ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ: ಬಾಕ್ಸ್‌ ಮೇಲೆ ಹೀಗೆ ಬರೆದಿತ್ತು

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 21: ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಪೋಟ ಸಂಭವಿಸಿದ್ದು, ಓರ್ವ ವ್ಯಕ್ತಿಯ ಕೈ ಕಟ್ ಆಗಿದೆ.

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಹೆಸರಿನಲ್ಲಿ ಬಾಕ್ಸ್ ಒಂದು ಬಂದಿತ್ತು. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಾಕ್ಸ್ ಸ್ಫೋಟಗೊಂಡಿದೆ ಎನ್ನಲಾಗಿತ್ತು, ಆದರೆ ಬಳಿಕ ಅದು ಖಾನಾಪುರ ಅಲ್ಲ ಕೊಲ್ಹಾಪುರ ಶಾಸಕರ ಹೆಸರಲ್ಲಿ ಬಂದಿದ್ದ ಬಾಕ್ಸ್ ಎಂದು ಹೇಳಲಾಗುತ್ತಿದೆ.

ಘಟನೆಯಲ್ಲಿ ಓರ್ವ ವ್ಯಕ್ತಿಯ ಕೈ ಕತ್ತರಿಸಿಹೋಗಿದೆ. ರೈಲ್ವೆ ನಿಲ್ದಾಣದಲ್ಲಿ ಬಾಕ್ಸ್ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಕಾರಣ, ಅದರಲ್ಲೇನಿದೆ ಎಂದು ಬಾಕ್ಸ್ ತೆರೆದಾಗ ಸ್ಫೋಟ ಸಂಭವಿಸಿದೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಿಡಲಾಗುತ್ತಿದೆ.

Recommended Video

ಬಾಗಲಕೋಟೆ-ಕುಡಚಿ ನಡುವೆ ರೈಲ್ ಹಾಗು ಬಸ್ ಸೇವೆ ಆರಂಭ | Oneindia Kannada

ಅಫ್ಗಾನಿಸ್ತಾನದ ಮಸೀದಿಯೊಳಗೆ ಬಾಂಬ್ ಸ್ಫೋಟ; ಕನಿಷ್ಠ 28 ಸಾವುಅಫ್ಗಾನಿಸ್ತಾನದ ಮಸೀದಿಯೊಳಗೆ ಬಾಂಬ್ ಸ್ಫೋಟ; ಕನಿಷ್ಠ 28 ಸಾವು

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ, ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಯಾವ ದ್ವೇಷಕ್ಕೆ ಈ ರೀತಿ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬಾಕ್ಸ್‌ನಲ್ಲಿದ್ದ ಸ್ಫೋಟಕ ವಸ್ತು ಯಾವುದು ಎಂದು ಕಂಡುಹಿಡಿಯಲು ಸ್ಯಾಂಪಲ್‌ನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

ಶೀಘ್ರವೇ ಮಾಹಿತಿ ಲಭ್ಯವಾಗಲಿದೆ. ಆದರೆ ಅಂಜಲಿ ನಿಂಬಾಳ್ಕರ್ ಅವರ ಹೆಸರಿನಲ್ಲಿ ಈ ಬಾಕ್ಸ್ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೇನುಲಭ್ಯವಾಗಬೇಕಿದೆ.

ಹುಸೇನಬಾಬ ಮಕಾನವಾಲೆ. ರೈಲ್ವೆ ನಿಲ್ದಾಣದಲ್ಲಿ ಟಿಫಿನ್ ಮಾರಾಟ ಮಾಡುವ ವ್ಯಕ್ತಿ. ಅಮರಾವತಿ ಎಕ್ಸಪ್ರೇಸ್ ರೈಲಿನಲ್ಲಿದ್ದ ಬಾಕ್ಸನ ಆರ್ ಫಿಎಫ್ ಪೇದೆ ರೈಲಿನಿಂದ ಕೆಳೆಗಳಿಸಿ ಹುಸೇನಸಾಬಗೆ ಓಪನ್ ಮಾಡುವಂತೆ ಸೂಚಿಸಿದಾಗ ಸ್ಟೋಟವಾಗಿದೆ‌.

ನೋ ಬಿಜೆಪಿ, ನೋ ಕಾಂಗ್ರೆಸ್ ಒನಲೀ ಶಿವಸೇನಾ ಎಂದು ಸ್ಫೋಟಕವಿದ್ದ ಬಾಕ್ಸ್ ಮೇಲೆ ಬರೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಂದಿ ಹಿಡಿಯುವ ವೇಳೆ ಬಳಸುವ ಸ್ಫೋಟಕ ಇದು ಎಂದು ತಿಳಿದುಬಂದಿದೆ. ಮಹಾರಾಷ್ಟ್ರ ಎಲೆಕ್ಷನ್ ಗೆ ಸಂಬಂಧಿಸಿರಬಹುದು ಎನ್ನಲಾಗುತ್ತಿದೆ.

ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಬಾಕ್ಸ್‌ ಸ್ಫೋಟ

ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಬಾಕ್ಸ್‌ ಸ್ಫೋಟ

ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಬಾಕ್ಸ್‌ ಸ್ಫೋಟಗೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಚಿಕಿತ್ಸೆಗಾಗಿ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂದ್ರಪ್ರದೇಶ ಮೂಲದ ವ್ಯಕ್ತಿಯೊಬ್ಬನ ಕೈಯಲ್ಲಿದ್ದ ಅನುಮಾನಾಸ್ಪದ ಬಾಕ್ಸ್ ಇದ್ದಕ್ಕಿದಂತೆಯೇ ಬಾಕ್ಸ್ ಬ್ಲಾಸ್ಟ್ ಆಗಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಆರ್ ಪಿಎಫ್ ಹಾಗೂ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.

ಉಳಿದ ಬಾಕ್ಸ್‌ಗಳು ಬಯಲು ಪ್ರದೇಶಕ್ಕೆ

ಉಳಿದ ಬಾಕ್ಸ್‌ಗಳು ಬಯಲು ಪ್ರದೇಶಕ್ಕೆ

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಪ್ರಕರಣ,ಇನ್ನುಳಿದ ಬಾಕ್ಸ್ ಗಳನ್ನ ಬಯಲು ಪ್ರದೇಶಕ್ಕೆ ಬಾಂಬ್ ನಿಷ್ಕ್ರಿಯ ದಳ ತಂದಿದೆ. ರೈಲ್ವೆ ನಿಲ್ದಾಣದ ಆವರಣದಲ್ಲಿ ರುವ ಬಯಲು ಪ್ರದೇಶಗಳಲ್ಲಿ ತಂದಿಟ್ಟ ಬಾಂಬ್ ನಿಷ್ಕ್ರಿಯದಳ.

ಮರಳಿನ ಚೀಲಗಳ ರಾಶಿಯಲ್ಲಿ ಹತ್ತಕ್ಕು ಹೆಚ್ಚು ಬಾಕ್ಸ್‌ಗಳನ್ನು ನಿಷ್ಕ್ರಿಯ ದಳ ತಂದಿಟ್ಟಿದೆ.

ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹುಸೇನಬಾಬ ಮಕಾನವಾಲೆ. ರೈಲ್ವೆ ನಿಲ್ದಾಣದಲ್ಲಿ ಟಿಫಿನ್ ಮಾರಾಟ ಮಾಡುವ ವ್ಯಕ್ತಿ. ಅಮರಾವತಿ ಎಕ್ಸಪ್ರೇಸ್ ರೈಲಿನಲ್ಲಿದ್ದ ಬಾಕ್ಸನ ಆರ್ ಫಿಎಫ್ ಪೇದೆ ರೈಲಿನಿಂದ ಕೆಳೆಗಳಿಸಿ ಹುಸೇನಸಾಬಗೆ ಓಪನ್ ಮಾಡುವಂತೆ ಸೂಚಿಸಿದಾಗ ಸ್ಟೋಟಗೊಂಡಿದೆ.

ನೋ ಬಿಜೆಪಿ, ನೋ ಕಾಂಗ್ರೆಸ್ ಎಂದು ಬರೆದಿತ್ತು

ನೋ ಬಿಜೆಪಿ, ನೋ ಕಾಂಗ್ರೆಸ್ ಎಂದು ಬರೆದಿತ್ತು

ನೋ ಬಿಜೆಪಿ, ನೋ ಕಾಂಗ್ರೆಸ್ ಒನಲೀ ಶಿವಸೇನಾ ಎಂದು ಸ್ಫೋಟಕವಿದ್ದ ಬಾಕ್ಸ್ ಮೇಲೆ ಬರೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಂದಿ ಹಿಡಿಯುವ ವೇಳೆ ಬಳಸುವ ಸ್ಫೋಟಕ ಇದು ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಎಲೆಕ್ಷನ್ ಗೆ ಸಂಬಂಧಿಸಿರಬಹುದು ಎನ್ನಲಾಗುತ್ತಿದೆ.

English summary
The explosion at Hubballi railway station Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X