ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾರ ತುರಾಯಿ ಹಾಕಿಸಿಕೊಳ್ಳಲು ಬಂದಿಲ್ಲ: ಅಧಿಕಾರಿಗಳ ವಿರುದ್ಧ ಡಿಕೆಶಿ ಕಿಡಿ

|
Google Oneindia Kannada News

ಹುಬ್ಬಳ್ಳಿ, ಜೂನ್ 21: 'ಯಾರು ಯಾರು ಎಷ್ಟೆಷ್ಟು ಕಮಿಷನ್ ತೆಗೆದುಕೊಳ್ಳುತ್ತೀರ ಎಲ್ಲವನ್ನೂ ಹೇಳಬೇಕು. ಕಮಿಷನ್ ತಗೋತೀರಾ?'- ಹೀಗೆ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದಾಗ ಅಧಿಕಾರಿಯೊಬ್ಬರು 'ಹೌದು' ಎಂದು ಒಪ್ಪಿಕೊಂಡ ಪ್ರಸಂಗ ನಡೆಯಿತು.

ಕುಂದಗೋಳ ತಾಲ್ಲೂಕಿನಲ್ಲಿ ಶುಕ್ರವಾರ ಡಿಕೆ ಶಿವಕುಮಾರ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ಸರ್ಕಾರದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಅಧಿಕಾರಿಗಳು ಕಮಿಷನ್ ಪಡೆಯುತ್ತಾರೆಯೇ ಎಂದು ಸಚಿವರು ಕುಂದಗೋಳ ತಾಲ್ಲೂಕು ಇಒ ಎಂಎಸ್ ಮೇಟಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು 'ಹೌದು' ಎಂದು ಉತ್ತರಿಸಿದರು.

'ಅವರು ಸತ್ಯ ಹೇಳುತ್ತಿದ್ದಾರೆ' ಎಂದು ಡಿಕೆ ಶಿವಕುಮಾರ್ ಚಟಾಕಿ ಹಾರಿಸಿದರು. 'ನೀವು ಎಷ್ಟು ಹಣ ಪಡೆದುಕೊಳ್ಳುತ್ತೀರಿ ಎಂಬುದು ನನಗೆ ತಿಳಿದಿದೆ. ಅದರ ಆಡಿಯೋ ಇದೆ. ಕೇಳಿಸಲಾ' ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.

ಮಧ್ಯಂತರ ಚುನಾವಣೆ: ದೇವೇಗೌಡರ ಹೇಳಿಕೆಗೆ ಡಿಕೆಶಿ ಏನಂದ್ರು?ಮಧ್ಯಂತರ ಚುನಾವಣೆ: ದೇವೇಗೌಡರ ಹೇಳಿಕೆಗೆ ಡಿಕೆಶಿ ಏನಂದ್ರು?

'ನಾನು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಸಚಿವನಾಗಿರುವುದು. ನನಗೆ ಎಲ್ಲ ಇಲಾಖೆಗಳ ಬಗ್ಗೆ ಗೊತ್ತು. ನನಗೆ ತಪ್ಪು ಮಾಹಿತಿ ಕೊಡಲು ಹೋಗಬಾರದು. ಎಲ್ಲ ಅಂಕಿ ಅಂಶಗಳನ್ನು ಎಚ್ಚರಿಕೆಯಿಂದ ನೀಡಬೇಕು' ಎಂದು ಹೇಳಿದರು.

ಅಂಗಡಿ ಮಾಲೀಕರಿಗೆ ಕರೆ ಮಾಡಿ

ಅಂಗಡಿ ಮಾಲೀಕರಿಗೆ ಕರೆ ಮಾಡಿ

ಕುಂದಗೋಳದಲ್ಲಿ ಎಷ್ಟು ನ್ಯಾಯಬೆಲೆ ಅಂಗಡಿ ಇವೆ? ಎಂದು ಆಹಾರ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡಲಾಗದೆ ಅಧಿಕಾರಿ ಸುಮ್ಮನೆ ನಿಂತರು. ನಿಮ್ಮಲ್ಲಿ ಎಷ್ಟು ಹೊತ್ತಿಗೆ ನ್ಯಾಯಬೆಲೆ ಅಂಗಡಿಗಳು ಬಾಗಿಲು ತೆರೆಯುತ್ತವೆ? ಅಂಗಡಿ ಮಾಲೀಕರಿಗೆ ನನ್ನ ಎದುರೇ ಫೋನ್ ಮಾಡಿ, ಯಾವಾಗ ಬಾಗಿಲು ತೆರೆಯುತ್ತಾರೆ ಕೇಳಿ ಎಂದರು. ಕಂಗಾಲಾದ ಅಧಿಕಾರಿ ಯಾರಿಗೆ ಫೋನ್ ಮಾಡುವುದು ಎಂದು ತಿಳಿಯದೆ ತಡಬಡಾಯಿಸಿದರು.

ಡಿ.ಕೆ.ಶಿವಕುಮಾರ್ ತಾಯಿಗೆ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್‌ಡಿ.ಕೆ.ಶಿವಕುಮಾರ್ ತಾಯಿಗೆ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್‌

ಯಾರನ್ನು ಸಸ್ಪೆಂಡ್ ಮಾಡೋಣ

ಯಾರನ್ನು ಸಸ್ಪೆಂಡ್ ಮಾಡೋಣ

ಆಗ ಸಚಿವೆ ಜಯಮಾಲಾ, 'ಅವರ ನಂಬರ್ ಕೊಡಿ ನಾನೇ ಕಾಲ್ ಮಾಡುತ್ತೇನೆ' ಎಂದು ಅಧಿಕಾರಿಯನ್ನು ಕೇಳಿದರು. ಅಧಿಕಾರಿಯಿಂದ ಯಾವ ಉತ್ತರವೂ ದೊರಕದಿದ್ದಾಗ ಕಿಡಿಕಾರಿದ ಡಿಕೆ ಶಿವಕುಮಾರ್, 'ಯಾರನ್ನು ಸಸ್ಪೆಂಡ್ ಮಾಡೋಣ? ಇದುವ 40 ನ್ಯಾಯಬೆಲೆ ಅಂಗಡಿ ಮಾಲೀಕರ ನಂಬರ್ ಇಲ್ಲದಿದ್ದರೆ ಹೇಗೆ? ನಾವೇನು ಇಲ್ಲಿ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದಿಲ್ಲ. ನಮ್ಮನ್ನು ನೋಡಿ ಮಾಧ್ಯಮದವರು ನಗುತ್ತಿದ್ದಾರೆ' ಎಂದು ಸಿಟ್ಟಿನಿಂದ ಹೇಳಿದರು.

ಶಿವಳ್ಳಿ ಹಸು ಇದ್ದ ಹಾಗೆ

ಶಿವಳ್ಳಿ ಹಸು ಇದ್ದ ಹಾಗೆ

ಸಿಎಸ್ ಶಿವಳ್ಳಿ ಮತ್ತು ಅವರ ಪತ್ನಿ ಹಸು ಇದ್ದಹಾಗೆ. ಇಷ್ಟು ದಿನ ನೀವು ಹೇಳಿದ್ದಕ್ಕೆಲ್ಲ ಹೂಂಗುಟ್ಟುತ್ತಿದ್ದರು. ಆದರೆ ನಾನು ಹಾಗಲ್ಲ. ಎಲ್ಲದಕ್ಕೂ ಲೆಕ್ಕ ಬೇಕು. ಇದೇ ರೀತಿ ಸಭೆ ನಡೆಸಲು ಕುಸುಮಾ ಶಿವಳ್ಳಿ ಅವರನ್ನು ರೆಡಿ ಮಾಡುತ್ತಿದ್ದೇವೆ ಎಂದರು.

ಡಿ.ಕೆ.ಶಿವಕುಮಾರ್ ಆಸೆಗೆ ತಣ್ಣೀರು ಹಾಕಿದ ಸಿದ್ದರಾಮಯ್ಯ? ಡಿ.ಕೆ.ಶಿವಕುಮಾರ್ ಆಸೆಗೆ ತಣ್ಣೀರು ಹಾಕಿದ ಸಿದ್ದರಾಮಯ್ಯ?

ಹಾರ ತುರಾಯಿ ಹಾಕಿಸಿಕೊಳ್ಳಲು ಬಂದಿಲ್ಲ

ಹಾರ ತುರಾಯಿ ಹಾಕಿಸಿಕೊಳ್ಳಲು ಬಂದಿಲ್ಲ

ನಾವಿಲ್ಲಿ ಹಾರ ತುರಾಯಿ ಹಾಕಿಸಿಕೊಳ್ಳಲು, ಅಥವಾ ಜೈಕಾರ ಕೇಳಲು ಬಂದಿಲ್ಲ. ಅಭಿವೃದ್ಧಿ ಕುರಿತು ಸಭೆ ನಡೆಸಲು ಬಂದಿರುವುದು. ಸರ್ಕಾರದಿಂದ ಆರು ಮಂದಿ ಸಚಿವರು ಬಂದಿದ್ದೇವೆ. ಸಭೆಗೆ ಹಾಜರಾಗದ ಅಧಿಕಾರಿಗಳು ಅರ್ಧ ಗಂಟೆಯಲ್ಲಿ ಇಲ್ಲಿರಬೇಕು. ಹಿರಿಯ ಅಧಿಕಾರಿಗಳು ಅವರನ್ನು ಕರೆಯಿಸಬೇಕು ಎಂದು ಹೇಳಿದರು.

English summary
Minister DK Shivakumar in Kundgol meeting with taluk officers questioned them of neglegence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X