ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನ ಹಾಗೂ ಸ್ಪೋರ್ಟ್ಸ್ ಕಾರ್ ತಯಾರಿ; ಸೀ ಇಂಡಿಯಾ ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಿದ್ಯಾರ್ಥಿಗಳು ಪ್ರಥಮ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್‌ 23: ಬಿವಿಬಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಕೀರ್ತಿಯನ್ನು ತಂದಿದ್ದಾರೆ.

ಬಿವಿಬಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ವಿಮಾನ ಹಾಗೂ ಅತಿ ವೇಗದ ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸುವ ಮೂಲಕ ದೇಶದ ಗಮನವನ್ನು ಸೆಳೆದಿದ್ದಾರೆ. ಮೆಕಾನಿಕಲ್ ವಿಭಾಗದ ಎರಡು ಪ್ರತ್ಯೇಕ ತಂಡಗಳು ಅತಿ ವೇಗದ ಕಾರನ್ನು ತಯಾರಿಸಿದ್ದಾರೆ. ಹಾಗೂ 7.5 ಭಾರವನ್ನು ಹೊತ್ತು ಮೇಲಕ್ಕೆ ಹಾರುವ ವಿಮಾನವನ್ನು ತಯಾರಿಸುವ ಮೂಲಕ ಸೀ ಇಂಡಿಯಾ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

'ಮಿಸ್ ಊರ್ವಶಿ' ಕಿರೀಟವನ್ನು ಮುಡಿಗೇರಿಸಿಕೊಂಡ ವಾಣಿಜ್ಯನಗರಿ ಹುಬ್ಬಳ್ಳಿಯ ಯುವತಿ'ಮಿಸ್ ಊರ್ವಶಿ' ಕಿರೀಟವನ್ನು ಮುಡಿಗೇರಿಸಿಕೊಂಡ ವಾಣಿಜ್ಯನಗರಿ ಹುಬ್ಬಳ್ಳಿಯ ಯುವತಿ

ಸೀ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ

ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಎರಡು ಪ್ರತ್ಯೇಕ ತಂಡಗಳು ಅತಿ ವೇಗದ ಕಾರು ಹಾಗೂ 7.5 ಭಾರವನ್ನು ಹೊತ್ತು ಮೇಲಕ್ಕೆ ಹಾರುವ ಸಾಮರ್ಥ್ಯವನ್ನು ಹೊಂದಿರುವ ವಿಮಾನವನ್ನು ತಯಾರಿಸಿದ್ದಾರೆ. ಸದ್ಯ ಈ ವಿದ್ಯಾರ್ಥಿಗಳು ತಯಾರಿಸಿರುವ ಕಾರು ಹಾಗೂ ವಿಮಾನವನ್ನು ಗೇಟರ್ ನೋಯ್ಡಾದಲ್ಲಿ ನಡೆದ ಸೀ ಇಂಡಿಯಾ ಸ್ಪರ್ಧೆಗೆ ಇಡಲಾಗಿತ್ತು, ಅಲ್ಲಿ ಇವೆರಡು ಪ್ರಥಮ ಸ್ಥಾನವನ್ನ ಗಳಿಸಿಕೊಂಡಿವೆ. ವಿಮಾನ ತಯಾರಿಸಿ ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ ಒಂದು ಲಕ್ಷ ಹಾಗೂ ಕಾರು ತಯಾರಿಸಿ ಪ್ರಥಮ ಸ್ಥಾನ ಗಳಿಸಿರುವ ತಂಡಕ್ಕೆ ಎರಡು ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗಿದೆ. ಇನ್ನೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದೆ ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯಿಂದ ಪ್ರಶಂಸೆ ವ್ಯಕ್ತವಾಗಿದೆ.

Flight and Sports Car Manufacturing; Hubballi Students First Place in SEA India Competition

ವಿದ್ಯಾರ್ಥಿಗಳು ತಯಾರಿಸಿದ ಕಾರು ಹಾಗೂ ವಿಮಾನವನ್ನು ಬಿವಿಬಿ ಕಾಲೇಜಿನ ಎದುರು ಪ್ರದರ್ಶನಕ್ಕೆ ಇಡಲಾಗಿದೆ. ಇಂತಹವೊಂದು ಪ್ರಯೋಗ ಮಾಡಿ ಪ್ರಶಸ್ತಿ ಗೆದ್ದಿರುವುದು ನಮಗೆಲ್ಲ ಖುಷಿ ತಂದಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿಯೂ ಎಲೆಕ್ಟ್ರಾನಿಕ್​ ಕಾರು ತಯಾರಿ

ಇನ್ನು ಈ ಹಿಂದೆಯೂ ಸಹ ಇದೇ ರೀತಿಯಲ್ಲಿ ಶಿವಮೊಗ್ಗದ ಜೆಎನ್​ಎನ್​ಸಿಸಿ ಎಂಜಿನಿಯರಿಂಗ್​ ಕಾಲೇಜು ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್​ ಕಾರು ತಯಾರಿಸಿದ್ದರು. ಕಾಲೇಜಿನ‌ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಾತ್ವಿಕ್, ಅಭಿಷೇಕ್, ಕಾರ್ತಿಕ್ ಶೆಟ್ಟಿ ಹಾಗೂ ಮನೋಹರ್ ಈ ಕಾರನ್ನು ತಯಾರಿಸಿದ ವಿದ್ಯಾರ್ಥಿಗಳಾಗಿದ್ದರು.

Flight and Sports Car Manufacturing; Hubballi Students First Place in SEA India Competition

ಈ ವಿದ್ಯಾರ್ಥಿಗಳ ತಂಡ ತಮ್ಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜೆ.ಅಮಿತ್ ಕುಮಾರ್ ಮಾರ್ಗದರ್ಶನದಲ್ಲಿ ಹಳೆಯ ಇಂಧನ ಚಾಲಿತ ಕಾರನ್ನು ನವೀಕರಿಸಿ, ವಿದ್ಯುತ್ ಚಾಲಿತ ಕಾರು ಸಿದ್ಧಪಡಿಸಿದ್ದರು. ಕನಿಷ್ಠ 4 ರಿಂದ 5 ಗಂಟೆ ಚಾರ್ಜ್ ಮಾಡಿದರೆ ಈ ಕಾರು 80 ಕಿಲೋ ಮೀಟರ್‌ ದೂರ ಚಲಿಸುತ್ತದೆ. ಮನೆಯಲ್ಲಿಯೇ ಚಾರ್ಜ್ ಮಾಡಬಹುದು. ಚಾರ್ಜ್ ಮಾಡಲು 4 ರಿಂದ 5 ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಇದಕ್ಕೆ ಗರಿಷ್ಠ ಅಂದರೆ 20 ರಿಂದ 30 ರೂಪಾಯಿ ಖರ್ಚಾಗಬಹುದು ಎಂದು ಮಾಹಿತಿ ನೀಡಿದ್ದರು.

English summary
Hubballi's BVB Engineering College Students created flight and super fast sports cars, attracting attention of country. They got first place in SEA India competion, that saw participation from countrywide. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X