ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ನವರು ಭಾರತ್ ಚೋಡೋದಲ್ಲಿ ಮಗ್ನರಾಗಿದ್ದಾರೆ: ಸಿಟಿ ರವಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್‌, 04: "ಕಾಂಗ್ರೆಸ್‌ನವರು ಭಾರತ್ ಜೋಡೋ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಭಾರತ್ ಚೋಡೋದಲ್ಲಿ ಮಗ್ನರಾಗಿದ್ದಾರೆ. ಮೊದಲು ಕಾಂಗ್ರೆಸ್‌ನವರು ಪಕ್ಷ ಚೋಡೋ ಎಂಬುದನ್ನು ಸರಿ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಪಕ್ಷದ ಬೋರ್ಡ್ ಹಾಕಲು ಕಾರ್ಯಕರ್ತರು ಸಿಗುವುದಿಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪನವರನ್ನು ಬಿಜೆಪಿ ಕಡೆಗಣನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ಬೆಳೆಸಿದ ನಾಯಕರಾಗಿದ್ದಾರೆ. ಬಿಜೆಪಿ ಯಡಿಯೂರಪ್ಪನವರು ಬೆಳೆಸಿದ ಪಕ್ಷ. ಯಡಿಯೂರಪ್ಪನವರನ್ನು ಕಟ್ಟಿ ಹಾಕವವರು ಯಾರು ಇಲ್ಲ. ಯಡಿಯೂರಪ್ಪನವರ ಪ್ರವಾಸ ಯೋಜನೆ ನಿಶ್ಚಿತ ಆಗಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯುತ್ತದೆ" ಎಂದು ಹೇಳಿದರು.

ಭಾರತ್‌ ಜೋಡೋ ಯಾತ್ರೆ: ಪ್ರತಿ ಎಂಎಲ್‌ಎಗೆ 5000 ಜನರ ಸೇರಿಸಲು ಟಾರ್ಗೆಟ್‌
"ಕಾಂಗ್ರೆಸ್ ನೇತೃತ್ವ ಹೀನವಾಗಿದೆ. ಸಂಘಟನೆಗೆ ಸಂಬಂಧ ಇಲ್ಲದಿರುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕೋವಿಡ್ ಬಂದಾಗ, 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜನರ ಭಾವನೆಗಳನ್ನು ಕೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ಈಗ ಅವಶ್ಯಕತೆ ಇರುವುದು ಪಕ್ಷ ಜೋಡಿಸುವುದು. ಕಾಂಗ್ರೆಸ್‌ಗೆ ನೀತಿ, ನೇತೃತ್ವ, ನಿಯತ್ತಿನ ಅವಶ್ಯಕತೆ ಇದೆ. ಇಲ್ಲವಾದರೆ ಪಕ್ಷಗಳು ಉಳಿದಿರುವ ಉದಾಹರಣೆ ಇಲ್ಲ" ಎಂದರು.

CT Ravi Reaction On Bharat Jodo Yatra From Congress

"ಕಾಂಗ್ರೆಸ್‌ನ ಭಾರತ ಜೋಡೋ ಪಾದಯಾತ್ರೆಯೂ ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಭಾರತ ಜೋಡೋದಿಂದ ನಮಗೆ ಯಾವುದೇ ಭಯವಿಲ್ಲ. ಕಾಂಗ್ರೆಸ್ ಬಗ್ಗೆ ನಮಗೆ ಮರುಕ ಇದೆ, ಭಯ ಇಲ್ಲ. ಅಲ್ಲಿ ಇರುವವರು ಆದಷ್ಟು ಬೇಗ ಆ ಪಕ್ಷ ತೊರೆಯಲಿ. ನಮ್ಮಲ್ಲಿ ನೀತಿಯೂ ಇದೆ, ನೇತೃತ್ವವೂ ಇದೆ" ಎಂದು ಹೇಳಿದರು.

"ಇವತ್ತಿನ ಕಾಂಗ್ರೆಸ್‌ಗೆ ನೀತಿ, ನೇತೃತ್ವ ನಿಯತ್ತಿನ ಅವಶ್ಯಕತೆ ಇದೆ. ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಚುನಾವಣೆ ಫಲಿತಾಂಶ ಬಂದರೆ ಸಾಕಷ್ಟು ಕಾಂಗ್ರೆಸ್ ನಾಯಕರು ನಮ್ಮ ಪಕ್ಷಕ್ಕೆ ಬರುತ್ತಾರೆ. ನವೆಂಬರ್ ನಂತರ ನಮ್ಮ ರಾಜ್ಯದಲ್ಲಿ ಅನೇಕ ನಾಯಕರು ಕಾಂಗ್ರೆಸ್ ತೊರೆಯಲಿದ್ದಾರೆ" ಎಂದು ಭವಿಷ್ಯ ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಪ್ರತಿಕ್ರಿಯೆ; ದಾವಣಗೆರೆಯಲ್ಲಿ ಮಾತನಾಡಿದ್ದ ಸಿ. ಟಿ. ರವಿ, "ನಾನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದೇನೆ. ಹತ್ತಾರು ರಾಜ್ಯಗಳಲ್ಲಿ ಕೆಲಸ ಮಾಡಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರ ಸಂಬಂಧ ಯಾವ ಹಂತದಲ್ಲಿಯೂ ಆಗಿಲ್ಲ. ಸುದ್ದಿಗಳು ಆಗಾಗ್ಗೆ ಬರುತ್ತಿರುತ್ತವೆ. ವೈಯಕ್ತಿಕ ಆಕಾಂಕ್ಷೆ ಇಟ್ಟುಕೊಂಡು ಎಂದಿಗೂ ಕೆಲಸ ಮಾಡಿಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಕಾರ್ಯಕರ್ತನಾಗಿ ನಿಭಾಯಿಸಿಕೊಂಡು ಬರುತ್ತಿದ್ದೇನೆ. ಮೂರು ವರ್ಷ ಆಗಿದೆ ಎಂದ ಮಾತ್ರಕ್ಕೆ ಬದಲಾವಣೆ ಮಾಡಬೇಕು ಎನ್ನುವ ನಿಯಮ ಇಲ್ಲ" ಎಂದು ಸಿ. ಟಿ. ರವಿ ಹೇಳಿದರು.

CT Ravi Reaction On Bharat Jodo Yatra From Congress

"ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಆಗಿದೆ. ಅವರ ಸ್ಥಾನವನ್ನು ಬದಲಾಯಿಸುವ ಕುರಿತಂತೆ ಎಲ್ಲಿಯೂ ಚರ್ಚೆ ಆಗಿಲ್ಲ" ಎಂದು ಸಿ. ಟಿ. ರವಿ ಸ್ಪಷ್ಟಪಡಿಸಿದರು.

"ರಾಜಕೀಯ ಧ್ರುವೀಕರಣ ಎನ್ನುವುದು ಎಲ್ಲಾ ಕಾಲದಿಂದಲೂ ನಡೆದುಕೊಂಡು ಬಂದಿದೆ. ರಾಜಕಾರಣ ನಿಂತ ನೀರಲ್ಲ. ಬಿಜೆಪಿಗೆ ಬಂದವರು ಅವರ ಭವಿಷ್ಯ ಭದ್ರಪಡಿಸಿಕೊಂಡಿದ್ದಾರೆ. ಪಕ್ಷ ಬಿಟ್ಟವರು ಭವಿಷ್ಯ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ದೇಶಕ್ಕೆ ಹಾಗೂ ಬಿಜೆಪಿಗೆ ಬಂದವರಿಗೆ ಉಜ್ವಲ ಭವಿಷ್ಯ ಇದೆ ಎಂಬುದರಲ್ಲಿ ಎರಡು ಮಾತಿಲ್ಲ" ಎಂದರು.

English summary
Congress not doing Bharat Jodo Yatra they doing Bharat Chodo padayatra BJP leader C. T. Ravi verbal attack on Hubballi. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X