ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಯಕ್ಕೆ ಮುಲಾಮು ಹಚ್ಚಲು ಸಿದ್ದರಾಮಯ್ಯ-ಕುಮಾರಸ್ವಾಮಿ ಸಭೆ

|
Google Oneindia Kannada News

Recommended Video

ಎದ್ದಿರುವ ಗೊಂದಲಗಳನ್ನ ಶಮನ ಮಾಡಲು ಹೊರಟಿದ್ದಾರೆ ಸಿದ್ದರಾಮಯ್ಯ ಹಾಗು ಎಚ್ ಡಿ ಕೆ

ಹುಬ್ಬಳ್ಳಿ, ಮೇ 14: ದೋಸ್ತಿ ಸರ್ಕಾರದ ನಾಯಕರ ನಡುವೆ ಮಾತಿನ ಸಮರ ಬಹಿರಂಗವಾಗಿ ನಡೆಯುತ್ತಿರುವಂತೆಯೇ ಅದಕ್ಕೆ ಮುಲಾಮು ಹಚ್ಚಲು ಪ್ರಯತ್ನಗಳು ಆರಂಭವಾಗಿವೆ.

ಉಪ ಚುನಾವಣೆಯಲ್ಲಿ ಪ್ರಚಾರ ನಡೆಸಲು ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿರುವ ಸಮ್ಮಿಶ್ರ ಸರ್ಕಾರದ ನಾಯಕರು ದಿಢೀರ್ ಸಭೆ ನಡೆಸಿದ್ದಾರೆ.

ಜೆಡಿಎಸ್ ನಾಯಕರ ಹೇಳಿಕೆ ಗಮನಿಸಿದರೆ ಸರ್ಕಾರ ಶೀಘ್ರ ಪತನ: ಬಿಎಸ್ವೈ ಜೆಡಿಎಸ್ ನಾಯಕರ ಹೇಳಿಕೆ ಗಮನಿಸಿದರೆ ಸರ್ಕಾರ ಶೀಘ್ರ ಪತನ: ಬಿಎಸ್ವೈ

ಎಚ್ ಡಿ ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ತಂಗಿರುವ ಹೋಟೆಲ್‌ನಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರ ನಡುವೆ ಸಮಾಲೋಚನೆ ನಡೆದಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ಸಚಿವ ಬಸವರಾಜ ಹೊರಟ್ಟಿ. ಸಚಿವ ಬಂಡೆಪ್ಪ ಕಾಶೆಂಪೂರ್, ಜಮೀರ್ ಅಹ್ಮದ್ ಸೇರಿದಂತೆ ಎರಡೂ ಪಕ್ಷಗಳ ಕೆಲವು ಮುಖಂಡರು ಸಭೆ ಸೇರಿದ್ದಾರೆ.

Congress Siddaramaiah JDS HD Kumaraswamy and other leaders meeting at Hubballi

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ಅವರು ಸಿದ್ದರಾಮಯ್ಯ ವಿರುದ್ಧ ಸತತವಾಗಿ ನೀಡುತ್ತಿರುವ ಹೇಳಿಕೆಗಳು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಒಳಗಾಗಲಿದೆ ಎನ್ನಲಾಗಿದೆ.

ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುತ್ತಾ? ಕೆಸಿ ವೇಣುಗೋಪಾಲ್ ಏನಂತಾರೆ?ಮೇ 23ರ ನಂತರ ಮೈತ್ರಿ ಸರ್ಕಾರ ಬೀಳುತ್ತಾ? ಕೆಸಿ ವೇಣುಗೋಪಾಲ್ ಏನಂತಾರೆ?

ವಿಶ್ವನಾಥ್ ಅವರ ಹೇಳಿಕೆಗಳು ಮೈತ್ರಿ ಸರ್ಕಾರಕ್ಕೆ ಆರೋಗ್ಯಯುತವಾಗಿಲ್ಲ. ಇದರಿಂದ ಕಾಂಗ್ರೆಸ್ ಶಾಸಕರು ಕೆರಳಿದ್ದಾರೆ. ಈ ಹಿಂದೆ ಜಿಟಿ ದೇವೇಗೌಡ ಅವರು ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಮತಗಳೂ ಬಿಜೆಪಿಗೆ ಬಿದ್ದಿವೆ ಎಂಬ ಹೇಳಿಕೆ ನೀಡಿದ್ದರು. ಇದರಿಂದ ಈ ಕಿತ್ತಾಟ ಆರಂಭವಾಗಿದೆ. ಜೆಡಿಎಸ್ ನಾಯಕರು ಇಂತಹ ಹೇಳಿಕೆ ನೀಡದೆ ನಿಯಂತ್ರಣದಲ್ಲಿ ಇರಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಲಿದ್ದಾರೆ. ನಾಯಕರು ಮತ್ತು ಶಾಸಕರನ್ನು ಬಹಿರಂಗವಾಗಿ ಹೀಗೆ ಹೇಳಿಕೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕದಂತೆ ನೋಡಿಕೊಳ್ಳುವಂತೆ ಸೂಚನೆ ನೀಡುವುದರ ಕುರಿತು ಸಹ ಸಭೆಯಲ್ಲಿ ಚರ್ಚೆಯಾಗಲಿದೆ.

ಜಿ,ಟಿ. ದೇವೇಗೌಡರು ಆ 'ಸತ್ಯ' ಹೇಳಬಾರದಿತ್ತು ಎಂದ ಸಿದ್ದರಾಮಯ್ಯ ಜಿ,ಟಿ. ದೇವೇಗೌಡರು ಆ 'ಸತ್ಯ' ಹೇಳಬಾರದಿತ್ತು ಎಂದ ಸಿದ್ದರಾಮಯ್ಯ

ಜತೆಗೆ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಉಪ ಚುನಾವಣೆಗಳ ಆಗುಹೋಗುಗಳ ಕುರಿತು ಸಹ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.

English summary
Congress leader Siddaramaiah, Chief Minister HD Kumaraswamy and some other leaders of both parties were held a meeting at Hubballi and discussed about ongoing word war between the leaders of JDS and Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X