ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ಥ

|
Google Oneindia Kannada News

ಹುಬ್ಬಳ್ಳಿ, ಮೇ 20: ಹುಬ್ಬಳ್ಳಿ ತಾಲೂಕಿನಲ್ಲಿ ಸತತ ಎರಡು ದಿನದಿಂದ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ನಗರದ ಹಲವು ಮನೆಗಳಿಗೆ ನೀರು ಸೇರಿದೆ. ಉಣಕಲ್ ಕೆರೆ ಕೊಡಿ ಹರಿದ ಕಾರಣ ನಾಲಾ ಸುತ್ತಮುತ್ತ ಇರುವ ಮನೆಗಳಿಗೆ ನೀರು ಸೇರುವ ಆತಂಕ ಶುರುವಾಗಿದೆ.

ನಗರದ ರಸ್ತೆಗಳು ಜಲಾವೃತವಾಗಿ ಒಳಚರಂಡಿ ತುಂಬಿ ಹರಿಯುತ್ತಿವೆ. ಹಳೇ ಹುಬ್ಬಳ್ಳಿ ಗಣೇಶ ನಗರದ, ಆರ್‌ಜಿಎಸ್, ಉಣಕಲ್, ದೇವಿನಗರ, ಗೋಪನಕೊಪ್ಪ, ಬೆಂಗೇರಿ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ಸೇರಿ ಜನಸಾಮಾನ್ಯರಿಗೆ ಸಮಸ್ಯೆ ಎದುರಾಗಿದೆ.

ನೀರು ಸೇರಿದ್ದರಿಂದ ಜನರು ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಸಮಸ್ಯೆ ಕುರಿತು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು ಸಹ ಅಧಿಕಾರಿಗಳು ಸ್ಪಂದಿಸಿಲ್ಲ. ಇನ್ನೂ ಗ್ರಾಮೀಣ ಭಾಗದಲ್ಲಿ ಅತಿಯಾದ ಮಳೆಯಿಂದ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಹೊಲಗಳಲ್ಲಿ ನೀರು ನಿಂತಿರುವ ದೃಶ್ಯಗಳು ಕಂಡು ಬಂದವು. ಹಲವು ಮಣ್ಣಿನ ಮನೆಗಳು ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಜಲಾವೃತವಾಗಿದೆ.

Heavy Rain In Hubballi Water Logging In House

ವಯೋವೃದ್ಧರ ಕಣ್ಣೀರು; ಕಳೆದ ವಾರದಿಂದ ಹಿಂದೆ ಸುರಿದ ಮಳೆಯಿಂದಾಗಿ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮನೆಯೊಂದು ಕುಸಿದಿರುವ ಘಟನೆ ಹುಬ್ಬಳ್ಳಿಯ ರಾಯಾಪೂರದಲ್ಲಿ ನಡೆದಿದೆ. ಮನೆಯಲ್ಲಿ ಮಲಗಿದ ಯುವತಿಯೊಬ್ಬಳಿಗೆ ಗಾಯಗೊಂಡಿದ್ದು, ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳಿಯಲ್ಲಿ ಸುರಿದ ಮಳೆಯಿಂದ ರಾಯಾಪೂರದಾ ಫಕೀರಪ್ಪ ಚಿಕ್ಕಣ್ಣವರ ಹಾಗೂ ನೀಲಮ್ಮ ಚಿಕ್ಕಣ್ಣ ಎಂಬುವವರ ಮನೆಗೆ ಹಾನಿಯಾಗಿದೆ. ಇದ್ದರಿಂದ ನೋಂದ ವೃದ್ಧರು ಕಣ್ಣೀರು ಹಾಕುತ್ತಿದ್ದಾರೆ. ಮನೆ ಚಾವಣಿ ಕುಸಿದುಬಿದ್ದು, ಮನೆಯಲ್ಲಿದ್ದ ವಸ್ತುಗಳು ಕೂಡ ಹಾನಿಯಾಗಿದೆ.

Heavy Rain In Hubballi Water Logging In House

ಹುಬ್ಬಳ್ಳಿಯಲ್ಲಿ ಬೃಹತ್, ಬಿರುಗಾಳಿ ಮಳೆಯಿಂದಾಗಿ ಹಲವೆಡೆ ಆತಂಕ ಶುರುವಾಗಿದೆ. ಎಲ್ಲಾ ಮನೆಗಳು ಜಲಾವೃತ್ತಗೊಂಡಿದ್ದು, ಕುಟುಂಬಗಳು ಪರದಾಡುತ್ತಿವೆ. ಮನೆಗೆ ನುಗ್ಗಿದ ನೀರನ್ನು ಎತ್ತಿ ಹೊರಗಡೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.

English summary
Pre-monsoon showers continued in Hubballi city. Rainfall lashed the city in the second day and rain water logging in house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X