• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ಲಸಿಕೆ ಅಭಿಯಾನ ಯಶಸ್ವಿ; ಡಾ. ಕೆ. ಸುಧಾಕರ್

By ಗದಗ ಪ್ರತಿನಿಧಿ
|

ಹುಬ್ಬಳ್ಳಿ, ಜನವರಿ 19: "ಜಿಲ್ಲೆಗಳಿಗೆ ತೆರಳಿ ಕೋವಿಡ್ ವ್ಯಾಕ್ಸಿನ್ ವಿತರಣೆ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಪ್ರತಿ‌ ಜಿಲ್ಲೆಯಲ್ಲಿ ಎರಡು ಕಡೆ ಭೇಟಿ ನೀಡುತ್ತಿದ್ದೇನೆ. ವ್ಯಾಕ್ಸಿನ್ ಪ್ರಯೋಗ ರಾಜ್ಯದಲ್ಲಿ ಯಶಸ್ವಿಯಾಗಿ ನಡೆದಿದೆ" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಮಂಗಳವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, "ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ವ್ಯಾಕ್ಸಿನ್‌ ಅನ್ನು ಸೋಮವಾರ ಜನರು ತೆಗೆದುಕೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಇರುವುದು ಸಹಜ. ಆದರೆ, ಇದೀಗ ಎಲ್ಲಾ ಕಡೆ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದಾರೆ" ಎಂದರು.

ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು

ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆದ ವ್ಯಕ್ತಿಗೆ ಹೃದಯಾಘಾತ ಆದ ಬಗ್ಗೆ ಮಾತನಾಡಿದ ಸಚಿವರು, "ಹೃದಯಾಘಾತಕ್ಕೂ ವ್ಯಾಕ್ಸಿನ್‌ಗೂ ಸಂಬಂಧವಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ಇದು ಬಹಳ ಗಂಭೀರ ವಿಷಯ. ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಬೇಕಿದೆ. ಬಹಳ ಕಷ್ಟಪಟ್ಟು ನಮ್ಮ‌ ವಿಜ್ಞಾನಿಗಳು ಲಸಿಕೆ ತಂದಿದ್ದಾರೆ" ಎಂದು ತಿಳಿಸಿದರು.

ಕೋವಿಡ್ ಲಸಿಕೆ: ಉತ್ತರ ಕನ್ನಡಕ್ಕೆ ರಾಜ್ಯದಲ್ಲಿ 2ನೇ ಸ್ಥಾನ

"ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಲಸಿಕೆ ನೀಡಲಾಗಿದೆ. ಪ್ರಜಾಪ್ರಭುತ್ವದ‌ ಬುನಾದಿಯನ್ನು ಗಟ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ಹೇಳಿದ್ದಾರೆ. ಜನರಿಗೆ ವ್ಯಾಕ್ಸಿನ್ ಬಗ್ಗೆ ಯಾವುದೇ ಆತಂಕ ವಿಲ್ಲ. ವ್ಯಾಕ್ಸಿನ್ ಡಾಟಾ ಬಂದ ಮೇಲೆ ತಯಾರಿಕಾ ಸಾಮರ್ಥ್ಯ ಹೆಚ್ಚಿಗೆ ಆಗಲಿದೆ" ಎಂದರು.

Infographics: ಕೊವ್ಯಾಕ್ಸಿನ್ ಲಸಿಕೆ ಪಡೆಯುವ ಮುನ್ನ ಒಮ್ಮೆ ಓದಿ

ಸಚಿವರ ವಿರುದ್ಧ ಪ್ರತಿಭಟನೆ; ಹುಬ್ಬಳ್ಳಿಯಲ್ಲಿ ಸಚಿವ ಸುಧಾಕರ್ ಪ್ರತಿಭಟನೆ ಎದುರಿಸಬೇಕಾಯಿತು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಬಗ್ಗೆ ಸುಧಾಕರ್ ಹಗುರವಾಗಿ ಮಾತನಾಡಿದ್ದಾರೆ ಆರೋಪಿಸಿ ಕರವೇ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯನ್ನು ಮಾಡಿದರು.

   Mysore ನುಗು ಡ್ಯಾಂ ನೀರಿನಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ| Oneindia Kannada

   ನಗರದ ಕಿಮ್ಸ್ ಆಸ್ಪತ್ರೆಗೆ ಸಚಿವರು ಬಂದಾಗ ಪ್ರತಿಭಟನೆ ಮಾಡಿದರು. ಸಚಿವರು ಸೋಮವಾರ, "ನಾರಾಯಣಗೌಡ ಯಾರೆಂದು ಗೊತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ" ಎಂದು ಕಾರ್ಯಕರ್ತರು ಆರೋಪಿಸಿದರು. ಸಚಿವರ ಕಾರಿಗೆ ಅಡ್ಡಲಾಗಿ ಮಲಗಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

   English summary
   Covid-19 vaccination drive was successful in Karnataka said health minister Dr. K. Sudhakar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X