ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಲಿಂಪಿಕ್ಸ್ ಚಿನ್ನ ವಿಜೇತೆ ಹುಬ್ಬಳ್ಳಿಯ ಸಹನಾರನ್ನು ಸನ್ಮಾನಿಸಿದ ಸಿದ್ದರಾಮಯ್ಯ

|
Google Oneindia Kannada News

ಹುಬ್ಬಳ್ಳಿ, ಜುಲೈ 05 : ಮಲೇಷಿಯಾದಲ್ಲಿ ನಡೆದ ಸ್ಟೂಡೆಂಟ್ಸ್ ಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕ ಜಯಿಸಿದ ಹುಬ್ಬಳ್ಳಿಯ ಸಹನಾ ಕುಲಕರ್ಣಿ ಅವರನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ, ಸನ್ಮಾನಿಸಿದರು.

ಮಲೇಷ್ಯಾದಲ್ಲಿ ಜೂನ್ 29ರಿಂದ ಜುಲೈ 1ರ ವರಗೆ ನಡೆದ 3ನೇ ಅಂತಾರಾಷ್ಟ್ರೀಯ ಸ್ಟುಡೆಂಟ್ಸ್ ಒಲಿಂಪಿಕ್ಸ್ ಗೇಮ್ಸ್ ನ ಟೇಬಲ್ ಟೆನಿಸ್ ನಲ್ಲಿ ಹುಬ್ಬಳ್ಳಿಯ ಸಹನಾ ಕುಲಕರ್ಣಿ ಚಿನ್ನಕ್ಕೆ ಕೊರಳೊಡ್ಡಿದ್ದರು.

ಸ್ಟುಡೆಂಟ್ಸ್ ಒಲಿಂಪಿಕ್ಸ್: ಹುಬ್ಬಳ್ಳಿಯ ಸಹನಾ ಕುಲಕರ್ಣಿಗೆ ಚಿನ್ನಸ್ಟುಡೆಂಟ್ಸ್ ಒಲಿಂಪಿಕ್ಸ್: ಹುಬ್ಬಳ್ಳಿಯ ಸಹನಾ ಕುಲಕರ್ಣಿಗೆ ಚಿನ್ನ

CM Siddaramaiah felicitates students olympics gold medalist Hubballi Sahana

ಹುಬ್ಬಳ್ಳಿಯ ಕೆಎಲ್ ಇ ಸಂಸ್ಥೆಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಇ ಅಂಡ್ ಸಿ ವಿಭಾಗದ 7ನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಸಹನಾ, ಫೈನಲ್ ನಲ್ಲಿ ಮಲೇಷ್ಯಾ ಆಟಗಾರ್ತಿಯನ್ನು 11-8 ಪಾಯಿಂಟ್ಸ್ ಗಳ ಅಂತರದಿಂದ ಮಣಿಸಿ ಚಿನ್ನದ ಪದಕವನ್ನು ಮುಗಿಡಿಗೇರಿಸಿಕೊಂಡಿದ್ದರು.

ಫೈನಲ್ ಪಂದ್ಯದ 5 ಸೆಟ್‌ಗಳಲ್ಲಿ 3-2 ಅಂತರದಿಂದ ಜಯ ಸಾಧಿಸಿರುವ ಸಹನಾ ಮೊದಲ ಭಾರತದ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

English summary
Chief minister of karnataka Siddaramaiah felicitated Malaysia students olympics in table tennis gold medalist in Hubballi girl Sahana Kulkarni. Sahana is pursuing 7th semester engineering in BVB Engineering Collage Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X