ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ವೈದ್ಯರ ಎಡವಟ್ಟಿಗೆ ಎರಡು ವರ್ಷದ ಮಗು ಬಲಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 19: ವೈದ್ಯರನ್ನು ಭೂಮಿ ಮೇಲಿರುವ ಜೀವ ಉಳಿಸುವ ದೇವರು ಎಂದು ಅದೆಷ್ಟೋ ಜನ ಪೂಜಿಸ್ತಾರೆ. ಆದ್ರೆ ಅದೇ ವೈದ್ಯರು ಮಾಡುವ ಚಿಕ್ಕ ತಪ್ಪಿನಿಂದ ಇಡೀ ಕುಟುಂಬ ಕಣ್ಣೀರಿನಲ್ಲೇ ಬಾಳುವಂತ ಪರಿಸ್ಥಿತಿಗಳು ಎದುರಾಗುತ್ತವೆ. ಸದ್ಯ ಕಿಮ್ಸ್‌ ವೈದ್ಯರಿಂದ ಮತ್ತೊಂದು ಮಹಾ ಎಡವಟ್ಟು ನಡೆದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ವರ್ಷದ ಮಗು ಬಲಿಯಾಗಿದೆ.

ಸಂಜಯ್ ಹಾಗೂ ಕೀರ್ತಿ ದಂಪತಿಯ ಮುದ್ದಾದ ಮಗು ರಕ್ಷಾ ಚೌಧರಿಗೆ ಬಾಯಿಯೊಳಗೆ ಗಡ್ಡೆಯಾಗಿದ್ದ ಕಾರಣ ಕಂದಮ್ಮನನ್ನು ಪೋಷಕರು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಆದ್ರೆ ಪೋಷಕರ ಅನುಮತಿ ಪಡೆಯದೇ ವೈದ್ಯರು ಮಗುವಿಗೆ ಆಪರೇಷನ್ ಮಾಡಿದ್ದಾರೆ. ಅಪರೇಷನ್ ಬಳಿಕ ತೀವ್ರ ರಕ್ತಸ್ರಾವ ಆಗಿ ಮಗು ಪ್ರಾಣ ಬಿಟ್ಟಿದೆ. ಅಡ್ಮಿಟ್ ಆಗುವ ವೇಳೆ ಚೆನ್ನಾಗಿಯೇ ಇದ್ದ ಕಂದಮ್ಮ ಸರ್ಜರಿ ಬಳಿಕ ರಕ್ತಸ್ರಾವದಿಂದ ಮೃತಪಟ್ಟಿದೆ. ನಗು ನಗುತ್ತಲೇ ಮಗು ಆಸ್ಪತ್ರೆಗೆ ಅಡ್ಮಿಟ್ ಆಗಿತ್ತು. ಆಸ್ಪತ್ರೆಯ ಬೆಡ್ ಮೇಲೆ ನಗುತ್ತಾ ಆಟವಾಡಿತ್ತು ಈಗ ಈ ರೀತಿ ಕಣ್ಣು ಮುಚ್ಚಿಕೊಂಡಿದೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಹಿಜಾಬ್ ವಿವಾದ: ನಾನೇಕೆ ಕ್ಷಮೆ ಕೇಳಬೇಕು?; ಡಿಕೆಶಿಗೆ ಜಮೀರ್​ ಅಹ್ಮದ್ ಡಿಚ್ಚಿಹಿಜಾಬ್ ವಿವಾದ: ನಾನೇಕೆ ಕ್ಷಮೆ ಕೇಳಬೇಕು?; ಡಿಕೆಶಿಗೆ ಜಮೀರ್​ ಅಹ್ಮದ್ ಡಿಚ್ಚಿ

ಇನ್ನು ವೈದ್ಯರು ಆಪರೇಷನ್ ಮಾಡಿದ ಬಳಿಕ ತೀವ್ರ ರಕ್ತಸ್ರಾವ ಆದ ಕಾರಣ ಖಾಸಗಿ ಆಸ್ಪತ್ರೆಗೆ ಮಗುವನ್ನು ಕಳುಹಿಸಲಾಗಿತ್ತು. ಅಲ್ಲಿಯೂ ರಕ್ತಸ್ರಾವ ನಿಲ್ಲದ ಹಿನ್ನಲೆ ವಾಪಸ್ ಕಿಮ್ಸ್‌ ಕಳಿಸಿದ್ದಾರೆ. ಕಿಮ್ಸ್‌ ವಾಪಸ್ ಬಂದ ಮೇಲೆ ಮಗು ಉಸಿರು ನಿಲ್ಲಿಸಿದೆ. ಕಿಮ್ಸ್‌ ಬಳಿ ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುದ್ದಾದ ಮಗು ಕಳೆದುಕೊಂಡ ತಾಯಿಯ ಕಣ್ಣೀರು ನಿಲ್ಲುತಿಲ್ಲ. ನಮ್ಮ ತಪ್ಪೇನು ಇಲ್ಲ ಅಂತ ವೈದ್ಯರು ಹೇಳ್ತಿದ್ದಾರೆ.

Hubballi: Doctor Negligence alleged after girl child dies at KIMS

ಎರಡೂ ವರ್ಷ ನಾಲ್ಕು ತಿಂಗಳ ಮಗು, ಮೊದಲೆ ವೈದ್ಯರು ನಮಗೆ ಸೂಚಿಸಿದ್ದರು, ಆ ಪ್ರಕಾರ ನಾವು ಕಿಮ್ಸ್ ಅಡ್ಮಿಟ್ ಮಾಡಿದ್ದೆವು. ನಮ್ಮ ಮಗು ಆರೋಗ್ಯವಾಗಿತ್ತು. ಆದ್ರೆ ಏಕಾಏಕಿ ಮಗು ಸಾವನ್ನಪಿದೆ ಅಂತ ವೈದ್ಯರು ತಿಳಿಸಿದ್ದಾರೆ. ಇದು ನಮಗೆ ನಂಬಲಾಗುತ್ತಿಲ್ಲ. ಇವಾಗ ಕೇಳಿದ್ರೆ ನಮ್ಮ ತಪ್ಪೇನು ಇಲ್ಲ ಅಂತ ವೈದ್ಯರು ಹೇಳುತ್ತಿದ್ದಾರೆ. ಮಗು ಸಾವನ್ನಪ್ಪಿದ್ದಾರು ಹೇಗೆ? ಎಂದು ಮಗುವಿನ ತಾಯಿ ಕೀರ್ತಿ ಚೌಧರಿ ಕಣ್ಣೀರು ಹಾಕುತ್ತ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿ; ಕಿಮ್ಸ್ ಆವರಣದಲ್ಲಿ 24*7 ಸ್ವ್ಯಾಬ್ ಸಂಗ್ರಹ, ಚಿಕಿತ್ಸೆಹುಬ್ಬಳ್ಳಿ; ಕಿಮ್ಸ್ ಆವರಣದಲ್ಲಿ 24*7 ಸ್ವ್ಯಾಬ್ ಸಂಗ್ರಹ, ಚಿಕಿತ್ಸೆ

Hubballi: Doctor Negligence alleged after girl child dies at KIMS

ಆಸ್ಪತ್ರೆಗೆ ಬಂದ ಮೇಲೆ ಮಗು ಚೆನ್ನಾಗಿದೆ ಅಂತ ವೈದ್ಯರು ತಿಳಿಸಿದ್ದರು. ನಮ್ಮ ಅನುಮತಿ ಪಡೆಯದೆ ಮಗುವಿಗೆ ಸರ್ಜರಿ ಮಾಡಿದ್ದಾರೆ. ಬಳಿಕ ತೀವ್ರರಕ್ತಸ್ರಾವವಾಗಿದೆ. ಅದಕ್ಕೆ ಹೊಣೆ ಯಾರು? ಮೊದಲೆ ಹೀಗೆ ಆಗುತ್ತೆ ಎನ್ನೋದು ವೈದ್ಯರಿಗೆ ಗೊತ್ತಿರಲಿಲ್ಲವೇ. ಇವಾಗ ಕೇಳಿದ್ರೆ ಹ್ಯಾಮೆನ್ ಜಿಯೊಮ್ ಕಾಯಿಲೆ ಇತ್ತು ಎನ್ನುತ್ತಿದ್ದಾರೆ ಎಂದು ಮಗು ತಂದೆ ಸಂಜಯ್ ಚೌಧರಿ ಆಕ್ರೋಶ ಹೊರ ಹಾಕಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

ಆಧುನಿಕ ಕೃಷಿ ಪದ್ಧತಿಯ ಹೊಸ ಅಧ್ಯಾಯ,100 ಕಿಸಾನ್ ಡ್ರೋನ್ ಗಳಿಗೆ ಚಾಲನೆ ನೀಡಿದ PM Modi | Oneindia Kannada

English summary
Hubballi: Doctor Negligence alleged after two year old girl child dies at KIMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X