ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಮಗನಿಗೆ ಕಿಡ್ನಿ ದಾನ ಮಾಡಿ ಮರುಜನ್ಮ ಕೊಟ್ಟ ತಾಯಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 06: ಬಡರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತವಾಗಿರುವ ಕಿಮ್ಸ್ ಆಸ್ಪತ್ರೆ ಇದೀಗ ಮೊದಲ ಬಾರಿಗೆ ಕಿಡ್ನಿ ಕಸಿ ಮಾಡಿ ಯುವಕನ ಜೀವ ಉಳಿಸಿದೆ. ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿರುವ ಕಿಮ್ಸ್ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜನರು ಕಸಿ ಮಾಡಿಸಿಕೊಳ್ಳಲು ಬೆಂಗಳೂರಿನಂತಹ ದೂರದ ಸ್ಥಳಗಳಿಗೆ ಹೋಗುವ ಅನಿವಾರ್ಯತೆ ಇತ್ತು ಅಥವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿತ್ತು.

ಕಿಡ್ನಿ ಕಸಿ ಹಣ ಭರಿಸಲಾಗದೇ, ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲೂ ಆಗದೆ ಸಾಕಷ್ಟು ಬಡ ಜನರು ಮೃತಪಟ್ಟ ಉದಾಹರಣೆಗಳು ಸಹ ಇವೆ. ಕಿಮ್ಸ್ ಆಡಳಿತ ಮಂಡಳಿ ಕಿಡ್ನಿ ಕಸಿ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ಸರ್ಕಾರ ಕಳೆದ ಫೆಬ್ರವರಿ 18 ಕಿಡ್ನಿ ಕಸಿಗೆ ಅನುಮತಿ ನೀಡಿತ್ತು.

Frist Time Kidney Transplant Successful At Hubballi KIMS

ಕಿಡ್ನಿ ಕಸಿಗೆ ಅನುಮತಿ ಪಡೆದ ರಾಜ್ಯದ ಏಕೈಕ ಸರಕಾರಿ ಮೆಡಿಕಲ್ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹುಬ್ಬಳ್ಳಿ ಕಿಮ್ಸ್‌ ಪಡೆದಿತ್ತು. ಇದೀಗ ತಾಯಿ ದಾನ‌ ಮಾಡಿದ ಕಿಡ್ನಿಯನ್ನು 22 ವರ್ಷದ ಮಗನಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಮೂಲಕ ತಾಯಿ ಮಗನಿಗೆ ಮರುಜನ್ಮ ನೀಡಿದ್ದಾರೆ.

ಯಶಸ್ವಿ ಕಿಡ್ನಿ ಕಸಿ; ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಯುವಕ ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ, ಆದರೆ ಮೊದಮೊದಲು ರೋಗದ ಲಕ್ಷಣ ಕಾಣಿಸಿರಲಿಲ್ಲ. ಆಮೇಲೆ ಏಕಾಏಕಿ ಸೋಂಕು ಕಾಣಿಸಿಕೊಂಡು 6-7 ತಿಂಗಳಿಂದ ಡಯಾಲಿಸ್ ಪಡೆಯಬೇಕಿತ್ತು. ಕಿಡ್ನಿ ಕಸಿ ಮಾಡುವುದು ಅನಿವಾರ್ಯ ಆದಾಗ ಮೂತ್ರಪಿಂಡಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ ನೇತೃತ್ವದ ತಂಡ ಏಪ್ರಿಲ್ 13 ರಂದು ಶಸ್ತ್ರ ಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ.

Frist Time Kidney Transplant Successful At Hubballi KIMS

ಈ ಕಸಿಯ ಮತ್ತೊಂದು ವಿಶೇಷವೆಂದರೆ ತಾಯಿಯೇ ತಮ್ಮ ಎಡ ಮೂತ್ರಪಿಂಡವನ್ನು ದಾನ ಮಾಡಿ ತನ್ನ ಮಗನನ್ನು ಉಳಿಸಿಕೊಂಡಿದ್ದಾರೆ. ಮತ್ತೇ ತಾಯಿಗಿಂತ ದೊಡ್ಡವರಾರು ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ಉತ್ತರ ಕರ್ನಾಟಕ ಸಂಜೀವಿನಿ ಹೆಗ್ಗಳಿಕೆ ಪಾತ್ರವಾಗಿರುವ ಕಿಮ್ಸ್ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿರುವುದು ಸಿಬ್ಬಂದಿಗಳಲ್ಲಿ ಸಂತಸ ಮೂಡಿಸಿದೆ.

Recommended Video

Rohit Sharma ಸೋತ ಪಂದ್ಯವನ್ನು ಗೆದ್ದಿದ್ದು ಹೀಗೆ | Oneindia Kannada

English summary
First time Kidney transplant successful at Hubballi Karnataka Institute of Medical Sciences (KIMS) hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X