ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಕೋರ್ಟ್ ಆದೇಶದಂತೆ ರಿಲಾಯನ್ಸ್ ವಿಮೆ ಕಚೇರಿ ಜಪ್ತಿ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 24: ನ್ಯಾಯಾಲಯದ ಆದೇಶದಂತೆ ಹುಬ್ಬಳ್ಳಿಯ ರಿಲಾಯನ್ಸ್ ವಿಮಾ ಕಂಪನಿ ಕಚೇರಿಯನ್ನು ಜಪ್ತಿ ಮಾಡಲಾಯಿತು. ಅಪಘಾತ ಪರಿಹಾರ ಮೊತ್ತವನ್ನು ನೀಡದ ವಿಮಾನ ಕಂಪನಿ ಕಚೇರಿ ಜಪ್ತಿಗೆ ಆದೇಶ ನೀಡಲಾಗಿತ್ತು.

ಬುಧವಾರ ಹುಬ್ಬಳ್ಳಿಯ ದೇಸಾಯಿ ಕ್ರಾಸ್ ಬಳಿ ಇರುವ ವಿಮಾ ಕಚೇರಿಗೆ ಆಗಮಿಸಿದ ದೂರುದಾರರು ಮತ್ತು ವಕೀಲರು ಕಚೇರಿ ಸಿಬ್ಬಂದಿಗಳನ್ನು ಮೊದಲು ಹೊರಗೆ ಕಳಿಸಿದರು. ಬಳಿಕ ಸಾಮಾಗ್ರಿಗಳನ್ನು ಜಪ್ತಿ ಮಾಡಿದರು.

ಕೊರೊನಾ ಲಸಿಕೆ ಪಡೆಯುವವರಿಗೆ ಯಾವುದೇ ವಿಮೆ ನೀಡುವುದಿಲ್ಲ; ಚೌಬೆಕೊರೊನಾ ಲಸಿಕೆ ಪಡೆಯುವವರಿಗೆ ಯಾವುದೇ ವಿಮೆ ನೀಡುವುದಿಲ್ಲ; ಚೌಬೆ

ರಿಲಾಯನ್ಸ್ ಕಂಪನಿ ಜೊತೆ ಮಾಡಿಕೊಂಡ ವಿಮೆ ಒಪ್ಪಂದದಂತೆ ನ್ಯಾಯಾಲಯ ದೂರುದಾರರಿಗೆ 11,13,600 ರೂ. ನೀಡಬೇಕು ಮತ್ತು ಘಟನೆ ನಡೆದ ದಿನದಿಂದ ಆದೇಶದ ದಿನದ ತನಕ ಶೇ 9ರಷ್ಟು ಬಡ್ಡಿ ಹಣ ನೀಡಬೇಕು ಎಂದು ಆದೇಶ ನೀಡಿತ್ತು. ಆದರೆ, ಕಂಪನಿ ಆದೇಶ ಪಾಲನೆ ಮಾಡಿರಲಿಲ್ಲ.

 ವಾಹನ ನಕಲಿ ವಿಮೆ ಜಾಲ ಪತ್ತೆ ಮಾಡಿದ ಸೈಬರಾಬಾದ್ ಪೊಲೀಸರು ವಾಹನ ನಕಲಿ ವಿಮೆ ಜಾಲ ಪತ್ತೆ ಮಾಡಿದ ಸೈಬರಾಬಾದ್ ಪೊಲೀಸರು

Insurance news

ರಸ್ತೆ ಅಪಘಾತ; ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳಕುಸುಗಲ್ ಗ್ರಾಮದ ಲಕ್ಷ್ಮಣ ಬಸಪ್ಪ ಹಳ್ಳಿಕೇರಿ ಎಂಬುವವರಿಗೆ 2016ರಲ್ಲಿ ಲಾರಿ ಡಿಕ್ಕಿಯಾಗಿತ್ತು. ನಾಲ್ಕು ತಿಂಗಳು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕೋವಿಡ್-19 :ಕರ್ನಾಟಕದಲ್ಲಿ ಆರೋಗ್ಯ & ಜೀವ ವಿಮೆ ಹೆಚ್ಚಳ ಕೋವಿಡ್-19 :ಕರ್ನಾಟಕದಲ್ಲಿ ಆರೋಗ್ಯ & ಜೀವ ವಿಮೆ ಹೆಚ್ಚಳ

ರಿಲಾಯನ್ಸ್ ಕಂಪನಿ ಜೊತೆ ಮಾಡಿಕೊಂಡು ಒಪ್ಪಂದದಂತೆ ವಿಮೆ ಹಣವನ್ನು ಕೊಡಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ 11,13,600 ರೂ. ಹಣವನ್ನು ನೀಡುವಂತೆ ಮತ್ತು ಶೇ 9ರಷ್ಟು ಬಡ್ಡಿ ನೀಡಬೇಕು ಎಂದು ಆದೇಶ ನೀಡಿತ್ತು.

ಆದರೆ, ಕಂಪನಿ ವಿಮೆ ಹಣ ನೀಡದ ಕಾರಣಕ್ಕೆ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಕಚೇರಿಯನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. ಬುಧವಾರ ಕಚೇರಿ ಜಪ್ತಿ ಮಾಡುವ ಪ್ರಕ್ರಿಯೆ ನಡೆಯಿತು.

English summary
Hubballi court ordered to seize Reliance insurance company office for fail to transfer insurance money for man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X