ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಮಾದಕ ವಸ್ತುಗಳ ಪತ್ತೆ ವಿಭಾಗ ಸ್ಥಾಪನೆ; ಸಿಎಂ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 06: " ಹುಬ್ಬಳ್ಳಿಯಲ್ಲಿ ಶೀಘ್ರದಲ್ಲಿಯೇ ಮಾದಕ ವಸ್ತುಗಳ ಪತ್ತೆ ವಿಭಾಗವನ್ನು ಸ್ಥಾಪಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಮುಖ್ಯಮಂತ್ರಿಗಳು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಪೊಲೀಸ್ ಇಲಾಖೆಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಪಥದ ರಸ್ತೆ ನಿರ್ಮಾಣಕ್ಕೆ ಚಾಲನೆ ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಪಥದ ರಸ್ತೆ ನಿರ್ಮಾಣಕ್ಕೆ ಚಾಲನೆ

ಮುಖ್ಯಮಂತ್ರಿಗಳು ಮಾನಾಡಿ, "ಡಿಎನ್‍ಎ, ಸೈಬರ್, ಮೊಬೈಲ್, ದಾಖಲೀಕರಣ ಹಾಗೂ ಆಡಿಯೋ ವೀಡಿಯೋ ವಿಭಾಗಗಳನ್ನು ಈ ಭಾಗದಲ್ಲಿ ತೆರೆಯಲಾಗಿದೆ. ಮಾದಕವಸ್ತುಗಳ ವಿಭಾಗವನ್ನು ಪ್ರಾರಂಭಿಸುವ ಅಗತ್ಯವಿದೆ. ಈಗಾಗಲೇ 80 ಮಂದಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿ ಪಡೆದ ನಂತರ ಹುಬ್ಬಳ್ಳಿ ಮತ್ತು ಬಳ್ಳಾರಿಗೆ ಇವರನ್ನು ನೇಮಕ ಮಾಡಲು ಸೂಚನೆ ನೀಡಲಾಗಿದೆ" ಎಂದರು.

ಹುಬ್ಬಳ್ಳಿ; ಉಕ್ರೇನ್‌ನಿಂದ ವಾಪಸ್ ಆದ ವಿದ್ಯಾರ್ಥಿನಿ ಸ್ವಾಗತಿಸಿದ ಸಿಎಂ ಹುಬ್ಬಳ್ಳಿ; ಉಕ್ರೇನ್‌ನಿಂದ ವಾಪಸ್ ಆದ ವಿದ್ಯಾರ್ಥಿನಿ ಸ್ವಾಗತಿಸಿದ ಸಿಎಂ

"ಅಪರಾಧಗಳನ್ನು ನಿಯಂತ್ರಿಸಲು ಕಾನೂನು ಸದಾ ಅಪರಾಧಕ್ಕಿಂತಲೂ ಮುಂಚತವಾಗಿಯೇ ರೂಪುಗೊಳ್ಳಬೇಕು. ಅದಕ್ಕಾಗಿ ವಿಜ್ಞಾನ, ತರಬೇತಿ, ಇಂದೀಕರಣ ಎಲ್ಲವೂ ನಿರಂತರವಾಗಿ ನಡೆಯಬೇಕು. ಮಾದಕವಸ್ತುಗಳ ನಿಯಂತ್ರಣಕ್ಕಾಗಿ ನಮ್ಮ ರಾಜ್ಯ ಪೋಲೀಸರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ ವಶ ಪಡಿಸಿಕೊಂಡಷ್ಟು ಮಾದಕ ವಸ್ತುವನ್ನು ಒಂದು ವರ್ಷದಲ್ಲಿ ಕರ್ನಾಟದಲ್ಲಿ ವಶಪಡಿಸಿಕೊಳ್ಳಲಾಯಿತು. ಸರ್ಕಾರ ಅದನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಅತಿ ಹೆಚ್ಚು ಮುಟ್ಟುಗೋಲು ಹಾಕಿಕೊಂಡಿದ್ದು, ಹೆಚ್ಚಿನ ಪ್ರಕರಣಗಳು ಹಾಗೂ ಬಂಧನಗಳನ್ನು ಕರ್ನಾಟಕ ಪೊಲೀಸರು ಮಾಡಿದ್ದಾರೆ" ಎಂದು ತಿಳಿಸಿದರು.

ತಾಳಗುಪ್ಪ-ಹುಬ್ಬಳ್ಳಿ ಮಾರ್ಗ; ಸಮೀಕ್ಷೆ ವರದಿ ಕೇಳಿದ ರೈಲ್ವೆ ಮಂಡಳಿ ತಾಳಗುಪ್ಪ-ಹುಬ್ಬಳ್ಳಿ ಮಾರ್ಗ; ಸಮೀಕ್ಷೆ ವರದಿ ಕೇಳಿದ ರೈಲ್ವೆ ಮಂಡಳಿ

ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಕ್ರಮ

ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಕ್ರಮ

"ಬದ್ಧತೆಯಿದ್ದರೆ, ವಾಸ್ತವ ರೂಪಕ್ಕೆ ಯೋಜನೆಗಳು ಬರುತ್ತವೆ. ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಎಫ್. ಎಸ್. ಎಲ್ ಪ್ರಯೋಗಾಲಯಗಳನ್ನು ಸ್ಥಾಪಿಸಲು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಬಾರಿ ಅದು ಅಸ್ತಿತ್ವಕ್ಕೆ ಬಂದಿರುವುದಕ್ಕೆ ಸಂತೋಷ. ಎಫ್. ಎಸ್. ಎಲ್ ಪ್ರಯೋಗಾಲಯಗಳು ಅಪರಾಧ ಪತ್ತೆ ಹಚ್ಚಲು ಮಹತ್ವದ ಪಾತ್ರ ನಿರ್ವಹಿಸುತ್ತವೆ. ನ್ಯಾಯಾಲಯಗಳಲ್ಲಿ ಸಾಕ್ಷ್ಯಾಧಾರಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಪ್ರಯೋಗಾಲಯಗಳು ಒದಗಿಸುತ್ತವೆ. ಇಂಥ ಪ್ರಯೋಗಾಯ ಕೇವಲ ಬೆಂಗಳೂರಿನಲ್ಲಿ ಮಾತ್ರವಿತ್ತು. ಡಿಎನ್‍ಎ ಮತ್ತು ಸೈಬರ್ ಅಪರಾಧಗಳ ಪತ್ತೆಯ ವರದಿಗಳು 2-3 ತಿಂಗಳಲ್ಲಿ ಲಭ್ಯವಾಗುತ್ತಿವೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

"ಸೈಬರ್ ಅಪರಾಧಗಳು ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚಾಗುತ್ತಿವೆ. ಅದಕ್ಕೂ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಲಾಗಿದೆ. ಸೈಬರ್ ಅಪರಾಧಗಳನ್ನು ತಡೆಯಲು ಖಾತೆಯಿಂದ ಹಣ ಕಡಿತವಾಗಿರುವ ಸಂದೇಶ ಬಂದ ಕೂಡಲೇ ಅದು ಫ್ರಾಡ್ ಎಂದು ಗೊತ್ತಾಗುತ್ತಿದ್ದಂತೆಯೇ 112 ಗೆ ಕರೆ ಮಾಡಿದರೆ ಒಂದು ಸಂಖ್ಯೆ ಜನರೇಟ್ ಆಗುತ್ತದೆ. ಅಪರಾಧ ಎಸಗಿರುವವರ ಖಾತೆ ಮತ್ತು ಹಣ ಕಳೆದುಕೊಂಡಿರುವವ ಖಾತೆಯ ಮಾಹಿತಿಯಿಂದ 20 ನಿಮಿಷಗಳೊಳಗೆ ಖಾತೆ ಬ್ಲಾಕ್ ಮಾಡಿ ಹಣ ಹಿಂದಿರುಗಿ ಪಡೆಯಲು ಸಾಧ್ಯವಾಗಿದೆ. ಇದು ಕರ್ನಾಟಕದಿಂದಲೇ ಪ್ರಾರಂಭವಾಗಿರುವುದು ಹೆಮ್ಮೆಯ ಸಂಗತಿ" ಎಂದರು.

ಸ್ಥಳೀಯ ಉತ್ಪನ್ನ, ಪ್ರತಿಭೆಗೆ ಪ್ರೋತ್ಸಾಹ

ಸ್ಥಳೀಯ ಉತ್ಪನ್ನ, ಪ್ರತಿಭೆಗೆ ಪ್ರೋತ್ಸಾಹ

"ಆದಷ್ಟು ಬೇಗನೇ ಎಫ್‍ಎಂಸಿಜಿ ಸ್ಥಾಪನೆಗೆ ಆದೇಶ ಮಾಡಲಾಗಿದ್ದು, ಈಗಾಗಲೇ ಸ್ಥಳ ನಿಗದಿಯಾಗಿದೆ. ಕ್ಲಸ್ಟರ್ ಬೇಗ ನಿರ್ಮಾಣವಾದಲ್ಲಿ ಯುವಕರಿಗೆ ಉದ್ಯೋಗ ದೊರೆಯಲಿದೆ. ಇಲ್ಲಿ ಕನಿಷ್ಠ ವಿದ್ಯಾರ್ಹತೆ ಪಡೆದವರಿಂದ ಹಿಡಿದು ತಾಂತ್ರಿಕ ಶಿಕ್ಷಣ ಪಡೆದವರಿಗೂ ಉದ್ಯೋಗ ದೊರೆಯಲಿದೆ. ಉತ್ತರ ಕರ್ನಾಟಕದ ಎಲ್ಲಾ ಆರ್ಥಿಕ ಮತ್ತು ಶೈಕ್ಷಣಿಕ ಸ್ಥರಗಳ ಯುವಕರಿಗೆ ಉದ್ಯೋಗ ಸಿಗುವುದು ಇದರ ವೈಶಿಷ್ಟ್ಯತೆ. ಉದ್ಯೋಗ ನೀತಿಯನ್ನು ರೂಪಿಸುವುದಾಗಿ ಘೋಷಣೆ ಮಾಡಲಾಗಿದೆ. ಉದ್ಯೋಗ ಹೆಚ್ಚು ನೀಡುವವರಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲಾಗುವುದು. ಜವಳಿ ಕೇಂದ್ರ, ಎಫ್‍ಎಂಸಿಜಿ, ಸೆಮಿ ಕಂಡ್ಟರ್, ಹಲವಾರು ವಲಯಗಳನ್ನು ಗುರುತಿಸಿದ್ದೇವೆ. ಸ್ಥಳೀಯವಾಗಿ ತಯಾರಾಗುವ ಪ್ರಸಿದ್ಧ ವಸ್ತುಗಳಿಗೆ ಇಂಬು ನೀಡಿ, ಹಣಕಾಸಿನ ಸಹಾಯ, ಬ್ರಾಂಡಿಂಗ್, ತಾಂತ್ರಿಕತೆ, ಮಾರುಕಟ್ಟೆ ವ್ಯವಸ್ಥೆ ನೀಡಿದರೆ ಬಹಳ ದೊಡ್ಡ ಪ್ರಮಾಣದಲ್ಲಿ ಅವುಗಳ ಬೆಳವಣಿಗೆ ಕಾಣಬಹುದು" ಎಂದು ಮುಖ್ಯಮಂತ್ರಿಗಳು ಹೇಳಿದರು.

ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು

ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು

"ಕಲ್ಯಾಣ ಕರ್ನಾಟಕದ ಶಹಾಬಾದಿನಿಂದ ಗುಳೇಗುಡ್ಡದ ಮೊಳಕಾಲ್ಮೂರು ಸೀರೆಯಿಂದ ಹಿಡಿದು ಧಾರವಾಡದ ಕಸೂರಿ , ನವಲಗುಂದದ ಜಮಖಾನೆಯವರೆಗೂ ಸ್ಥಳೀಯ ಪ್ರತಿಭೆಗೆ ಕ್ಲಸ್ಟರ್ ರೂಪಿಸಿ ತಾಂತ್ರಿಕ ಬೆಂಬಲ ನೀಡಿದರೆ ಅಲ್ಲಿಯೇ ಹೆಚ್ಚಿನ ಉದ್ಯೋಗವನ್ನು ಸೃಷ್ಟಿ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಮಹತ್ವಾಕಾಂಕ್ಷಿ ಬಜೆಟ್ ಅನ್ನು ಮಂಡಿಸಲಾಗಿದೆ. ಇದನ್ನು ಪ್ರಾಮಾಣಿವಾಗಿ ಅನುಷ್ಠಾನ ಮಾಡಲು 24*7 ಸರ್ಕಾರ ಕೆಲಸ ಮಾಡಲಿದೆ" ಎಂದು ಭರವಸೆ ನೀಡಿದರು.

"ಕರ್ನಾಟಕ ಕ್ಯಾನ್ಸರ್ ಸಂಸ್ಥೆ 25 ವರ್ಷಗಳಿಂದ ಉತ್ತಮ ಕೆಲಸ ಮಾಡಿದೆ. ಅಲ್ಲಿಗೆ ಆಧುನಿಕ ಉಪಕರಣಗಳನ್ನು ಖರೀದಿಸಲು ಹೆಚ್ಚಿನ ಹಣಕಾಸಿನ ನೆರವನ್ನು ಈಗಾಗಲೇ ಬಜೆಟ್‍ನಲ್ಲಿ ಮೀಸಲಿರಿಸಿದೆ. ಕೃಷಿ, ಕೈಗಾರಿಕೆ, ಮತ್ತು ಸೇವಾ ವಲಯದಲ್ಲಿ ಬೆಳವಣಿಗೆ ಮಾಡುವ ತೀರ್ಮಾನ ಮಾಡಿ, ಬೆಳವಣಿಗೆಗೆ ಕೇಂದ್ರಿತ, ಎಲ್ಲವನ್ನೂ ಒಳಗೊಂಡ, ಸಾಮಾಜಿಕ ಮತ್ತು ಪ್ರಾದೇಶಿಕ ಸಮಾನತೆ ತರುವ ಬಜೆಟ್ ಮಂಡಿಸಲಾಗಿದೆ. ಲಿಂಗ ಸಮಾನತೆ ತರಲು ಹೆಣ್ಣು ಮಕ್ಕಳಿಗೆ ಹೆಚ್ಚು ಅವಕಾಶಗಳನ್ನು ನೀಡುವ ಯೋಜನೆಗಳಿವೆ. ಸಮಗ್ರವಾದ ಬಜೆಟ್ ಆಗಿದೆ. ಇದನ್ನು ರೂಪಿಸಲು ಬಹಳಷ್ಟು ಚಿಂತನೆ ಮಾಡಲಾಗಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನ

ಕಾಲಮಿತಿಯೊಳಗೆ ಯೋಜನೆಗಳ ಅನುಷ್ಠಾನ

"ಉತ್ತರ ಕರ್ನಾಟಕ ಅಭಿವೃದ್ದಿಗೆ ಬಜೆಟ್‌ನಲ್ಲಿ ಹೇಳಿರುವುದನ್ನು ನಿಗದಿತ ಸಮಯದಲ್ಲಿ ಕಾರ್ಯಗತವಾಗಿ, ಬಡಜನರಿಗೆ, ಯುವಕರಿಗೆ, ಶಿಕ್ಷಣದಿಂದ ವಂಚಿತರಾದವರಿಗೆ ಸೌಲಭ್ಯ ದೊರಕಿಸಲಾಗಿದೆ. ಧಾರವಾಡದಿಂದ ಬೆಳಗಾವಿ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರದಲ್ಲಿಯೇ ಇದನ್ನು ಪ್ರಾರಂಭಿಸಲಾಗುವುದು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಪರಿಸರದ ಅನುಮೋದನೆ ಪಡೆದು ಇದೇ ವರ್ಷ ಪ್ರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೆರವಿನಿಂದ ಮಾಡಲಾಗುವುದು" ಎಂದರು.

Recommended Video

ರಷ್ಯಾ ಯುದ್ಧದ ಟ್ಯಾಂಕ್ ಮೇಲೆ ಸವಾರಿ ಮಾಡಿ ಎಂಜಾಯ್ ಮಾಡಿದ ಉಕ್ರೇನ್ ಜನ | Oneindia Kannada

English summary
Chief minister of Karnataka Basavaraj Bommai said that drug detection division to set up at Hubballi soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X