ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಕರಿಛಾಯೆ; ಹುಬ್ಬಳ್ಳಿ ಮಾರ್ಕೆಟ್ ಬಣ ಬಣ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 21: ಕೊರೋನಾ ವೈರಸ್ ಭೀತಿ ಜಗತ್ತಿನಾದ್ಯಂತ ಭಯದ ವಾತಾವರಣ ಹುಟ್ಟು ಹಾಕಿದ್ದು, ಕೊರೋನಾ ವೈರಸ್ ಎಫೆಕ್ಟ್ ಚಿಕನ್ ಹಾಗೂ ಮಟನ್ ಗಳಿಗೆ ಮಾತ್ರ ಕರಿ ಛಾಯೆ ಬಿದ್ದಿತ್ತು.

ಆದರೆ ಈಗ ಮೀನು ಮಾರಾಟದ ಮೇಲೂ ಕೊರೋನಾ ಕರಿ ನೆರಳು ಬಿದ್ದಿದೆ.

ಹೌದು, ಹಕ್ಕಿ ಜ್ವರ ಹಾಗೂ ಕೊರೋನಾ ಹಿನ್ನಲೆಯಲ್ಲಿ ಚಿಕನ್ ಹಾಗೂ ಮಟನ್ ಮಾರಾಟಕ್ಕೆ ಹಿನ್ನಡೆ ಉಂಟಾಗಿತ್ತು.

ಆದರೆ ಪ್ರಸ್ತುತವಾಗಿ ಮೀನು ಮಾರಾಟಕ್ಕೂ ಕೂಡ ಕೊರೋನಾ ಎಫೆಕ್ಟ್ ತಟ್ಟಿದೆ. ಕೊರೋನಾ ಕರಿ ಛಾಯೆ ಎಲ್ಲಡೆ ಪಸರಿಸುತ್ತಿದ್ದು, ಸಾರ್ವಜನಿಕರು ದಿನಬಳಕೆಯ ವಸ್ತುಗಳನ್ನು ಖರೀದಿಸಲು ಹಿಂದೇಟು ಹಾಕುವಂತೆ ಸ್ಥಿತಿ ನಿರ್ಮಾಣವಾಗಿದೆ.

ಮೀನು ಖರೀದಿಗೆ ಹಿಂದೇಟು

ಮೀನು ಖರೀದಿಗೆ ಹಿಂದೇಟು

ಕೊರೋನಾ ಭೀತಿಯಿಂದ ಸಾರ್ವಜನಿಕರು ಮೀನು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.ಮಾಂಸಾಹಾರ ಸೇವಿಸಿದರೆ ಕೊರೋನಾ ಬೇಗ ಪೀಡಿಸುತ್ತೆ ಅನ್ನುವ ಭಯದಿಂದ ಮೀನು ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಶೇ. 60ರಷ್ಟು ಸ್ಥಗಿತಗೊಂಡಿದೆ

ಶೇ. 60ರಷ್ಟು ಸ್ಥಗಿತಗೊಂಡಿದೆ

ಚಿಕನ್ ಜೊತೆ ಮೀನುಗಳಿಗೂ ಬೈ ಬೈ ಹೇಳುವಂತ ಸ್ಥಿತಿ ನಿರ್ಮಾಣವಾಗಿದ್ದು,ಮೀನು ವ್ಯಾಪಾರ ಶೇ 35ರಷ್ಟು ಕುಸಿತ ಕಂಡಿದ್ದು, ನಗರದ ಗಣೇಶ ಪೇಟೆಯ ಮೀನು ಮಾರುಕಟ್ಟೆ ಶೇ. 60ರಷ್ಟು ಸ್ಥಗಿತಗೊಂಡಿದೆ.

ಕೊರೋನಾ ಕರಿ ಛಾಯೆ

ಕೊರೋನಾ ಕರಿ ಛಾಯೆ

ದಿನಕ್ಕೆ ಐದು ಲೋಡ್ ನಷ್ಟು ಮೀನು ಮಾರುತ್ತಿದ್ದ ಮಾರಾಟಗಾರರು. ಸಧ್ಯ ಒಂದು ಲೋಡ್ ಮಾರಾಟವಾದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಕೊರೋನಾ ಕರಿ ಛಾಯೆ ಎಲ್ಲಡೆ ಪಸರಿಸುತ್ತಿದ್ದು, ಸಾರ್ವಜನಿಕರು ದಿನಬಳಕೆಯ ವಸ್ತುಗಳನ್ನು ಖರೀದಿಸಲು ಹಿಂದೇಟು ಹಾಕುವಂತೆ ಸ್ಥಿತಿ ನಿರ್ಮಾಣವಾಗಿದೆ.

ಬಾರ್‌ಗಳು ಬಂದ್

ಬಾರ್‌ಗಳು ಬಂದ್

ಕೊರೊನಾ ವೈರಸ್ ಸೋಂಕು ಹತ್ತಿಕ್ಕಲು ಮಾರ್ಚ್ 31 ರವೆರೆಗೆ ರಾಜ್ಯದಲ್ಲಿ ಎಲ್ಲ ಬಾರ್ ಮತ್ತು ರೆಸ್ಟೊರೆಂಟ್‌ಗಳನ್ನು ಮುಚ್ಚಲು ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಇದರಿಂದ ಮದ್ಯಪ್ರಿಯರಿಗೆ ಆಘಾತವುಂಟಾಗಿದ್ದು, ಕೊರೊನಾ ವೈರಸ್ ಬಗ್ಗೆ ಕುಡುಕರು ಹಿಡಿಶಾಪ ಹಾಕುತ್ತಿದ್ದಾರೆ.

English summary
Coronavirus Fear: Hubballi Market Shutdown. Chicken, Fish And Mutton Shops Close. No Huge market crowd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X