ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮುಲಾಜಿಲ್ಲದೆ ಟಿಪ್ಪು ಜಯಂತಿ ರದ್ದು'

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 20: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ವಿರುದ್ಧ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯ ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ದೀಪಾವಳಿ ಪೂಜೆ ನೆರೆವೇರಸಿದ ಬಳಿಕ ಮಾತನಾಡಿದ ಅವರು, "ಕರ್ನಾಟಕದಲ್ಲಿ ಇತಿಹಾಸ ಸಾರುವ ಅನೇಕ ಮಹಾನ್ ವ್ಯಕ್ತಿಗಳಿದ್ದಾರೆ. ಆದರೆ, ಕನ್ನಡ ನಾಡು ನುಡಿ ಹಿಂದು ವಿರೋಧಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ. ಟಿಪ್ಪು ಜಯಂತಿಗೆ ನಮ್ಮದು ಯಾವಾಗಲೂ ವಿರೋಧವಿದೆ.

ಟಿಪ್ಪು ಕನ್ನಡ ಭಾಷೆ, ಸಂಸ್ಕತಿ, ಹಿಂದೂ ವಿರೋಧಿಯಾಗಿದ್ದ ಅಂತವನ ಜಯಂತಿ ಆಚರಣೆಯನ್ನು ನಾವು ಸಹಿಸಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಮುಲಾಜಿಲ್ಲದೆ ಟಿಪ್ಪು ಜಯಂತಿ ರದ್ದುಗೊಳಿಸಲಾಗುವದು ಎಂದರು.

Dharwad MP Pralhad Joshi slams Congress government

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೇ ಕೊನೆಯ ದೀಪಾವಳಿಯಾಗಲಿದೆ" ಎಂದು ಸಂಸದ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದಿದ್ದಾರೆ.

ಮುಂದಿನ ಬಾರಿಯು ನಾನೇ ಸಿಎಂ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ, ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದು ಸರ್ಕಾರದ ಕೊನೆಯ ಆಡಳಿತಾಧಿಯಾಗಲಿದೆ.

ಮನೆ ಮನೆಗೆ ಕಾಂಗ್ರೆಸ್ ಹೊರಟ್ಟಿದ್ದು, ಜನರು ಕಾಂಗ್ರೆಸ್ ನ್ನು ಜನರು ಅಂತಿಮ ದರ್ಶನ ಪಡೆದುಕೊಳ್ಳಲಿ ಎಂದು ವ್ಯಗ್ಯವಾಡಿದರು ಯಾವುದೇ ಸಾಧನೆ ಮಾಡದೆ ಸಾಧನೆಳನ್ನು ತೋರಿಸಲು ಹೊರಟ್ಟಿದೆ.

ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಯಾತ್ರೆ ಮಾಡುತ್ತಿದೆ. ಜನರು ಕಟ್ಟಿದ ತೆರಿಗೆ ಹಣದಲ್ಲಿ ಸರ್ಕಾರ ಸಾಧನೆಯ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

English summary
Dharwad MP Pralhad Joshi slams Congress government. If the BJP comes to power, the Tipu Jayanti will be canceled, said Pralhad Joshi in Hubballi on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X