ಹುಬ್ಬಳ್ಳಿ: ಬಿಜೆಪಿ ಮಾಜಿ ಶಾಸಕರ ಪುತ್ರ ಸೂರಜ್ ಆತ್ಮಹತ್ಯೆಗೆ ಶರಣು
ಹುಬ್ಬಳ್ಳಿ, ಸೆಪ್ಟೆಂಬರ್ 8: ಹುಬ್ಬಳ್ಳಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರ ಪುತ್ರ ಸೂರಜ್ (೧೮) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ. ಮನೆಯ ಮಹಡಿಯಲ್ಲಿ ಇರುವ ಕೋಣೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಹದಿನೆಂಟು ವರ್ಷದ ಸೂರಜ್, ದೇಶಪಾಂಡೆ ನಗರದಲ್ಲಿರುವ ತಮ್ಮ ಮನೆಯ ಮೇಲಿನ ಕೋಣೆಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದು, ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ.
ಸೆ.5ರಿಂದ ಹುಬ್ಬಳ್ಳಿ-ಗೋವಾ ಬಸ್ ಸೇವೆ; ವೇಳಾಪಟ್ಟಿ
Recommended Video
ಕೊನೆಗೂ
CCB
ಪೋಲೀಸರ
ಕೈಗೆ
ತಗಲಾಕೊಂಡ
Sanjjanaa
Galrani
|
Oneindia
Kannada
ಆತ್ಮಹತ್ಯೆಗೆ ಶರಣಾಗಿರುವ ಸೂರಜ್, ಎಲ್ಲರೊಂದಿಗೂ ಚೆನ್ನಾಗಿಯೇ ಬೆರೆಯುತ್ತಿದ್ದ. ಸದಾಕಾಲ ಲವಲವಿಕೆಯಿಂದ ಇರುತ್ತಿದ್ದನೆಂದು ಹೇಳಲಾಗಿದೆ. ಘಟನೆಯ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರೆಸಿದ್ದಾರೆ.
Comments
hubballi suicide mla bjp police kannada news ಹುಬ್ಬಳ್ಳಿ ಆತ್ಮಹತ್ಯೆ ಶಾಸಕ ಬಿಜೆಪಿ ಪೊಲೀಸ್ ಕನ್ನಡ ಸುದ್ದಿ politics
English summary
Suraj, 18, son of former MLA of Hubballi, Veerabhadrappa Halaharavi, has died by suicide.
Story first published: Tuesday, September 8, 2020, 11:31 [IST]