ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರೀ ನಮೋ ಕ್ಯಾಂಟೀನ್ ಯಾಕೆ, ಇವರ ಬಗ್ಗೆಯೂ ತಿಳಿದುಕೊಳ್ಳೋಣ

ಹುಬ್ಬಳ್ಳಿಯ ಮಹಾವೀರ ಯುವ ಫೆಡರೇಶನ್ ಎನ್ನುವ ಸೇವಾ ಸಂಸ್ಥೆ 'ರೋಟಿ ಘರ್' ಎಂಬ ಹೋಟೆಲ್ ಮೂಲಕ ಕೇವಲ ಒಂದು ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡಿ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಿದೆ.

By ಶಂಭು, ಹುಬ್ಬಳ್ಳಿ
|
Google Oneindia Kannada News

ಇಡೀ ದೇಶಾದ್ಯಂತ ನಮೋ ಹೆಸರಿನ ಹೋಟೇಲ್ ಕಡಿಮೆ ದರಕ್ಕೆ ತಿಂಡಿ, ತಿನಿಸುಗಳು ಮತ್ತು ಊಟವನ್ನು ಕೊಡುತ್ತಿರುವ ಸುದ್ದಿ ನಮಗೆಲ್ಲಾ ಗೊತ್ತೇ ಇದೆ. ಇದೇ ರೀತಿ ತಮಿಳುನಾಡಿನಲ್ಲಿ ಅಮ್ಮಾ ಹೆಸರಿನ ಕ್ಯಾಂಟೀನ್ ಗಳಲ್ಲಿ 1 ರೂ.ಗೆ ಇಡ್ಲಿ ನೀಡಲಾಗುತ್ತಿದೆ.

ಹಾಗೇ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹತ್ತು ರೂಪಾಯಿಗೆ ಗ್ರಾಹಕ ಇಷ್ಟಪಟ್ಟ ತಿಂಡಿ, ತಿನಿಸುಗಳನ್ನು ಕೊಡುವ ಎರಡು ಹೋಟೆಲ್ ಗಳಿವೆ. ಇವುಗಳಲ್ಲಿ ನಗರದ ಪ್ರತಿಷ್ಠಿತ ಪ್ರದೇಶ ಎಂದು ಕರೆಯಲಾಗುವ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಬಳಿ ಮತ್ತು ಇನ್ನೊಂದು ಮಧ್ಯಮ ವರ್ಗದ ಜನರು ವಾಸಿಸುವ ಹಳೇ ಹುಬ್ಬಳ್ಳಿ ಪ್ರದೇಶದ ನೇಕಾರ ನಗರದಲ್ಲಿ.

ಜೊತೆಗೆ, ಹುಬ್ಬಳ್ಳಿಯಲ್ಲಿ ಸೇವಾ ಸಂಸ್ಥೆಯೊಂದರ 'ರೋಟಿ ಘರ್' ಎಂಬ ಹೋಟೆಲ್ ಇದೆ. ಇಲ್ಲಿ ಕೇವಲ ಒಂದು ರೂಪಾಯಿಗೆ ಊಟ ಕೊಡಲಾಗುತ್ತಿದೆ ಎಂದರೆ ನೀವೆಲ್ಲಾ ನಂಬಲೇ ಬೇಕು.

ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಕಂಚಗಾರ ಗಲ್ಲಿಯ ಪಟ್ಟಣಶೆಟ್ಟಿ ಓಣಿಯಲ್ಲಿರುವ ಈ ರೋಟಿ ಘರ್ ನಲ್ಲಿ ಪ್ರತಿನಿತ್ಯ 1 ರೂ. ಗೆ ಸಾರ್ವಜನಿಕರಿಗೆ ಊಟ ನೀಡಲಾಗುತ್ತಿದೆ. ಊಟದಲ್ಲಿ ಎರಡು ರೊಟ್ಟಿ, ತರಕಾರಿ ಪಲ್ಯ, ವೆಜ್ ಕರೀ, ಸಾಂಬಾರ್ ಮತ್ತು ಅನ್ನ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಹೋಳಿಗೆ, ಜಿಲೇಬಿ, ಖರ್ಚಿಕಾಯಿ ಸಿಹಿಯನ್ನೂ ನೀಡಲಾಗುತ್ತದೆ.

6 ವರ್ಷಗಳ ಹಿಂದೆ ಮಹಾವೀರ ಯುವ ಫೆಡರೇಶನ್ ಈ ರೋಟಿ ಘರ್ ಆರಂಭಕ್ಕೆ ಯೋಚಿಸಿತ್ತು. ಬರೀ ಶ್ರೀಮಂತರು ಮಾತ್ರ ಹೊಟೆಲ್ ನಲ್ಲಿ 50 , 100 ರೂ. ಕೊಟ್ಟು ಊಟ ಮಾಡುತ್ತಾರೆ, ಬಡ ಬಗ್ಗರು ಏನು ಮಾಡಬೇಕು ಎಂಬ ಹಿನ್ನೆಲೆಯನ್ನಿಟ್ಟುಕೊಂಡು ಈ ರೋಟಿ ಘರ್ ಆರಂಭಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿಯೇ ಊಟ ಮಾಡುತ್ತಿದ್ದೇನೆ ಎನ್ನುವ ಹನುಮಂತ ಎಂಬ ಹಣ್ಣಿನ ವ್ಯಾಪಾರಿ, ಮನೆಯಲ್ಲಿನ ಅಡುಗೆಯಂತೆಯೇ ಇಲ್ಲಿಯೂ ಊಟ ರುಚಿಕಟ್ಟಾಗಿರುತ್ತದೆ ಎಂದು ಸಂಸ್ಥೆಯ ಸೇವೆಗೆ ಸರ್ಟಿಫಿಕೇಟ್ ನೀಡುತ್ತಾರೆ. ಈ ಸಾಮಾಜಿಕ ಕಳಕಳಿಯ ಕೆಲಸದ ಬಗ್ಗೆ, ಇನ್ನಷ್ಟು ಮಾಹಿತಿ..ಮುಂದೆ ಓದಿ..

ಹುಬ್ಬಳ್ಳಿ

ಹುಬ್ಬಳ್ಳಿ

ಮೊದಲು ಉಚಿತ ಆಸ್ಪತ್ರೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು ಆದರೆ ವೈದ್ಯರಿಗೆ ಹಣ ನೀಡಬೇಕಾಗಿರುವುದರಿಂದ ಆ ಯೋಚನೆಯನ್ನು ಕೈಬಿಟ್ಟು 1 ರೂ. ಗೆ ಊಟ ನೀಡುವ ನಿರ್ಧಾರಕ್ಕೆ ಬಂದು ರೋಟಿ ಘರ್ ಸ್ಥಾಪಿಸಲಾಯಿತು ಎನ್ನುತ್ತಾರೆ ಈ ಸೇವಾ ಸಂಸ್ಥೆಯ ಪದಾಧಿಕಾರಿಗಳು.

ಸ್ವಚ್ಚತೆಗೆ ಆದ್ಯತೆ

ಸ್ವಚ್ಚತೆಗೆ ಆದ್ಯತೆ

ರೋಟಿ ಘರ್ ಹೋಟೇಲ್ ನಲ್ಲಿ ಸ್ವಚ್ಛತೆಗೆ ಅತೀ ಹೆಚ್ಚಿನ ಗಮನ ನೀಡಲಾಗುತ್ತದೆ. ತಾಜಾ ತರಕಾರಿ ಬಳಸಿ ಪಲ್ಯ ಮಾಡಲಾಗುತ್ತದೆ, ಹಾಗೂ ಅನ್ನವನ್ನೂ ಕೂಡ ಒಳ್ಳೆಯ ಅಕ್ಕಿಯಿಂದಲೇ ಮಾಡಲಾಗುತ್ತದೆ. ಜೊತೆಗೆ, ಇಲ್ಲಿಯ ಕೆಲಸಗಾರರು ಕೂಡ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ, ನಯ ವಿನಯದಿಂದಲೇ ಮಾತನಾಡಿಸಿ ಊಟ ಕೊಡುತ್ತಾರೆ ಎನ್ನುತ್ತಾರೆ ಕಾಯಿಪಲ್ಲೆ ಮಾರುವ ಮಲ್ಲಮ್ಮ.

ರೋಟಿ ಘರ್ ನ ಅಧ್ಯಕ್ಷ ತೇಜರಾಜ್ ಜೈನ್

ರೋಟಿ ಘರ್ ನ ಅಧ್ಯಕ್ಷ ತೇಜರಾಜ್ ಜೈನ್

ನಾವು ಅತೀ ಕಡಿಮೆ ದರದಲ್ಲಿ ಉತ್ತರ ಕರ್ನಾಟಕ ಶೈಲಿಯಲ್ಲಿನ ಊಟವನ್ನು ನೀಡುತ್ತಿದ್ದೇವೆ ಎನ್ನುವ ರೋಟಿ ಘರ್ ನ ಅಧ್ಯಕ್ಷ ತೇಜರಾಜ್ ಜೈನ್, ನಾವು ಕೈಯಿಂದಲೂ ಹಣವನ್ನು ಮುಟ್ಟಲ್ಲ. ಹೊರಗಡೆ ಒಂದು ಬಾಕ್ಸ್ ಇಡ್ಡಿದ್ದೇವೆ, ಅದರಲ್ಲಿ ಊಟ ಮಾಡಿದವರು ಒಂದು ರೂಪಾಯಿ ಹಾಕುತ್ತಾರೆ ಎನ್ನುವುದು ಜೈನ್ ಅವರ ನುಡಿ.

ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ

ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ

ಸದ್ಯ ಇಲ್ಲಿ ಪ್ರತಿ ದಿನ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಊಟ ನೀಡಲಾಗುತ್ತಿದೆ. ಜೊತೆಗೆ ಮೂವರು ಕೆಲಸಗಾರರೂ ಕೂಡ ಇಲ್ಲಿದ್ದಾರೆ. ಬಂದ ಗ್ರಾಹಕರಿಗೆ ಸೇವೆ ಮಾಡಲು ಸಿದ್ಧರಾಗಿಯೇ ಇರುತ್ತಾರೆ. ಗ್ರಾಹಕರು ಹೆಚ್ಚಿನ ರೊಟ್ಟಿ ಮತ್ತು ಅನ್ನ, ಸಾಂಬಾರ ಕೇಳಿದರೆ ಬೇಕಾದಷ್ಟು ನೀಡುತ್ತಾರೆ.

ಹೋಟೇಲ್ ಪರಿಚಯ

ಹೋಟೇಲ್ ಪರಿಚಯ

1 ರೂ. ನಲ್ಲಿ ಹೊಟ್ಟೆ ತುಂಬ ಮಾಡಿ ಸಂತೃಪ್ತಗೊಂಡ ಗ್ರಾಹಕರು ತಮ್ಮ ಸ್ನೇಹಿತರನ್ನೂ ಕರೆದುಕೊಂಡು ಬಂದು ಹೋಟೇಲಿನ ಪರಿಚಯ ಮಾಡಿಸುತ್ತಾರೆ. ಇನ್ನು ಸಿಕ್ಕಾಪಟ್ಟೆ ದುಡ್ಡು ಕೊಟ್ಟು ರಸ್ತೆ ಬದಿಯಲ್ಲಿನ ಎಣ್ಣೆ ಪದಾರ್ಥಗಳ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಬಿಟ್ಟು, ಪೌಷ್ಠಿಕಾಂಶ ಹೊಂದಿರುವ 1 ರೂ. ಊಟ ಮಾಡಿದರೆ ಆರೋಗ್ಯ ಹಾಗೂ ಹಣ ಉಳಿಯುತ್ತದೆ ಎನ್ನುವುದು ಇಲ್ಲಿನ ಊಟ ಸೇವಿಸಿದ ಗ್ರಾಹಕರ ಅಭಿಪ್ರಾಯ.

English summary
Sri. Tejraj Jain, founder and MD of Roti Ghar in Hubballi serves full meals for One rupee. Let us appreciate his social service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X