ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಜಾಗದಲ್ಲಿ ಜಾಹೀರಾತು ಫಲಕಗಳ ದರ್ಬಾರ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್ 27 : ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ ಜಾಗ ಮತ್ತು ನಾಮಫಲಕಗಳ ಮೇಲೆ ಖಾಸಗಿ ಜಾಹಿರಾತು ಪಾಲಿಕೆ ಅಂಟಿಸಲು ನಿಷೇಧ ಮಾಡಿದ್ದರು,

ನಾಮ ಫಲಕ ಮೇಲೆ ಖಾಸಗಿ ಜಾಹಿರಾತುಗಳನ್ನು ರಾಜಾರೋಷವಾಗಿ ಅಂಟಿಸಲಾಗಿದ. ಇದರಿಂದ ಹುಬಳ್ಳಿ ನಗರಗಳ ಸೌಂದರ್ಯ ಹಾಳಾಗುತ್ತಿದ್ದು, ಅನಧಿಕೃತ ಜಾಹೀರಾತುಗಳಿಂದ ಪಾಲಿಕೆ ಆರ್ಥಿಕ ನಷ್ಟ ಸಹ ಆಗುತ್ತಿದೆ.

HDMC failed curb illigal advertisement boards

ಮಹಾನಗರ ಪಾಲಿಕೆ ಸಂಭಂದಿಸಿದಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎಲ್ಲಾ ನಾಮ ಫಲಕಗಳ ಮೇಲೆ ಹಚ್ಚಿರುವ ಖಾಸಗಿ ಜಾಹಿರಾತುಗಳಿಗೆ ಭ್ರೇಕ್ ಹಾಕಲು ಜಿಲ್ಲಾಡಳಿತ ಮತ್ತು ಪಾಲಿಕೆ ವಿಫಲವಾಗಿದೆ. ನಗರದ ಚೆನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್,ಡಾ.ಬಾಭಾಸಾಹೇಬ್ ಅಂಬೇಡ್ಕರ್ ಸರ್ಕಲ್, ದೇಸಾಯಿ ಸರ್ಕಲ್, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹೊಸೂರ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪರವಾನಿಗೆ ಇಲ್ಲದ ಜಾಹೀರಾತು ಫಲಕಗಳು ರಾರಾಜುಸುತ್ತಿವೆ.

ಪಾಲಿಕೆಗೆ ಕಣ್ಣು ಇದ್ದರು ಕಣ್ಣು ಮುಚ್ಚಿ ಕುಳಿತಿದ್ದು, ಅನಧೀಕೃತ ಫಲಕಗಳ ಜೊತೆ ಸರ್ಕಾರದ ನಾಮಫಲಕಳ ಬೋರ್ಡಗಳು ತುಕ್ಕು ಹಿಡಿದರು ಹೆಸರು ಅಳಿಸಿ ಹೋಗಿವೆ. ಪ್ರತಿ ವರ್ಷ ಬಜೆಟ್ನಲ್ಲಿ ಪಾಲಿಕೆ ಇದಕ್ಕೆ ಕೋಟ್ಯಾಂತರ ರೂ ವ್ಯಯ ಮಾಡಲಾಗುತ್ತಿದೆ. ಆದರೆ ಆ ಹಣ ಎಲ್ಲಿ ಹೋಯಿತು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನ ಜನಪ್ರತಿನಿಧಿಗಳು, ಶಾಸಕರು, ಪ್ರಭಾವಿ ವ್ಯಕ್ತಿಗಳು ಹಾಗೂ ದೊಡ್ಡ ದೊಡ್ಡ ವ್ಯಾಪಾರಸ್ಥರು ಇರುವ ಜಾಹೀರಾತುಗಳು ಎಗ್ಗಿಲ್ಲಿದೇ ಅಳವಡಿಸಲಾಗುತ್ತಿದೆ. ಈ ಹಿಂದೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಪಾಂಡುರಂಗ ರಾಣೆ ಅವರು ಪಾಲಿಕೆಯ ಮೇಯರ್ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ಅನಧಿಕೃತ ಫಲಕಗಳನ್ನು ತೆರವು ಮಾಡಿದ್ದರು. ಅದು ಕೇವಲ 15 ದಿನಗಳಿಗೆ ಮಾತ್ರ ಸೀಮಿತವಾಯಿತು.

HDMC failed curb illigal advertisement boards

ನಗರದಲ್ಲಿ ಅನಧಿಕೃತ ಜಾಹೀರಾತುಗಳು ಅಳವಡಿಸಲಾಗಿದೆ. ನಗರದಲ್ಲಿನ ಮಹಾನ್ ಪುರುಷರ ಹಾಗೂ ಸಾಹಿತಿಗಳ ಹೆಸರಿನ ವೃತ್ತಗಳು ಹಾಗೂ ಕೇಲವು ಬಡಾವಣೆಗಳಿಗೆ ಹೋಗುವ ಮಾರ್ಗ ಹೆಸರಿನ ಮೇಲೆ ಖಾಸಗಿ ಜಾಹಿರಾತು ಹಚ್ಚಿ ಹೆಸರುಗಳು ಮುಚ್ಚಿ ಹೋಗಿವೆ, ಸರ್ಕಾರಿ ಅಧಿಕಾರಿಗಳು ಕಛೇರಿ ಹೋಗುವಾಗ ಬರುವಾಗ ಕಣ್ಣಿಗೆ ಕಾಣುವಂತೆ ಜಾಹಿರಾತುಗಳು ಕಾಣಿಸುತ್ತಿದ್ದರೂ ಕಾರಣದವರಂತೆ ಕಣ್ ಮುಚ್ಚಿ ಕುಳಿತಿದ್ದಾರೆ,

ನಗರದಲ್ಲಿ ಖಾಸಗಿ ಕಂಪನಿಗಳು,ಶಿಕ್ಷಣ ಸಂಸ್ಥೆಗಳು, ಜಾತ್ರೆಗಳು, ಮನೆ ಬಾಡಿಗೆ, ಉದ್ಯೋಗ ಅವಕಾಶಗಳ ಇನ್ನು ಅನೇಕ ರೀತಿಯ ಜಾಹೀರಾತುಗಳು ಪಾಲಿಕೆ ನಾಮ ಫಲಕಗಳನ್ನು ಬಳಸಿಕೊಂಡು ಉಚಿತವಾಗಿ ಲಾಭ ಪಡೆದುಕೊಳ್ಳುತ್ತಿದ್ದರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಇತ್ತ ಕಡೆ ಗಮನ ಹರಿಸುತ್ತಿಲ್ಲ

HDMC failed curb illigal advertisement boards

ಕಾರ್ಯಕ್ರಮದಲ್ಲಿ ಕವಿ ಪ್ರೊ. ಜಿ.ಎಸ್‌ ಸಿದ್ದಲಿಂಗಯ್ಯ, ಸಿಟಿಜನ್ ಆಕ್ಷನ್ ಫೋರಂ ಸಂಸ್ಥಾಪಕ ಅಧ್ಯಕ್ಷ ಎನ್‌.ಎಸ್‌. ಮುಕುಂದ, ಲೇಖಕಿ ಉಷಾ ರಾಜಗೋಪಾಲನ್ ಪಾಲ್ಗೊಂಡಿದ್ದರು.

English summary
Hubballi Dharwad Muncipal corporation has failed to the illegal advertisement boards in twin cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X