ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾರ್ಸೆಲ್ ಹೆಸರಿನಲ್ಲಿ ಹುಬ್ಬಳ್ಳಿ ಯುವಕನಿಗೆ 5 ಲಕ್ಷ ವಂಚನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 20: ಮ್ಯಾಟ್ರಿಮೊನಿ ಸೈಟ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಮದುವೆಯಾಗುವುದಾಗಿ ನಂಬಿಸಿ ಹುಬ್ಬಳ್ಳಿಯ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ನವನಗರ ನಿವಾಸಿ ಪ್ರಮೋದ್​ ಕುಲಕರ್ಣಿ ವಂಚನೆಗೊಳಗಾಗಿರುವ ಯುವಕ. ಮ್ಯಾಟ್ರಿಮೋನಿ ಸೈಟ್ ಮೂಲಕ ಈಚೆಗೆ ಲಂಡನ್ ಮೂಲದ ಯುವತಿಯೊಬ್ಬಳು ಈಚೆಗೆ ಪ್ರಮೋದ್ ಗೆ ಪರಿಚಯವಾಗಿದ್ದಳು. ಅವರನ್ನು ಮದುವೆಯಾಗಿಯೂ ನಂಬಿಸಿದ್ದಳು. ಜೊತೆಗೆ ಲಂಡನ್​ನಿಂದ ದುಬಾರಿ ಬೆಲೆಯ ಗಿಫ್ಟ್ ಕಳುಹಿಸುವುದಾಗಿಯೂ ತಿಳಿಸಿದ್ದಾಳೆ.

ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ನಾಲ್ಕೂವರೆ ಕೆಜಿ ಚಿನ್ನ ಲಪಟಾಯಿಸಿದ ಆಸಾಮಿ!ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ನಾಲ್ಕೂವರೆ ಕೆಜಿ ಚಿನ್ನ ಲಪಟಾಯಿಸಿದ ಆಸಾಮಿ!

ಈ ನಡುವೆ ಗಿಫ್ಟ್ ನಿರೀಕ್ಷೆಯಲ್ಲಿದ್ದ ಪ್ರಮೋದ್ ಗೆ ಕರೆಯೊಂದು ಬಂದಿದ್ದು, ಕರೆ ಮಾಡಿದ ವ್ಯಕ್ತಿಯು, ಲಂಡನ್ ನಿಂದ ನಿಮಗೆ ಪಾರ್ಸೆಲ್ ಬಂದಿದೆ. ಅದನ್ನು ತೆಗೆದುಕೊಳ್ಳಲು ಶುಲ್ಕ ಕಟ್ಟಬೇಕು ಎಂದು ಹಂತಹಂತವಾಗಿ ಹಣ ತೆಗೆದುಕೊಂಡಿದ್ದಾನೆ. ಒಟ್ಟು ಆನಲೈನ್ ಮೂಲಕ ಹಂತಹಂತವಾಗಿ ಬರೋಬ್ಬರಿ 5,15,549 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

Hubballi: Fraud In The Name Of Parcel From London

ಎಷ್ಟು ದಿನಗಳಾದರೂ ಪಾರ್ಸೆಲ್ ಬಾರದ ಕಾರಣ ಅನುಮಾನ ಮೂಡಿದ್ದು, ನಂತರ ತಾನು ವಂಚನೆಗೆ ಒಳಗಾಗಿರುವುದು ಪ್ರಮೋದ್ ಗೆ ಖಾತ್ರಿಯಾಗಿದೆ. ಇದೀಗ ವಂಚಕರ ವಿರುದ್ಧ ಸೂಕ್ತ ಕ್ರಮ‌ ಕೈಗೊಳ್ಳುವಂತೆ ಪ್ರಮೋದ್ ಸೈಬರ್ ಕ್ರೈಂ ದೂರು ನೀಡಿದ್ದಾರೆ.

English summary
A fraud came to light in hubballi where a young man lost 5 lakhs money in the name of parcel from london,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X