ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿಯನ್ನು ರಾಜಿನಾಮೆ ಕೊಡುವಂತೆ ಕೇಳಿ ತಾನೇ ಅಮಾನತ್ತಾದ ಪೇದೆ!

By Manjunatha
|
Google Oneindia Kannada News

Recommended Video

ಎಚ್ ಡಿ ಕೆ ರಾಜೀನಾಮೆ ಕೊಡಬೇಕು ಎಂದ ಪೊಲೀಸ್ ಪೇದೆಗೆ ಬಂದ ಗತಿ ನೋಡಿ

ಹುಬ್ಬಳ್ಳಿ, ಜೂನ್ 19: ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೇ ರಾಜಿನಾಮೆ ಕೊಡುವಂತೆ ಕೇಳಿದ ಪೊಲೀಸ್ ಕಾನ್ಸ್ಟೇಬಲ್ ಅಮಾನತ್ತಾಗಿದ್ದಾರೆ.

ಹುಬ್ಬಳ್ಳಿ ನಗರ ಪೊಲೀಸ್ ಠಾಣಾ ಪೇದೆ ಅರುಣ್ ಡೊಳ್ಳಿನ್ ಎಂಬುವರು ಫೇಸ್‌ಬುಕ್‌ನಲ್ಲಿ 'ಗಡುವು ಮುಗಿದು 18 ದಿನ ಆಯಿತು ರೈತರ ಸಾಲ ಮನ್ನಾ ಯಾವಾಗ?, ಕುಮಾರಸ್ವಾಮಿ ರಾಜಿನಾಮೆ ಕೊಡಿ' ಎಂದು ಪೋಸ್ಟ್ ಹಾಕಿದ್ದರು. ಇದು ಇಲಾಖೆ ಕೆಂಗಣ್ಣಿಗೆ ಕಾರಣವಾಗಿತ್ತು.

ಸರಗಳ್ಳನನ್ನು ಹಿಡಿದ ಪೇದೆಗೆ ಒಂದು ತಿಂಗಳ ರಜೆ ಜೊತೆ ಹಲವು ಇನಾಮು ಸರಗಳ್ಳನನ್ನು ಹಿಡಿದ ಪೇದೆಗೆ ಒಂದು ತಿಂಗಳ ರಜೆ ಜೊತೆ ಹಲವು ಇನಾಮು

ಸರ್ಕಾರಿ ನೌಕರ ಸರ್ಕಾರವನ್ನು ಟೀಕಿಸುವ ಈ ಪೋಸ್ಟ್‌ ಸ್ಥಳೀಯವಾಗಿ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿತ್ತು. ಪೊಲೀಸ್ ಕಾನ್ಸ್ಟೇಬಲ್ ಅರುಣ್ ಹಾಕಿದ್ದ ಈ ಪೋಸ್ಟ್‌ ಹಲವು ಶೇರ್‌ಗಳನ್ನು ಕೂಡಾ ಕಂಡಿತ್ತು.

constable suspend for asking Kumaraswamy to resign

ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎಂ.ಎನ್.ನಾಗರಾಜು ಅವರು ಕಾನ್ಸ್ಟೇಬಲ್ ಅರುಣ್ ಡೊಳ್ಳಿನ್ ಅವರನ್ನು ಅಮಾನತು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯು ಆಯಯುಕ್ತರಿಗೆ ನೊಟೀಸ್ ಸಹ ಜಾರಿ ಮಾಡಿದೆ.

ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಮಹದಾಯಿ ಹೋರಾಟ ಸೇರಿದಂತೆ, ರೈತರ ಆತ್ಮಹತ್ಯೆಯಂತಹಾ ಸುದ್ದಿಗಳನ್ನು, ಚಿತ್ರಗಳನ್ನು ಹಾಕುತ್ತಿದ್ದ ರೈತ ಪರ ಅರುಣ್ ಈಗ ನೇರವಾಗಿ ಕುಮಾರಸ್ವಾಮಿ ಅವರನ್ನೇ ರಾಜಿನಾಮೆ ಕೇಳಿ ಶಿಕ್ಷೆ ಅನುಭವಿಸುತ್ತಿದ್ದಾರೆ.

constable suspend for asking Kumaraswamy to resign

ಪೊಲೀಸ್ ವೃತ್ತಿಯ ಜೊತೆಗೆ ರೈತರೂ ಆಗಿರುವ ಅರುಣ್ ಡೊಳ್ಳಿನ್ ತಮ್ಮ ಫೇಸ್‌ಬುಕ್ ಪೋಸ್ಟ್ ವಿವಾದದ ಕೇಂದ್ರವಾಗುತ್ತಿದ್ದಂತೆ ಪೋಸ್ಟ್‌ ಅನ್ನು ಡಿಲೀಟ್ ಮಾಡಿದ್ದಾರೆ.

English summary
Hubballi station Police constable Arun Dollin suspended from duty for his Facebook post. He asked CM Kumaraswamy to resign for not weaving off farmer loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X