• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿಯ ಮೂರುಸಾವಿರ ಮಠದ ಪಕ್ಕದಲ್ಲೇ ಕೊರೊನಾ ವೈರಸ್!

|

ಹುಬ್ಬಳ್ಳಿ, ಜೂನ್ 24: ಹುಬ್ಬಳ್ಳಿಯ ಮೂರುಸಾವಿರ ಮಠದ ಪಕ್ಕದಲ್ಲೇ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ ಮಠದ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದೆ.

   New Married Couples Donated 50 Beds To A Mumbai Quarantine Centre | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಪಿ-9418 ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ವ್ಯಕ್ತಿ ಮಠದ ಸಮೀಪದಲ್ಲಿರುವ ಕಾರಣ ಭಕ್ತರು ಬರದಂತೆ ಜಿಲ್ಲಾಡಳಿತ ಬ್ಯಾರಿಕೇಡ್ ಹಾಕಿದೆ. ಮಠದ ಶಾಲೆಯ ಪಕ್ಕದಲ್ಲಿ ಮಠಕ್ಕೆ ಪರ್ಯಾಯ ರಸ್ತೆಯನ್ನು ಜಿಲ್ಲಾಡಳಿತ ಮಾಡಿಕೊಟ್ಟಿದೆ.

   ಕರ್ನಾಟಕದಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಹುಬ್ಬಳ್ಳಿ ಕಿಮ್ಸ್‌ಗೆ ಶ್ಲಾಘನೆ

   ಧಾರವಾಡ ಜಿಲ್ಲೆಯಲ್ಲಿ ಇಂದು 4 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಪಿ-9416 (55 ವರ್ಷ, ಪುರುಷ) ಇವರು ಧಾರವಾಡ ಮಿಚಗನ್ ಕಾಂಪೌಂಡ್ ಲೋಬೋ ಅವೆಂಜಾ ಅಪಾರ್ಟ್ ಮೆಂಟ್ ನಿವಾಸಿ, ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

   ಪಿ-9417 (57 ವರ್ಷ, ಪುರುಷ) ಹುಬ್ಬಳ್ಳಿ ಅಂಚಟಗೇರಿ ನಿವಾಸಿ, ನೆಗಡಿ, ಕೆಮ್ಮು, ತೀವ್ರ ಜ್ವರದಿಂದ (ILI) ಬಳಲುತ್ತಿದ್ದರು. ಪಿ-9418 (36 ವರ್ಷ, ಪುರುಷ ) ಹುಬ್ಬಳ್ಳಿ ಮೂರುಸಾವಿರಮಠ ಹತ್ತಿರದ ನಿವಾಸಿ, ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ (ILI) ಬಳಲುತ್ತಿದ್ದರು.

   ಪಿ-9419 (43 ವರ್ಷ, ಪುರುಷ) ನವಲಗುಂದ ತಾಲೂಕು ಮೊರಬ ಗ್ರಾಮದ ಹಳ್ಳಿಗೇರಿ ಓಣಿ ನಿವಾಸಿ, ಪಿ-8289 ಅವರೊಂದಿಗೆ ಸಂಪರ್ಕ ಹೊಂದಿದ್ದರು.

   ಧಾರವಾಡ ಲಾಕ್ ಡೌನ್: ಹುಬ್ಬಳ್ಳಿ ಯಥಾಸ್ಥಿತಿ, ಈ ಭಾಗದಲ್ಲಿ ಮಾತ್ರ ಅಂಗಡಿ ಓಪನ್ ಗೆ ಅನುಮತಿ

   ಕೊರೊನಾ ವೈರಸ್ ನಿಂದ ಗುಣಮುಖರಾಗಿರುವ 14 ಜನ ಮಂಗಳವಾರ, ಜೂನ್ 22 ರಂದು ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪಿ-6842(35 ವರ್ಷ ಮಹಿಳೆ), ಪಿ-6520(4 ವರ್ಷ, ಬಾಲಕ), ಪಿ-5381 (24 ವರ್ಷ, ಮಹಿಳೆ), ಪಿ-5382, (11 ವರ್ಷ, ಬಾಲಕಿ),

   ಪಿ-6251(34 ವರ್ಷ ಮಹಿಳೆ), ಪಿ-6255 (49 ವರ್ಷ, ಪುರುಷ), ಪಿ-6259(62 ವರ್ಷ, ಮಹಿಳೆ), ಪಿ-5380 (21 ವರ್ಷ, ಮಹಿಳೆ), ಪಿ-6522 (29 ವರ್ಷ, ಮಹಿಳೆ), ಪಿ-7032 (50 ವರ್ಷ, ಪುರುಷ), ಪಿ-7033 (2 ವರ್ಷ, ಗಂಡು ಮಗು), ಪಿ-7035(10 ವರ್ಷ, ಬಾಲಕಿ), ಪಿ-7037 (27 ವರ್ಷ, ಪುರುಷ), ಪಿ-7050 (72 ವರ್ಷ, ಪುರುಷ), ಬಿಡುಗಡೆಯಾದ ವ್ಯಕ್ತಿಗಳಾಗಿದ್ದಾರೆ.

   ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 206 ಕ್ಕೆ ಏರಿಕೆಯಾಗಿದೆ. ಈಗಾಗಲೇ 90 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

   English summary
   Coronavirus infection is confirmed near to the Moorusavir Math of Hubli. Sealdown in the range of the Math.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X