ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಕೆಳಗಿಳಿಯಲು ಆಗದೆ ಒಂದು ಗಂಟೆ ಆಗಸದಲ್ಲೇ ಸುತ್ತು ಹೊಡೆದ ವಿಮಾನ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 16: ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ಹವಾಮಾನ ವೈಪರೀತ್ಯದಿಂದ ಕೆಳಗಿಳಿಯಲು ಸಾಧ್ಯವಾಗದೆ ಒಂದು ಗಂಟೆ ಕಾಲ ಆಗಸದಲ್ಲಿಯೇ 9 ಸುತ್ತು ಹೊಡೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Recommended Video

Sri Ramulu, ಸಚಿವರ ಆರೋಗ್ಯದಲ್ಲಿ ಚೇತರಿಕೆ | Oneindia Kannada

ಇತ್ತೀಚಿಗೆ ಕೇರಳದಲ್ಲಿನ ಏರ್ ಇಂಡಿಯಾ ವಿಮಾನ ದುರಂತ ಮಾಸುವ ಮುನ್ನವೇ ಹವಾಮಾನ ವೈಪರೀತ್ಯದಿಂದ ಮತ್ತೊಂದು ಆತಂಕ ಇಂಡಿಗೋ ವಿಮಾನಕ್ಕೆ ಎದುರಾಗಿತ್ತು.

 ಪ್ರಧಾನಿ ಪ್ರಯಾಣಕ್ಕೆ 8,500 ಕೋಟಿ ರೂಪಾಯಿಯ ವಿಮಾನಗಳು: ಏನಿದರ ವಿಶೇಷತೆ? ಪ್ರಧಾನಿ ಪ್ರಯಾಣಕ್ಕೆ 8,500 ಕೋಟಿ ರೂಪಾಯಿಯ ವಿಮಾನಗಳು: ಏನಿದರ ವಿಶೇಷತೆ?

ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡಿಂಗ್ ಆಗದೆ ಕೇರಳದಲ್ಲಿ ವಿಮಾನ ಪತನ ಸಂಭವಿಸಿತ್ತು. ಇದರ ಬೆನ್ನಲ್ಲೆ ಇಂದು ಹವಾಮಾನ ವೈಪರೀತ್ಯದಿಂದ ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್‌ಗೆ ಅನುಮತಿ ಇಲ್ಲದೆ, ಒಂದು ಗಂಟೆಯ ಕಾಲ ಆಗಸದಲ್ಲಿ ಸುತ್ತು ಹೊಡೆದಿದೆ.

Due To Bad Weather Anantkumar Hegde Flight Stuck In Mid-Air

60 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನವು ಮುಂಜಾನೆ 8.55ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಲ್ಯಾಂಡಿಂಗ್ ಗೆ ಅನುಮತಿ ನೀಡದ ಪರಿಣಾಮ ಒಂದು ಗಂಟೆಯ ಕಾಲ ವಿಮಾನ ಆಗಸದಲ್ಲಿ ಸುತ್ತು ಹೊಡೆಯಿತು.

ಕೇರಳ ವಿಮಾನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ ಸೋಂಕು ಕೇರಳ ವಿಮಾನ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ ಸೋಂಕು

ಒಂದು ಗಂಟೆಯ ನಂತರ ಇಂಡಿಗೋ 6E7162 ಎಟಿಆರ್ ವಿಮಾನ ಲ್ಯಾಂಡಿಗ್ ಆಗುವ ಮೂಲಕ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ವಿಮಾನದಲ್ಲಿ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಕಾರವಾರಕ್ಕೆ ತೆರಳುತ್ತಿದ್ದರು. ವಿಮಾನದ ಲ್ಯಾಂಡಿಂಗ್ ಸಮಸ್ಯೆಯಾದ ಪರಿಣಾಮ ಪ್ರಯಾಣಿಕರು ಕೆಲಕಾಲ ಆತಂಕಕ್ಕೂ ಸಹ ಒಳಗಾಗಿದ್ದರು.

English summary
Today the landing of the IndiGo flight due to weather conditions has been delayed for over an hour in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X