ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತಷ್ಟು ಬಿಗಡಾಯಿಸಿದ ಹುಬ್ಬಳ್ಳಿ ಮೂರು ಸಾವಿರ ಮಠದ ವಿವಾದ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 20: ಉತ್ತರ ಕರ್ನಾಟಕದ ಪ್ರಸಿದ್ದ ಮಠವಾದ ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠಾಧೀಪತಿ ವಿವಾದ ಮತ್ತೆ ಸದ್ದು ಮಾಡಿದೆ. ಕಳೆದ ಮೂರು ವರ್ಷಗಳ ಹಿಂದೆ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಮೂರು ಸಾವಿರ ಮಠದ ಪ್ರಸ್ತುತ ಪೀಠಾಧಿಪತಿಯಾದ ಮೂಜಗು ಅವರ ಪರವಾಗಿ ಉದ್ಯಮಿ ಹಾಗೂ ಲಿಂಗಾಯತ ಸಮಾಜದ ಮುಖಂಡ ವಿಜಯ ಸಂಕೇಶ್ವರ ಅವರು ಮಾತನಾಡಿದ ನಂತರ ಬಾಲೆಹೊಸುರಿನ ದಿಂಗಾಲೇಶ್ವರ ಶ್ರೀ ಗುರುವಾರ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ತೆರಳಿ ಮೂಜಗು ಶ್ರೀಗಳನ್ನು ಭೇಟಿಯಾಗಲು ಯತ್ನಿಸಿದರು. ಆದರೆ ಮೂಜಗು ಶ್ರೀಗಳು ದಿಂಗಾಲೇಶ್ವರ ಶ್ರೀಗಳನ್ನು ಭೇಟಿಯಾಗಲು ನಿರಾಕರಿಸಿದ್ದಾರೆ.

 ಮತ್ತೆ ತಾರಕಕ್ಕೇರಿದ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ಮತ್ತೆ ತಾರಕಕ್ಕೇರಿದ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ

ಆದರೆ, ಅತ್ತ ದಿಂಗಾಲೇಶ್ವರ ಶ್ರೀ ಧಾರವಾಡದಲ್ಲಿ ಲಿಂಗಾಯತ ಮುಖಂಡರನ್ನು ಭೇಟಿಯಾಗಿ ಮಾತುಕತೆ ಕೂಡ ನಡೆಸಿ, ಸುದ್ದಿಗೋಷ್ಠಿ ಕೂಡ ನಡೆಸಿದ್ದಾರೆ. ಇತ್ತ ಹುಬ್ಬಳ್ಳಿ ಮೂರುಸಾವಿರ ಮಠಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ದಿಂಗಾಲೇಶ್ವರ ಶ್ರೀ ಹೇಳಿದ್ದೇನು?

ಸುದ್ದಿಗೋಷ್ಠಿಯಲ್ಲಿ ದಿಂಗಾಲೇಶ್ವರ ಶ್ರೀ ಹೇಳಿದ್ದೇನು?

'ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ನಮ್ಮ ವಿರುದ್ಧ ಆರೋಪ ಸಾಬೀತು ಪಡಿಸಿದರೆ ಪ್ರಾಣ ಬಿಡಲು ಸಿದ್ದ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಶ್ರೀ ಹೇಳಿದರು. ಧಾರವಾಡದ ಸಿ.ಬಿ. ನಗರದಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಭವನದಲ್ಲಿ ಲಿಂಗಾಯತ ಮುಖಂಡ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಲು ಧಾರವಾಡಕ್ಕೆ ಬಂದಿಲ್ಲ . ನನ್ನ ಸಮಾಜಕ್ಕೆ ಮುಜುಗರ ಆಗಬಾರದು ಎಂಬ ಉದ್ದೇಶದಿಂದ ಧಾರವಾಡ ಭಕ್ತರ ಭೇಟಿ ಮಾಡಿದ್ದೇನೆ. ನಾನು ಮಠಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ದ ಎಂದು ಸ್ವಾಮೀಜಿ' ಎಂದು ಸ್ಪಷ್ಟಪಡಿಸಿದರು.

ಮೂರು ಸಾವಿರ ಮಠದ ಸ್ವಾಮೀಜಿ ವಿರುದ್ಧ ಗುಡುಗಿದ ವಿಜಯ ಸಂಕೇಶ್ವರಮೂರು ಸಾವಿರ ಮಠದ ಸ್ವಾಮೀಜಿ ವಿರುದ್ಧ ಗುಡುಗಿದ ವಿಜಯ ಸಂಕೇಶ್ವರ

ಸತ್ಯ ಹೊರಕ್ಕೆ ಬರಬೇಕಿದೆ

ಸತ್ಯ ಹೊರಕ್ಕೆ ಬರಬೇಕಿದೆ

'ನಮ್ಮ ವಿರುದ್ಧ ಮಾಡುತ್ತಿರುವ ಆರೋಪಿಗಳಿಗೆ ಉತ್ತರ ಬೇಕಾಗಿದೆ, ಸತ್ಯ ಹೊರಕ್ಕೆ ಬರಬೇಕಿದೆ , ನನ್ನ ಸಮಾಜಕ್ಕೆ ಮುಜುಗರ ಅಗಲೇ ಬಾರದು ವಿವಾದವನ್ನು ಮುಗಿಸಲು ಧಾರವಾಡ ಜನತೆ ಸಭೆಗೆ ಬರಬೇಕು ಎಂದು ಕರೆ ನೀಡಿದರು. ಉತ್ತರಾಧಿಕಾರಿ ಪಟ್ಟಕ್ಕೆ ನಾನು ಕುಳಿತುಕೊಳ್ಳಬೇಕೆಂಬ ನಿಟ್ಟಿನಲ್ಲಿ ನಿಮ್ಮ ಬಳಿ ಬೆಂಬಲ ಕೇಳಲು ಬಂದಿಲ್ಲ' ಎಂದು ಸ್ಪಷ್ಟಪಡಿಸಿದರು.

ಪ್ರಾಣ ಬಿಡಲು ಸಿದ್ದ

ಪ್ರಾಣ ಬಿಡಲು ಸಿದ್ದ

'ನಾನು ಸಮಾಜಕ್ಕೆ ಸವಾಲ‌ ಕೊಟ್ಟಿಲ್ಲ, ಗೊಂಡಾಗಿರಿ, ಅಯೋಗ್ಯ ಎನ್ನುವ ಸುದ್ದಿ ಮಾಡಿದ್ದಾರೆ ಅವರಿಗೆ ಉತ್ತರ ನೀಡಬೇಕು ಅದನ್ನು ಸಾಭೀತು ಪಡಿಸಬೇಕು ಎಂದು ಸವಾಲು ಹಾಕಿದ್ದೇನೆ. ಅವರು ಆರೋಪಗಳನ್ನು ಸಾಬೀತು ಪಡಿಸಿದರೆ ಪ್ರಾಣ ಬಿಡಲು ಸಿದ್ದ' ಎಂದು ನುಡಿದರು.

23ರಂದು ಸಭೆ

23ರಂದು ಸಭೆ

'ಎಲ್ಲಾ ಸಮಸ್ಯೆಗಳಿಗೆ‌ ನ್ಯಾಯಾಲಯವೇ ಪರಿಹಾರ ಅಲ್ಲ. ಅದರ ಹೊರತು ಸಮಸ್ಯೆಗಳ ಪರಿಹಾರ ಸಾಧ್ಯ. ತಾವೇಲ್ಲರೂ ಹುಬ್ಬಳ್ಳಿಯಲ್ಲಿ ನಡೆಯುವ ಫೆ 23 ರ ಸಭೆಗೆ‌ ಬರಬೇಕೆಂದು' ದಿಂಗಾಲೇಶ್ವರ‌ ಸ್ವಾಮೀಜಿ ವೀರಶೈವ ಲಿಂಗಾಯತ ಮುಖಂಡರಿಗೆ ಮನವಿ ಮಾಡಿದರು.

English summary
Dingaleshwar Seer Press Meet In Dharwad About Moor Savir Mutt Issue. Moor Savir Mutt Seer not meet dingaleshwar seer at hubballi. police deployed at Moor Savir Mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X