್ಕೆ ಮಾದರಿಯಾಗಲಿ. ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಭಾವಿಸಿದರೆ, ಮುಂದಿನ ಯಾವುದೇ ಹೋರಾಟಕ್ಕೂ ನಾವು ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.

 ಜನಪ್ರತಿನಿಧಿಗಳಿಗೆ ಒತ್ತಡ ಏರಲು ಕರೆ

ಜನಪ್ರತಿನಿಧಿಗಳಿಗೆ ಒತ್ತಡ ಏರಲು ಕರೆ

ಹುಬ್ಬಳ್ಳಿ-ಧಾರವಾಡ ಜನತೆ ಸೇರಿಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು. ಪಾಲಿಕೆ ಅಧಿಕಾರಿಗಳಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಸಚಿವರುಗಳಿಗೆ ಒತ್ತಡ ಹೇರುವ ಕಾರ್ಯ ನಡೆಯಬೇಕು. ನಾವ್ಯಾರು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಅದಕ್ಕೆ ಪಾಲಿಕೆ ಆಯುಕ್ತರು ಸಹ ಅವಕಾಶ ನೀಡದೆ ಗಣೇಶ ಉತ್ಸವ ಆಚರಿಸಲು ಅನುಮತಿ ನೀಡಬೇಕು ಎಂದು ಹಿಂದೂ ಕಾರ್ಯಕರ್ತ ಸಂತೋಷ ಕಟಾರೆ ಒತ್ತಾಯಿಸಿದರು.

 ಈದ್ಗಾ ಮೈದಾನ ರಾಜಕೀಯ ಹೋರಾಟಕ್ಕೆ ಬಳಕೆ

ಈದ್ಗಾ ಮೈದಾನ ರಾಜಕೀಯ ಹೋರಾಟಕ್ಕೆ ಬಳಕೆ

ಈದ್ಗಾ ಮೈದಾನಕ್ಕೆ ಮುಸ್ಲಿಮರಿಗೆ ಇರುವಷ್ಟೇ ಅಧಿಕಾರ ಹಿಂದೂಗಳಿಗೂ ಇದೆ. ಕೆಲವರು ಈ ಮೈದಾನವನ್ನು ರಾಜಕೀಯ ಹೋರಾಟಕ್ಕೆ ಬಳಕೆ ಮಾಡಿಕೊಂಡರು. ಈಗ ನಮ್ಮ ಮನೆಯಲ್ಲಿ ನಾವೇ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಗಣೇಶಮೂರ್ತಿ ಪ್ರತಿಷ್ಠಾಪಿಸುವವರೆಗೂ ನಾವು ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ಹೋರಾಟದ ರೂಪರೇಷೆ ಸಿದ್ಧಪಡಿಸಬೇಕು. ಕಾರ್ಯಕರ್ತರ ಪಡೆ ಮತ್ತಷ್ಟು ದೊಡ್ಡದಾಗಬೇಕು. ಕಾನೂನಿನ ಚೌಕಟ್ಟಿನಲ್ಲಿ ಹೋರಾಡಿದರೆ ಭಯಪಡುವ ಅಗತ್ಯವಿಲ್ಲ ಎಂದು ಹಿಂದು ಪರ ಹೋರಾಟಗಾರರು ತಿಳಿಸಿದ್ದಾರೆ.

Recommended Video

Independence Day ಪ್ರಯುಕ್ತ ವಿದೇಶಿ ಕ್ರಿಕೆಟಿಗರ ವಿಶೇಷ ಉಡುಗೊರೆ | *Cricket | Oneindia Kannada

English summary
Hindu Groups including Srirama sene, Gajanana community on Tuesday demand to celebrate Ganesha festival at idgah ground in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X