• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದುಬಾರಿ ವಾಚ್ ಎಗರಿಸಲು ಸೂಟುಬೂಟಲ್ಲಿ ಬಂದ ಹೈಟೆಕ್ ಕಳ್ಳರು

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ಜನವರಿ 10: ಹುಬ್ಬಳ್ಳಿಯಲ್ಲಿ ಹೈಟೆಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಸೂಟು ಬೂಟು ಧರಿಸಿಕೊಂಡು ಬಂದು ದುಬಾರಿ ಬೆಲೆಯ ವಾಚ್ ‌ಗಳನ್ನ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಶ್ರೀಮಂತ ಗ್ರಾಹಕರ ಸೋಗಿನಲ್ಲಿ ಬಂದು rado ವಾಚುಗಳನ್ನ ಕಳ್ಳತನ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಹುಷಾರ್! ಮೈಸೂರಿನಲ್ಲೀಗ ಪೆಟ್ರೋಲ್ ಕಳ್ಳರ ಹಾವಳಿ

ಹುಬ್ಬಳ್ಳಿಯ ವೇಮರೆಡ್ಡಿ ಪಾಟೀಲ ಎನ್ನುವವರ ಹಾರಿಜಾನ್ ವಾಚ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. 79,550 ರೂ. ಬೆಲೆಯ ರಾಡೋ ವಾಚ್ ಹಾಗೂ 7995 ರೂ. ಬೆಲೆಯ ಟೈಮಾಕ್ಸ್ ಸ್ಮಾರ್ಟ್ ವಾಚ್ ಅನ್ನು ಎಗರಿಸಿದ್ದಾರೆ. ಜನವರಿ 7ರಂದು ರಾತ್ರಿ ಅಂಗಡಿಗೆ ಬಂದ ಮಹಿಳೆ ಹಾಗೂ ಮೂವರು ಪುರುಷರ ಪೈಕಿ ಒಬ್ಬ ವ್ಯಕ್ತಿ 'ನಾನು ದುಬೈನಿಂದ ಬಂದಿದ್ದೇನೆ. ದುಬಾರಿ ಬೆಲೆಯ ವಾಚ್ ತೋರಿಸಿ' ಎಂದು ಸಿಬ್ಬಂದಿಗೆ ಹೇಳಿದ್ದಾನೆ. ಬಳಿಕ ಮಾಲೀಕರ ಬಳಿ ತೆರಳಿ ತನ್ನಲ್ಲಿದ್ದ ಡಾಲರ್ ತೋರಿಸಿ, 'ಡಾಲರ್ ಬೆಲೆ ಈಗ ಎಷ್ಟಿದೆ ಚೆಕ್ ಮಾಡ್ತೀರಾ?' ಎಂದು ಹೇಳಿ ಗಮನ ಬೇರೆಡೆ ಸೆಳೆದು ವಾಚ್ ಅನ್ನು ಪ್ಯಾಂಟ್ ಜೇಬಿಗಿಳಿಸಿಕೊಂಡಿದ್ದಾನೆ.

ಮತ್ತೊಬ್ಬ ಟೈಮೆಕ್ಸ್ ಕೌಂಟರ್‌ನಲ್ಲಿ ಚಾಲಾಕಿತನದಿಂದ ವಾಚ್ ಕದ್ದಿದ್ದಾನೆ. ಅದಾದ ನಂತರ ಸುಮ್ಮನೆ ಅದೂ ಇದೂ ವಿಚಾರಿಸಿ ವಾಪಸಾಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ಅನುಮಾನಗೊಂಡು ಪ್ಯಾಕ್ ಚೆಕ್ ಮಾಡಿದಾಗ ವಾಚ್ ಕಳುವಾದ ವಿಷಯ ಗೊತ್ತಾಗಿದೆ.

ಜಸ್ಟ್ ಡಯಲ್ ಮಾಡಿ ಕಾರಿನೊಂದಿಗೆ ಪರಾರಿಯಾಗಿದ್ದ ವ್ಯಕ್ತಿ ಸೆರೆ

ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ: ಹೈ ಪ್ರೊಫೈಲ್ ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳವು ಮಾಡಿದ ಬಳಿಕ ಈ ಕಳ್ಳರ ಗ್ಯಾಂಗ್ ಮಾಲ್ ‌ನಲ್ಲಿ ಪಿಜ್ಜಾ ಖರೀದಿಸಿ, ಇತರ ಮಳಿಗೆಯಲ್ಲಿ ಓಡಾಡಿ ತೆರಳಿದೆ. ಆ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ, ಬೆಳ್ಳಿ, ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದ ಹಲವು ಪ್ರಕರಣಗಳು ಈ ಹಿಂದೆ ನಡೆದಿದ್ದವು. ಇದೀಗ ಬಿಜಿನೆಸ್ ಮೆನ್ ಗಳ ವೇಷದಲ್ಲಿ ಮಾಲ್ ‌ಗೆ ಬಂದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಘಟನೆ ಕುರಿತು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Thieves who dressed well came to watch shop and stolen expensive watches in hubballi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X