• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿಯಲ್ಲಿ ಫುಟ್‌ಪಾತ್, ರಸ್ತೆ ಒತ್ತುವರಿ ತೆರವು

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 15; ಜನರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಹುಬ್ಬಳ್ಳಿಯ ಕೋಪ್ಪಿಕರ್ ಹಾಗೂ ದಾಜೀಬಾನ್ ಪೇಟೆ ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದರು.

ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ದಾಜೀಬಾನ್ ಪೇಟೆ, ಪೆಂಡಾರಗಲ್ಲಿ,‌ ಬೆಳವಾಗ್ ಗಲ್ಲಿ, ದುರ್ಗದ ಬೈಲು, ಕಲಾದಗಿ ಓಣಿಗಳಲ್ಲಿ ಅನಧಿಕೃತವಾಗಿ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ತೆರವು ಮಾಡಲಾಯಿತು.

ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ಸಾಮಾನ್ಯ ದರದ ರೈಲು, ವೇಳಾಪಟ್ಟಿ ಬೆಂಗಳೂರಿನಿಂದ ಹುಬ್ಬಳ್ಳಿ, ಹೊಸಪೇಟೆಗೆ ಸಾಮಾನ್ಯ ದರದ ರೈಲು, ವೇಳಾಪಟ್ಟಿ

15 ದಿನಗಳ ಹಿಂದೆ ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ಸಹಯೋಗದಲ್ಲಿ ಒತ್ತುವರಿ ತೆರವು ಮಾಡಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ವ್ಯಾಪರಿಗಳು ಪುನಃ ಫುಟ್ ಪಾತ್ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಿದ್ದರು.

ಹುಬ್ಬಳ್ಳಿ; ಕೋರ್ಟ್ ಆದೇಶದಂತೆ ರಿಲಾಯನ್ಸ್ ವಿಮೆ ಕಚೇರಿ ಜಪ್ತಿಹುಬ್ಬಳ್ಳಿ; ಕೋರ್ಟ್ ಆದೇಶದಂತೆ ರಿಲಾಯನ್ಸ್ ವಿಮೆ ಕಚೇರಿ ಜಪ್ತಿ

ಆದ್ದರಿಂದ ರಸ್ತೆ ಹಾಗೂ ಫುಟ್ ಪಾತ್ ಮೇಲೆ ಇಟ್ಟಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒತ್ತುವರಿ ಕಾರ್ಯಾಚರಣೆ ಒಂದೇ ದಿನಕ್ಕೆ ಮುಗಿಯುವುದಿಲ್ಲ. ಮುಂದುವರೆಸಲಾಗುತ್ತದೆ ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ಕೊಡಲಾಗಿದೆ.

ಹುಬ್ಬಳ್ಳಿ; ಅವಳಿ ನಗರದಲ್ಲಿ ಕಸ ಸುರಿದರೆ ದಂಡ ಹುಬ್ಬಳ್ಳಿ; ಅವಳಿ ನಗರದಲ್ಲಿ ಕಸ ಸುರಿದರೆ ದಂಡ

ಹುಬ್ಬಳ್ಳಿ ನಗರದ ಕೊಪ್ಪಿಕರ್ ಹಾಗೂ ದಾಜಿಬಾನ್ ಪೇಟೆ ರಸ್ತೆಗಳು ಹೆಸರು ವಾಸಿಯಾಗಿವೆ. ರಸ್ತೆಗಳು ಸಾಕಷ್ಟು ಅಗಲವಾಗಿದ್ದರೂ, ವ್ಯಾಪರಿಗಳು ಒತ್ತುವರಿ ಮಾಡಿದ್ದರಿಂದ ಜನವರಿಗೆ ತೊಂದರೆಯಾಗುತ್ತಿತ್ತು. ಪಾಲಿಕೆ 24 ಕಡೆ ಪಾದಯಾತ್ರಿಗಳ ಸಂಚಾರಿ ವಲಯಗಳನ್ನು ಗುರುತಿಸಿ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ.

   ಚೀನಾದಲ್ಲಿ ಪತ್ತೆಯಾಯಿತು ಮತ್ತೊಂದು ವೈರಸ್ | Oneindia Kannada

   94 ರಸ್ತೆ, 54 ಬೀದಿ ಬದಿ ವ್ಯಾಪಾರಿ ರಸ್ತೆಗಳನ್ನು ಸಹ ಗುರುತಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಲಿದ್ದು, ನಕ್ಷೆಯ ಅನುಸಾರ ರಸ್ತೆ ಅಳೆದು ಒತ್ತುವರಿಯಾಗಿದ್ದರೆ ಅದನ್ನು ಸಹ ತೆರವುಗೊಳಿಸಲಾಗುತ್ತದೆ.

   English summary
   Nitesh Patil deputy commissioner of Dharwad lead the footpath encroachment removal drive in Hubballi city.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X