ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭ್ರಷ್ಟಾಚಾರ ಹಣದಿಂದ ಉಪ ಚುನಾವಣೆ ನಡೆಸುತ್ತಿಲ್ಲ ಬಿಎಸ್‌ವೈಗೆ ಶಿವಕುಮಾರ್ ತಿರುಗೇಟು

|
Google Oneindia Kannada News

Recommended Video

ಯಡಿಯೂರಪ್ಪ ಮಾತಿಗೆ ಟಾಂಗ್ ನೀಡಿದ ಡಿ ಕೆ ಶಿವಕುಮಾರ್..!?

ಹುಬ್ಬಳ್ಳಿ, ಮೇ 10: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕಾಂಗ್ರೆಸ್‌ ಮೇಲೆ ಮಾಡಿರುವ ಗಂಭೀರ ಆರೋಪವನ್ನು ಸಚಿವ ಡಿಕೆ ಶಿವಕುಮಾರ್ ಅಲ್ಲಗಳೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಹಣವನ್ನು ತಂದು ಹಂಚಿ ಕಾಂಗ್ರೆಸ್‌ನವರು ಚುನಾವಣೆ ಗೆಲ್ಲುತ್ತಿದ್ದಾರೆ ಎಂದು ಬಿಎಸ್‌ವೈ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕ

ನಾವು ಕುಂದಗೋಳದಲ್ಲಿ ತಾಳ್ಮೆಯಿಂದ ಚುನಾವಣೆ ಮಾಡುತ್ತಿದ್ದೇವೆ. ಬಿಜೆಪಿ ಅಭ್ಯರ್ಥಿ ದೌರ್ಜನ್ಯನಿಂದ ಚುನಾವಣೆ ಮಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಮತ ನೀಡದವರನ್ನ ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಆರೋಪಿಸಿದರು.

DK shivakumar denies Yeddyurappa corruption allegation

ನಾವು ಬಿಜೆಪಿ‌ ಮುಖಂಡರು ಸೇರಿದಂತೆ ಯಾರಿಗೂ ಆಮಿಷ ವೊಡ್ಡಿಲ್ಲ. ನಾವು ಹಣ ಹಂಚಿಕೆ ಮಾಡಿದರೆ ಚುನಾವಣಾ ಆಯೋಗಕ್ಕೆ‌ ದೂರು‌ ನೀಡಲಿ ಎಂದರು. ನಾನು ಯಾರು? ನನ್ನ ಶಕ್ತಿ ಏನು? ನನ್ನ ದೌರ್ಬಲ್ಯ ಏನೂ ಎಂಬುದೆಲ್ಲಾ ಯಡಿಯೂರಪ್ಪ ಅವರಿಗೆ ಗೊತ್ತಿದೆ.

ಡಿಕೆಶಿ ತರಹ ಲೀಡರ್ ಆಗ್ಬೇಕು ಅಂದ್ರೆ ಕಾರ್ಯಕರ್ತರು ಏನ್ಮಾಡ್ಬೇಕು?ಡಿಕೆಶಿ ತರಹ ಲೀಡರ್ ಆಗ್ಬೇಕು ಅಂದ್ರೆ ಕಾರ್ಯಕರ್ತರು ಏನ್ಮಾಡ್ಬೇಕು?

ಭ್ರಷ್ಟಾಚಾರದ ಹಣ ತಂದು ಸುರಿದು ಚುನಾವಣೆ ಗೆಲ್ಲುತ್ತಿದ್ದಾರೆ ಎಂಬ ಆರೋಪಕ್ಕೆ ನಕ್ಕ ಡಿ.ಕೆ.ಶಿವಕುಮಾರ್, ಭ್ರಷ್ಟಾಚಾರನಾ ಅಯ್ಯೋ, ನನ್ನನ್ನು ಇನ್ನೂ ಜೈಲಿಗೆ ಕಳುಹಿಸಿಲ್ಲ ಎಂದು ವ್ಯಂಗ್ಯವಾಡಿದರು.

English summary
State minister DK shivakumar denies allegation of former chief minister BS Yeddyurappa over congress using corruption money for the by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X