• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತ್ತೆ ತಾರಕಕ್ಕೇರಿದ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ನವೆಂಬರ್ 8: ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಲಿಂಗಾಯತ ಮಠ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿನ ಉತ್ತರಾಧಿಕಾರಿ ನೇಮಕ ವಿವಾದ ಮತ್ತೊಮ್ಮೆ ತಾರಕಕ್ಕೇರಿದೆ. ಮಠದ ಉನ್ನತ ಮಟ್ಟದ ಸಮಿತಿಯ ಎರಡು ಬಣಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಯನ್ನು ಮೂರು ಸಾವಿರ ಮಠದ ಪೀಠಾಧ್ಯಕ್ಷರಾಗಿ ಮಾಡಲು ಒಂದು ಬಣ ಪ್ರಯತ್ನ ನಡೆಸುತ್ತಿದ್ದು, ರಾಜ್ಯದ ಕೆಲವು ಪ್ರಭಾವಿ ಸ್ವಾಮೀಜಿಗಳ ಸೂಚನೆಯಂತೆ ದಿಂಗಾಲೇಶ್ವರರಿಗೆ ಪಟ್ಟಕಟ್ಟುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. 2014ರಲ್ಲೂ ಇದೇ ವಿಷಯವಾಗಿ ವಿವಾದ ಹುಟ್ಟಿಕೊಂಡಿತ್ತು. ಪೀಠ ತ್ಯಾಗಕ್ಕೆ ಮುಂದಾಗಿದ್ದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಮತ್ತೆ ಪೀಠದಲ್ಲಿ ಮುಂದುವರೆದಿದ್ದರು.

  Siddaganga Swamiji : ಕನ್ನಡ ನಟ ಜಗ್ಗೇಶ್ ರ ಎರಡು ಬೇಡಿಕೆಗಳನ್ನ ಈಡೇರಿಸಿದ್ದರಂತೆ ಸಿದ್ದಗಂಗಾ ಶ್ರೀಗಳು
   ದಿಂಗಾಲೇಶ್ವರರ ಪೀಠಾರೋಹಣಕ್ಕೆ ಸರ್ವ ಪ್ರಯತ್ನ

  ದಿಂಗಾಲೇಶ್ವರರ ಪೀಠಾರೋಹಣಕ್ಕೆ ಸರ್ವ ಪ್ರಯತ್ನ

  ಈ ಒಂದು ನಡೆಗೆ ಬಿಜೆಪಿ ಪ್ರಭಾವಿ ನಾಯಕರ ಬೆಂಬಲ ಕೂಡ ಇದೆ ಎನ್ನಲಾಗುತ್ತಿದೆ. ದಿಂಗಾಲೇಶ್ವರ ಸ್ವಾಮೀಜಿಯನ್ನು ಪೀಠಾಧ್ಯಕ್ಷ ಮಾಡಲು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರಯತ್ನ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ‌. ಜಗದೀಶ್ ಶೆಟ್ಟರ್ ಬೆಂಬಲಿಗರು ದಿಂಗಾಲೇಶ್ವರರ ಪೀಠಾರೋಹಣಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ ಎಂದಿದ್ದು, ಜಗದೀಶ್ ಶೆಟ್ಟರ್, ಮಠದ ಉತ್ತರಾಧಿಕಾರಿ ವಿಷಯ ಅಪ್ರಸ್ತುತ. ಈ ವಿಷಯದಲ್ಲಿ ನನ್ನ ಹೆಸರನ್ನು ಸುಖಾಸುಮ್ಮನೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗಿರುವ ಸ್ವಾಮೀಜಿಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಉತ್ತರಾಧಿಕಾರಿ ಬದಲಾವಣೆ ವಿಚಾರದಲ್ಲಿ ನನ್ನ ಹೆಸರು ತರುತ್ತಿರುವುದು ಸರಿಯಲ್ಲವೆಂದು ಹೇಳಿಕೆ ನೀಡಿದ್ದಾರೆ.

  ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ತೆರೆ

   ಹಾಲಿ ಸ್ವಾಮೀಜಿಯನ್ನೇ ಮುಂದುವರೆಸಲು ಪಟ್ಟು

  ಹಾಲಿ ಸ್ವಾಮೀಜಿಯನ್ನೇ ಮುಂದುವರೆಸಲು ಪಟ್ಟು

  ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ನಡೆಯುತ್ತಿರುವ ಈ ಕಸರತ್ತು ಸಾಕಷ್ಟು ಪರ ವಿರೋಧಿ ಅಲೆಯನ್ನು ಎಬ್ಬಿಸುತ್ತಿದೆ. ದಿಂಗಾಲೇಶ್ವರರ ನೇಮಕ ತಡೆಯಲು ಮಠದ ಉನ್ನತ ಮಟ್ಟದ ಸಮಿತಿಯಲ್ಲಿನ ಮತ್ತೊಂದು ಬಣ ಸಜ್ಜಾಗಿದೆ. ಹಾಲಿ ಇರುವ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯನ್ನೇ ಪೀಠಾಧ್ಯಕ್ಷರಾಗಿ ಮುಂದುವರಿಸಬೇಕೆಂದು ಈ ಬಣ ಪಟ್ಟುಹಿಡಿದಿದೆ.

  ಹೀಗಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯವರ ನೇತ್ರತ್ವದಲ್ಲಿ ಹುಬ್ಬಳ್ಳಿಯಲ್ಲಿ ರಾತೋರಾತ್ರಿ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ್‌ ಲಿಂಬಿಕಾಯಿ, ಕೆಎಲ್ ‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಸಭೆಯಲ್ಲಿ ಭಾಗವಹಿಸಿದ್ದಾರೆ.

   ಪೀಠ ತ್ಯಜಿಸದಂತೆ ಸ್ವಾಮೀಜಿಗೆ ಮನವಿ

  ಪೀಠ ತ್ಯಜಿಸದಂತೆ ಸ್ವಾಮೀಜಿಗೆ ಮನವಿ

  ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳನ್ನು ಸಭೆಗೆ ಆಹ್ವಾನಿಸಿ ಪೀಠ ತ್ಯಜಿಸದಂತೆ ಮನವಿ ಮಾಡಲಾಗಿದೆ. ಯಾರ ಒತ್ತಡಕ್ಕೂ ಮಣಿಯಬಾರದು. ತಾವೇ ಪೀಠಾಧ್ಯಕ್ಷರಾಗಿ ಇರಬೇಕು ಎಂದು ಸ್ವಾಮೀಜಿಗಳಿಗೆ ತಿಳಿಸಿದ್ದಾರೆ. ಹೀಗಾಗಿ ಹಲವು ವರ್ಷಗಳಿಂದ ಶಾಂತವಾಗಿದ್ದ ವಿವಾದ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ.

  ಕೆಲವರ ತೀವ್ರ ಒತ್ತಡದಿಂದ ಮನನೊಂದು 2014 ರಲ್ಲಿ ಪೀಠತ್ಯಾಗ ಮಾಡಿದ್ದ ಗುರುಸಿದ್ಧ ಸ್ವಾಮೀಜಿಯನ್ನು ಭಕ್ತರ ಒತ್ತಡದ ಮೇಲೆ ಮೂರು ಸಾವಿರ ಮಠಕ್ಕೆ ವಾಪಸ್ ಕರೆ ತರಲಾಗಿತ್ತು. ಈಗ ಮತ್ತದೇ ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಚರ್ಚೆಗಳು ಮೂರು ಸಾವಿರ ಮಠದ ಆವರಣದಲ್ಲಿ ಕೇಳಿ ಬರುತ್ತಿವೆ. ಜಗದೀಶ್ ಶೆಟ್ಟರ್ ಮತ್ತವರ ತಂಡದ ಪ್ರಯತ್ನಕ್ಕೆ ಬಸವರಾಜ್ ಹೊರಟ್ಟಿ ಟೀಮ್ ಸಡ್ಡು ಹೊಡೆದಿದೆ.

  "ಮಠದ ಉನ್ನತ ಮಟ್ಟದ ಸಮೀತಿಯಲ್ಲಿ ನಾನು ಇದ್ದೇನೆ. ಸಮಿತಿ ಸಭೆ ಕರೆದು ಈ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ.‌ ಸಭೆ ಕರೆದರೆ ದಿಂಗಾಲೇಶ್ವರರನ್ನು ನೇಮಕ ಮಾಡಲು ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಬಸವರಾಜ್ ಹೊರಟ್ಟಿ ಹೇಳುತ್ತಿದ್ದಾರೆ.

  ಹುಬ್ಬಳ್ಳಿ ಮೂರು ಸಾವಿರ ಮಠದ ವಿವಾದಕ್ಕೆ ತೆರೆ?ಹುಬ್ಬಳ್ಳಿ ಮೂರು ಸಾವಿರ ಮಠದ ವಿವಾದಕ್ಕೆ ತೆರೆ?

   ಏನಿದು ಮೂರು ಸಾವಿರ ಮಠ ವಿವಾದ?

  ಏನಿದು ಮೂರು ಸಾವಿರ ಮಠ ವಿವಾದ?

  2014ರ ಅಕ್ಟೋಬರ್‌ನಲ್ಲಿ ರಾಜ ಯೋಗೀಂದ್ರ ಸ್ವಾಮೀಜಿಯವರು ಪೀಠ ತ್ಯಾಗ ಮಾಡಲು ಮುಂದಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ಭಾರೀ ವಿವಾದ ಉಂಟಾಗಿತ್ತು. ಇದರಿಂದ ನೊಂದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಮೂರು ಸಾವಿರ ಮಠದಿಂದ ಹಾನಗಲ್‌ನಲ್ಲಿರುವ ಕುಮಾರೇಶ್ವರ ಮಠಕ್ಕೆ ತೆರಳಿದ್ದರು. ಸ್ವಾಮೀಜಿಗಳನ್ನು ಮಠಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ನಡೆಯುತ್ತಲೇ ಇತ್ತು. 2014ರ ಏ.9ರಂದು ಮಠದ ಭಕ್ತರು ಸಭೆ ಸೇರಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಮಠಕ್ಕೆ ವಾಪಸ್ ಕರೆತರಲು ನಿರ್ಧರಿಸಿದ್ದರು. ಅದರಂತೆ ಇಂದು ಭಕ್ತರ ನೀಯೋಗ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಶ್ರೀಗಳು ಮಠಕ್ಕೆ ವಾಪಸ್ ಬಂದಿದ್ದರು. ಅಂದಿನಿಂದಲೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

  English summary
  Controversy Over Successor Of Moorusavir Mutt Started Again in Hubballi
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X