ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ.ಕುಮಾರಸ್ವಾಮಿ ಅವರ ಬಾಡಿಗೆ ಮನೆ ಮಾರಾಟಕ್ಕಿದೆ!

By Gururaj
|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿಯವರ ಬಾಡಿಗೆ ಮನೆ ಮಾರಾಟಕ್ಕಿದೆ | Oneindia Kannada

ಹುಬ್ಬಳ್ಳಿ, ಆಗಸ್ಟ್ 01 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನೆ ಮಾರಾಟಕ್ಕಿದೆ. ಹೌದು, ಕುಮಾರಸ್ವಾಮಿ ಅವರ ಮನೆಯ ಮಾಲೀಕರು ಮನೆಯನ್ನು ಮಾರಾಟ ಮಾಡುವುದಾಗಿ ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ 'ಏಕದಂತ' ಹೆಸರಿನ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಈ ಮನೆ ಕಾಂಗ್ರೆಸ್ ಮುಖಂಡ ಬಸವರಾಜ ರೆಡ್ಡಿ ಅವರ ಸಹೋದರ ಸುರೇಶ ರಾಯರೆಡ್ಡಿ ಅವರಿಗೆ ಸೇರಿದ್ದು, ಈಗ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಕುಮಾರಸ್ವಾಮಿ-ಅನಿತಾ ದಂಪತಿಯಿಂದ ಹುಬ್ಬಳ್ಳಿಯಲ್ಲಿ ಗೃಹಪ್ರವೇಶಕುಮಾರಸ್ವಾಮಿ-ಅನಿತಾ ದಂಪತಿಯಿಂದ ಹುಬ್ಬಳ್ಳಿಯಲ್ಲಿ ಗೃಹಪ್ರವೇಶ

ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರು. 2016ರಲ್ಲಿ ಹೋಮ, ಸತ್ಯನಾರಾಯಣ ಪೂಜೆ ಮಾಡಿಸಿ, ಹಸುವನ್ನು ಮನೆಯೊಳಗೆ ತಂದು ಸಂಪ್ರದಾಯದಂತೆ ಗೃಹ ಪ್ರವೇಶ ಮಾಡಲಾಗಿತ್ತು. ವಾಸ್ತು ಪ್ರಕಾರವಾಗಿ ಇದ್ದ ಮನೆಯನ್ನು ಹುಡುಕಿದ್ದ ಜೆಡಿಎಸ್ ಮುಖಂಡರು, ಮನೆಯಲ್ಲಿ ಕಾರ್ಯಕರ್ತರ ಭೇಟಿಯಾಗಿ ಕುಮಾರಸ್ವಾಮಿ ಅವರ ಕಚೇರಿಯನ್ನು ನಿರ್ಮಿಸಿದ್ದರು.

ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿ ಮನೆಯಲ್ಲಿ ಅಗ್ನಿ ಆಕಸ್ಮಿಕಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿ ಮನೆಯಲ್ಲಿ ಅಗ್ನಿ ಆಕಸ್ಮಿಕ

ಹುಬ್ಬಳ್ಳಿಯಲ್ಲಿ ಮನೆ ಮಾಡಿದ ಬಳಿ ಎಚ್.ಡಿ.ಕುಮಾರಸ್ವಾಮಿ ಅವರು ಅಲ್ಲಿ ವಾಸ ಮಾಡಿಲ್ಲ. 2017ರ ಅಕ್ಟೋಬರ್‌ನಲ್ಲಿ 'ಏಕದಂತ' ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿತ್ತು. ಈಗ ಮನೆಯ ಮಾರಾಟಕ್ಕೆ ಮಾಲೀಕರು ಮುಂದಾಗಿದ್ದಾರೆ...

ಬಾಡಿಗೆಗೆ ಪಡೆದಿದ್ದಾರೆ

ಬಾಡಿಗೆಗೆ ಪಡೆದಿದ್ದಾರೆ

ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಅವರ ಸಹೋದರ ಸುರೇಶ ರಾಯರೆಡ್ಡಿ ಅವರು ನಿವಾಸವನ್ನು ಬಾಡಿಗೆಗೆ ಪಡೆದಿದ್ದರು. ಈಗ ಅದನ್ನು ಮಾರಾಟ ಮಾಡಲು ಮನೆಯ ಮಾಲೀಕರು ನಿರ್ಧರಿಸಿದ್ದಾರೆ.

'ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಬಾಡಿಗೆ ತೆಗೆದುಕೊಳ್ಳದೇ ಅವರಿಗೆ ಎರಡು ವರ್ಷಗಳ ಹಿಂದೆ ಮನೆ ನೀಡಿದ್ದೆ. ಈಗ ಅದನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ' ಎಂದು ಸುರೇಶ ರಾಯರೆಡ್ಡಿ ಹೇಳಿದ್ದಾರೆ.

ಗೃಹ ಪ್ರವೇಶ ಮಾಡಿದ್ದರು

ಗೃಹ ಪ್ರವೇಶ ಮಾಡಿದ್ದರು

ಹುಬ್ಬಳ್ಳಿ ನಗರದ ಭೈರಿದೇವರಕೊಪ್ಪದ ಮುಖ್ಯರಸ್ತೆಯಿಂದ ಗಾಮನಗಟ್ಟಿ ರಸ್ತೆಯಲ್ಲಿ 5 ಕಿ.ಮೀ. ಒಳಗೆ ಇರುವ ಮಾಯಾಕಾರ ಕಾಲೋನಿಯಲ್ಲಿ 'ಏಕದಂತ' ಹೆಸರಿನ ಮನೆಯನ್ನು ಎಚ್.ಡಿ.ಕುಮಾರಸ್ವಾಮಿ ಅವರು ಬಾಡಿಗೆಗೆ ಪಡೆದಿದ್ದರು.

2016ರ ನವೆಂಬರ್‌ನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಅನಿತಾ ಕುಮಾರಸ್ವಾಮಿ ಅವರ ಜೊತೆ ಮನೆಯಲ್ಲಿ ಹೋಮ ನಡೆಸಿ, ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ನಡೆಸಿದ್ದರು. ಎರಡು ವರ್ಷದ ಬಳಿಕ ಈಗ ಮನೆ ಮಾರಾಟ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ

ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ

ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದರು. ಇದರಿಂದಾಗಿ ಕಾರ್ಯಕರ್ತರಲ್ಲಿಯೂ ಉತ್ಸಾಹ ಹೆಚ್ಚಿತ್ತು. ಆದರೆ, 2018ರ ಚುನಾವಣೆಯಲ್ಲಿ ಪಕ್ಷಕ್ಕೆ ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳು ಸಿಕ್ಕಿಲ್ಲ. ಆದರೆ, ಕಾಂಗ್ರೆಸ್‌ ಜೊತೆ ಮೈತ್ರಿಯಾದ ಬಳಿಕ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ.

ಹುಬ್ಬಳ್ಳಿ ಮನೆಯಲ್ಲಿ ಗೃಹ ಪ್ರವೇಶ ಮಾಡಿದ ಬಳಿಕ ಮಾತನಾಡಿದ್ದ ಕುಮಾರಸ್ವಾಮಿ, 'ಈ ಭಾಗದ ಜನರ ನೇರ ಸಂಪರ್ಕದಲ್ಲಿ ಇರಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಮನೆ ಮಾಡಿದ್ದೇನೆ. ಇಲ್ಲಿಂದ ಹೊಸ ರಾಜಕೀಯ ಪುನರಾರಂಭವಾಗಿದೆ. ಕಷ್ಟ ಹೇಳಿಕೊಂಡು ಬರುವವರಿಗೆ ನಮ್ಮ ಮನೆ ಬಾಗಿಲು ಸದಾ ತೆರೆದಿರುತ್ತದೆ' ಎಂದು ಹೇಳಿದ್ದರು.

ಅಗ್ನಿ ಅವಘಡ ಸಂಭವಿಸಿತ್ತು

ಅಗ್ನಿ ಅವಘಡ ಸಂಭವಿಸಿತ್ತು

ಮನೆಯನ್ನು ಬಾಡಿಗೆಗೆ ಪಡೆದ ಮೇಲೆ ಕುಮಾರಸ್ವಾಮಿ ಅವರು ಅಲ್ಲಿ ವಾಸ ಮಾಡಿದ್ದು ಕಡಿಮೆ. ಆದರೆ, ಮನೆಯಲ್ಲಿ 2017ರ ಅಕ್ಟೋಬರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.

ಮನೆಯನ್ನು ಕೆಲಸಗಾರರು ನೋಡಿಕೊಳ್ಳುತ್ತಿದ್ದರು. ಅಗ್ನಿ ಅವಘಡ ಸಂಭವಿಸಿದಾಗ 2 ಸೋಫಾ ಸೆಟ್, ಬೆಡ್ ರೂಮ್ ನಲ್ಲಿರುವ ಬೆಡ್, ಕೆಲವು ಅಲಂಕಾರಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಮನೆಯಲ್ಲಿನ ಕೆಲವು ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಕರಕಲಾಗಿದ್ದವು.

English summary
Karnataka Chief Minister H.D.Kumaraswamy Hubballi house Ekadanta for sale. Kumaraswamy has taken a house for rent in Hubballi to strengthen party in North Karnataka. Now house owner decided to sale house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X