ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 19: ಕ್ವಾರಂಟೈನ್ ಗೆ ಹೋಟೆಲ್ ನೀಡಿದ ಉದ್ಯಮಿ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 24: ಕೊರೊನಾ ವೈರಸ್ ಸೋಂಕಿತರ ಕ್ವಾರಂಟೈನ್ ಗೆ ಸ್ವಯಂ ಪ್ರೇರಣೆಯಿಂದ ಹೋಟೆಲ್ ನ ಒಂದು ಭಾಗವನ್ನು ಒದಗಿಸಲು ಹೋಟೆಲ್ ಉದ್ಯಮಿ ಮುಂದೆ ಬಂದಿದ್ದಾರೆ.

ಹುಬ್ಬಳ್ಳಿಯಲ್ಲಿನ ಕೊಪ್ಪೀಕರ್ ರಸ್ತೆಯಲ್ಲಿರುವ ಮೆಟ್ರೋಪೊಲಿಸ್ ಹೋಟೆಲ್ ನ ಒಂದು ಭಾಗದ 46 ಕೊಠಡಿಗಳು, ಊಟ ಮತ್ತು ಉಪಹಾರವನ್ನು ಕೊರೊನಾ ವೈರಸ್ ಸೋಂಕಿತರ ಕ್ವಾರಂಟೈನ್ ಗೆ ಸ್ವಯಂ ಪ್ರೇರಣೆಯಿಂದ ಒದಗಿಸುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶ್ರಫ್ ಅಲಿ ಬಶೀರ್ ಅಹ್ಮದ್ ಅವರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಪತ್ರ ನೀಡಿದರು.

ಹೋಟೆಲ್ ನ ಕೊಠಡಿಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ಕಳುಹಿಸಬಹುದು. ಮೆಟ್ರೋಪೊಲಿಸ್ ಸಮೂಹವು ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲಿನ 70 ಹೋಟೆಲ್ ಕೊಠಡಿಗಳನ್ನು ಅಲ್ಲಿನ ಸರ್ಕಾರಕ್ಕೆ ಕ್ವಾರಂಟೈನ್ ಸೌಲಭ್ಯಕ್ಕಾಗಿ ನೀಡಲಾಗಿದೆ. ಸಂಸ್ಥೆಯ ಸಿಎಸ್ಆರ್ ಚಟುವಟಿಕೆಗಳಡಿ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಶ್ರಫ್ ಅಲಿ ತಿಳಿಸಿದರು.

Covid19: Businessman Who Gave Hotel To Quarantine In Hubballi

ಹೋಟೆಲ್ ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ಕ್ವಾರಂಟೈನ್ ಸೌಲಭ್ಯಕ್ಕೆ ಕೊಠಡಿಗಳನ್ನು ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಶಂಸೆ ವ್ಯಕ್ತಪಡಿಸಿದರು.

English summary
The hotel businessman has come forward to provide a part of the hotel for volunteering for Quarantine infected with coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X