ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ ಬುಕ್ಕಿನಲ್ಲಿ ಹವಾ ಎಬ್ಬಿಸಿರುವ ಉತ್ತರ ಕರ್ನಾಟಕ ಮಂದಿ

ಉತ್ತರ ಕರ್ನಾಟಕ ಅಂದ್ರೇನೆ ಅದೊಂದು ವಿಶೇಷ ಪ್ರದೇಶವಾಗಿದ್ದು, ಶೈಕ್ಷಣಿವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಪ್ರಾಂತ.

By Basavaraj Maralihalli
|
Google Oneindia Kannada News

ನಮ್ಮ ಉತ್ತರ ಕರ್ನಾಟಕ ಅಂದ್ರ ನೋಡ್ರಿ ಏನರ ಒಂದು ಸ್ಪೆಷಲ್ ಇದ್ದ ಇರತೈತಿ. ಹಂಗ ಇಲ್ಲಿನ ಕನ್ನಡ ಭಾಷೆನೂ ಗತ್ತು-ಗಮ್ಮತ್ತಿನಿಂದ ಕೂಡಿರತೈತಿ. ನಮ್ಮಲ್ಲಿ ಮುಂಬೈ ಮತ್ತ ಹೈದ್ರಾಬಾದ್ ಕರ್ನಾಟಕ ಅಂತ ಇದ್ರೂನು ದಕ್ಷಿಣ ಕರ್ನಾಟಕ ಅಂದ್ರ ಎರಡೂ ಪ್ರಾಂತದವ್ರೂ ಉತ್ತರ ಕರ್ನಾಟಕ ಅಂತನ ಹೇಳ್ತೇವಿ.

ಇಂಥಾ ಭಾಷಾದಾಗ ಎಷ್ಟ ವೈಶಿಷ್ಟ್ಯ ಐತಿ ಅಂದ್ರ ಫೇಸ್‌ಬುಕ್‌ನ್ಯಾಗ ಉತ್ತರ ಕರ್ನಾಟಕವನ್ನು ಪ್ರತಿನಿಧಿಸೋ ಪೇಜ್‌ಗಳಿಗೆ ಬಂದಿರೋ ಲೈಕ್‌ಗಳನ್ನು ನೋಡಿದ್ರ ಗೊತ್ತಾಗತದ. ಹೌದು, ನಮ್ಮ ಉತ್ತರ ಕರ್ನಾಟಕದ ಜನಜೀವನ, ಭಾಷೆ, ಹಾಸ್ಯ, ಜೋಕ್ಸ್, ವಿಡಂಬನೆ ಹಿಂಗ ನೂರಾರು ವಿಷಯಕ್ಕ ಸಂಬಂಧಪಟ್ಟಂಗ ಜನ್ರಿಗೆ ಹತ್ರಾ ಆಗಿರೋ ಈ ಪೇಜ್‌ನ್ಯಾಗ ಲಕ್ಷಾಂತರ ಮಂದಿ ಸೇರಿಕೊಂಡಾರ. ಅಲ್ಲದ ಇದ್ರಾಗ ಹಾಕೋ ಪೋಸ್ಟ್‌ಗಳಿಗೆ ದಿನಾಲೂ ನೂರಾರು ಸಾವಿರಾರು ಲೈಕ್ಸ್ ಒತ್ತಾಕ ಹತ್ಯಾರ.

ಗುರು-ಶಿಷ್ಯರು : ಒಂದಷ್ಟು ಆಟ, ಹಲವಷ್ಟು ಪಾಠ!ಗುರು-ಶಿಷ್ಯರು : ಒಂದಷ್ಟು ಆಟ, ಹಲವಷ್ಟು ಪಾಠ!

ಇಲ್ಲಿ ಪ್ರಕಟವಾಗ್ತಿರೋ ಜೋಕ್ಸ್ ಗಳಾಗಲಿ, ಮೀಮ್ಸ್ ಗಳಾಗಲಿ ಯಾರನ್ನೂ ಗುರಿ ಮಾಡುವುದಿಲ್ಲ, ಯಾರನ್ನೂ ನೋಯಿಸುವುದಿಲ್ಲ. ಇಲ್ಲಿರುವುದು ಬರೇ ಹಾಸ್ಯ ಮಾತ್ರ. ಉತ್ತರ ಕರ್ನಾಟಕದ ಶೈಲಿಯಲ್ಲಿ ಡೈಲಾಗ್ ಓದುತ್ತಿದ್ದರಂತೂ ಎಂಥ ಗುಮ್ಮನಗುಸಕನೂ ಎದ್ದುಬಿದ್ದು ನಗಬೇಕು. ಅಂಗಿರ್ತಾವ ಇಲ್ಲಿನ ಪೋಸ್ಟ್ ಗಳು. ಜೊತಿಗೆ ಉತ್ತರ ಕರ್ನಾಟಕದ ಬಗ್ಗೆ ಒಂದಿಷ್ಟು ಮಾಹಿತಿಯನ್ನೂ ನೀಡುವುದನ್ನು ಪರಿಪಾಠ ಮಾಡಿಕೊಂಡ್ಯಾರ.

ಫೇಸ್ ಬುಕ್ ನಲ್ಲಿ 50 ಕ್ಕೂ ಹೆಚ್ಚು ಪೋಸ್ಟ್ ಹಾಕಿಬಿಟ್ಟೀರಾ, ಹುಷಾರು!ಫೇಸ್ ಬುಕ್ ನಲ್ಲಿ 50 ಕ್ಕೂ ಹೆಚ್ಚು ಪೋಸ್ಟ್ ಹಾಕಿಬಿಟ್ಟೀರಾ, ಹುಷಾರು!

ಇನ್ಯಾಕ ತಡಾ ಮಾಡ್ತೀರಿ, ಈ ಎಲ್ಲಾ ಪುಟಗಳನ್ನೂ ನೋಡ್ರಿ, ಲೈಕ್ ಮಾಡ್ರಿ, ಶೇರ್ ಮಾಡ್ರಿ, ಸಂತೋಷವನ್ನು ಎಲ್ಲಾರೊಂದಿಗೂ ಹಂಚಿರಿ.

ಶೈಕ್ಷಣಿವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತ

ಶೈಕ್ಷಣಿವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತ

ಹೌದು, ಉತ್ತರ ಕರ್ನಾಟಕ ಅಂದ್ರೇನೆ ಅದೊಂದು ವಿಶೇಷ ಪ್ರದೇಶವಾಗಿದ್ದು, ಶೈಕ್ಷಣಿವಾಗಿ ಹಿಂದುಳಿದಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಪ್ರಾಂತ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಭಾವಶಾಲಿಯಾಗಿದ್ದು, ನಶಿಸಿ ಹೋಗುತ್ತಿರುವ ಈ ಪ್ರಾಂತದ ಭಾಷೆ, ನಡೆ-ನುಡಿ, ಆಚರಣೆ, ಜನಜೀವನ ಸೇರಿದಂತೆ ಹಲವು ವಿಷಯಗಳನ್ನು ವಿಡಂಬನೆಯ ಭಾಷೆಯ ಮೂಲಕ ಫೇಸ್‌ಬುಕ್‌ನ ಹಲವು ಪೇಜ್‌ಗಳು ಪ್ರಚಲಿತಕ್ಕೆ ತಂದಿವೆ.

ಜೋಕ್ಸ್ ಮೀಮ್ಸ್ ಗಳಿಗೆ ಕೊರತೆಯೇ ಇಲ್ಲ

ಜೋಕ್ಸ್ ಮೀಮ್ಸ್ ಗಳಿಗೆ ಕೊರತೆಯೇ ಇಲ್ಲ

ಉತ್ತರ ಕರ್ನಾಟಕ ಜೋಕ್ಸ್, ಉತ್ತರ ಕರ್ನಾಟಕ ಸ್ಪೆಷಲ್, ನಮ್ಮ ಉತ್ತರ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಮಿಮ್ಸ್ ಫೇಸ್‌ಬುಕ್ ಪೇಜ್‌ಗಳು ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಪಸರಿಸುವ ರಾಯಭಾರಿಗಳಾಗಿ ಕೆಲಸ ಮಾಡುತ್ತಿವೆ.

ಎಲ್ಲ ವಿಷಯಕ್ಕೂ ಎಲ್ಲ ಕ್ಷೇತ್ರಕ್ಕೂ ಪ್ರಾತಿನಿಧ್ಯ

ಎಲ್ಲ ವಿಷಯಕ್ಕೂ ಎಲ್ಲ ಕ್ಷೇತ್ರಕ್ಕೂ ಪ್ರಾತಿನಿಧ್ಯ

ಈ ಪೇಜ್‌ಗಳ ಮೂಲಕ ಮಾಡುವ ಪೊಸ್ಟ್‌ಗಳು ಎಲ್ಲ ಕ್ಷೇತ್ರಕ್ಕೂ ಪ್ರಾತಿನಿಧ್ಯ ಕೊಡುತ್ತಿವೆ. ಅದರಲ್ಲೂ ಮುಖ್ಯವಾಗಿ ಇಲ್ಲಿನ ಜನಜೀವನವನ್ನು ನೈಜ ರೀತಿಯಲ್ಲಿ ಪಸರಿಸುವ ಕಾರ್ಯವನ್ನು ಮಾಡುತ್ತಿವೆ. ರಾಜಕೀಯ, ಕ್ರೀಡೆ, ಕೃಷಿ, ಸಂಗೀತ, ಸಾಹಿತ್ಯ, ಹಬ್ಬ-ಹರಿದಿನ, ಸ್ಪರ್ಧೆ, ಪರಿಸರ, ಶಿಕ್ಷಣ, ಜಯಂತ್ಯುತ್ಸವ, ಆಚರಣೆ ಹೀಗೆ ಪ್ರತಿಯೊಂದು ಕ್ಷೇತ್ರಕ್ಕೂ ಆದ್ಯತೆ ನೀಡಿರುವ ಈ ಪೇಜ್‌ಗಳು ಪ್ರತಿದಿನ 15ರಿಂದ 20 ಪೊಸ್ಟ್‌ಗಳನ್ನು ಮಾಡುತ್ತಿವೆ. ವಿಶೇಷವೆಂದರೆ ಎಲ್ಲ ಪೋಸ್ಟ್‌ಗಳಿಗೂ ಕನಿಷ್ಠ ಎಂದರೂ ಸಾವಿರ ಮೆಚ್ಚುಗೆಗಳು ವ್ಯಕ್ತವಾಗಿರುತ್ತವೆ. ಇನ್ನು ಕೆಲವೊಂದು ಸನ್ನಿವೇಶಗಳಲ್ಲಿ ಈ ಪೇಜ್‌ಗಳಲ್ಲಿನ ಪೋಸ್ಟ್‌ಗಳು ಮಾಹಿತಿಯನ್ನೂ ಒಳಗೊಂಡಿರುತ್ತವೆ.

ಹೊರಗಿನವರಿಂದಲೇ ಹೆಚ್ಚು ಮೆಚ್ಚುಗೆ

ಹೊರಗಿನವರಿಂದಲೇ ಹೆಚ್ಚು ಮೆಚ್ಚುಗೆ

ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವ ಈ ಫೇಸ್‌ಬುಕ್ ಪೇಜ್‌ಗಳಲ್ಲಿ ಕನಿಷ್ಠ ಎಂದರೂ 66 ಸಾವಿರ ಸದಸ್ಯರಿದ್ದಾರೆ. ಹಾಗೆಯೇ ಉತ್ತರ ಕರ್ನಾಟಕ ಜೋಕ್ಸ್ ಪೇಜ್‌ಗೆ ಗರಿಷ್ಠ ಅಂದರೆ 2.60 ಲಕ್ಷ ಸದಸ್ಯರಿದ್ದು, ಉತ್ತರ ಕರ್ನಾಟಕ ಸ್ಪೆಷಲ್ ಗೆ 1.65 ಲಕ್ಷ ಹಾಗೂ ನಮ್ಮ ಉತ್ತರ ಕರ್ನಾಟಕ 1.07 ಲಕ್ಷ ಸದಸ್ಯರನ್ನು ಹೊಂದಿವೆ.

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪೇಜ್ಗಳು

ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪೇಜ್ಗಳು

ಹೀಗೆ ಈ ಪೇಜ್‌ಗಳ ಬಹುತೇಕ ಸದಸ್ಯರು ಉತ್ತರ ಕರ್ನಾಟದಿಂದ ವಲಸೆ ಹೋದವರು ಎಂಬುದು ವಿಶೇಷ. ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಜನರೇ ಈ ಪೇಜ್‌ಗಳನ್ನು ಹೆಚ್ಚು ಮೆಚ್ಚಿಕೊಂಡವರು. ಉತ್ತರ ಕರ್ನಾಟಕದವರು ಮಾತ್ರವಲ್ಲ ಎಲ್ಲ ಪ್ರಾಂತ್ಯದವರೂ ಇವನ್ನು ಮೆಚ್ಚಿಕೊಂಡಿದ್ದಾರೆ.

ಉತ್ತರ ಕರ್ನಾಟಕದವರೇ ರೂವಾರಿಗಳು

ಉತ್ತರ ಕರ್ನಾಟಕದವರೇ ರೂವಾರಿಗಳು

ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಈ ಪೇಜ್‌ಗಳನ್ನು ರೂಪಿಸಿದವರು ಉತ್ತರ ಕರ್ನಾಟಕದವರೆ. ಇವರಲ್ಲಿ ಕೆಲವರು ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುವ ಸಾಪ್ಟ್ ವೇರ್ ಎಂಜಿನಿಯರ್‌ಗಳು, ಉದ್ಯಮಿಗಳು, ಎಂಜಿನಿಯರಿಂಗ್, ವಾಣಿಜ್ಯ, ಎಂಸಿಎ, ಬಿಬಿಎ, ಬಿಸಿಎ ವಿದ್ಯಾರ್ಥಿಗಳು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸೇರಿ ಈ ಪೇಜ್‌ಗಳನ್ನು ರಚಿಸಿದ್ದಾರೆ.

ಬಹಿರಂಗವಾಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ

ಬಹಿರಂಗವಾಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ

ಹಾಗಂತ ಇವರೆಲ್ಲ ಒಂದೇ ಕಡೆಯಲ್ಲಿ ನೆಲೆಸಿಲ್ಲ. ಕೆಲವರು ಹೊರ ರಾಜ್ಯದಲ್ಲಿದ್ದರೆ ಇನ್ನು ಕೆಲವರು ರಾಜ್ಯದ ವಿವಿಧೆಡೆಗಳಲ್ಲಿ ನೆಲೆಸಿದ್ದಾರೆ. ವಾಟ್ಸ್‌ಆಪ್ ಗ್ರೂಪ್‌ಗಳನ್ನು ರಚಿಸಿಕೊಂಡು ಆ ಮೂಲಕ ಚರ್ಚಿಸುತ್ತಾ ಪೋಸ್ಟ್‌ಗಳನ್ನು ಮಾಡುತ್ತಾರೆ. ಆದರೆ, ಅವರ‍್ಯಾರು ಬಹಿರಂಗವಾಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆಯೇ ಈ ಮೂಲಕ ಅವರು ಎಂದೂ ಪ್ರಚಾರ ಬಯಸಿದವರಲ್ಲ. ತೆರೆಮರೆಯಲ್ಲಿಯೇ ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

English summary
A collection of Facebook Pages dedicated to North Karnataka. These are the vibrant pages which portray life, times, issues, character and traits of the region. Neglected part of the State in a net-shell. A Oneindia Kannada community corner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X