• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿಎಸ್‌ಟಿ ಎಫೆಕ್ಟ್: ಚಾಕಲೇಟ್ ಉತ್ಪನ್ನಗಳ ಬೆಲೆ ಭಾರೀ ಹೆಚ್ಚಳ

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜುಲೈ 14: ದೇಶದಾದ್ಯಂತ ಜೂನ್ 30ರ ಮಧ್ಯ ರಾತ್ರಿ ಸರಕು ಹಾಗೂ ಸೇವಾ ತೆರಿಗೆ ವ್ಯವಸ್ಥೆ ಜಾರಿಯಾದ ನಂತರ ಚಾಕಲೇಟ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಚಾಕಲೇಟ್‌ಗಳನ್ನು ಐಷಾರಾಮಿ ಉತ್ಪನ್ನಗಳ ಪಟ್ಟಿಗೆ ಸೇರಿಸಿರುವುದರಿಂದ ಶೇ. 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಈ ಮೊದಲು ಚಾಕಲೇಟ್ ಉತ್ಪನ್ನಗಳ ಮೇಲೆ ಶೇ. 14ರಷ್ಟು ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು.

ಈಗ ತೆರಿಗೆ ದುಪ್ಪಟ್ಟಾಗಿರುವುದರಿಂದ ಈ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಲಕ್ಷಣಗಳು ದಟ್ಟವಾಗಿವೆ.

ಅದರಲ್ಲಿಯೂ ಮಾರ್ಡೆ, ಪಿಲ್ಸ್‌ಬರಿ, ಸೆಲ್‌ಬಾರ್ನ್ ಕಂಪೆನಿಯ ಚಾಕೊಲೇಟ್‌ಗಳ ಬೆಲೆ ದುಪ್ಪಟ್ಟಾಗಲಿದೆ. ತೆರಿಗೆ ಹೆಚ್ಚಳವಾಗಿರುವುದರಿಂದ ಚಾಕಲೇಟ್‌ನ ದರವೂ ಹೆಚ್ಚಾಗಿದೆ. ಇದರಿಂದ ಗ್ರಾಹಕರು ಚಾಕಲೇಟ್ ಖರೀದಿಯಿಂದ ವಿಮುಖರಾಗುವ ಆತಂಕ ವ್ಯಾಪಾರಿಗಳು ಹಾಗೂ ಉತ್ಪಾದಕರಲ್ಲಿ ಮೂಡಿದೆ.

ಈ ಮಧ್ಯೆ ಈಗಿರುವ ಚಾಕಲೇಟ್ ಸ್ಟಾಕ್‌ನ್ನು ಖಾಲಿ ಮಾಡುತ್ತಿರುವ ಬೇಕರಿ ಹಾಗೂ ಚಾಕಲೇಟ್ ವ್ಯಾಪಾರಸ್ಥರು ಹೊಸ ಉತ್ಪನ್ನಗಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ಮಧ್ಯೆ ಜಿಎಸ್‌ಟಿ ಕುರಿತು ಇನ್ನು ಸ್ಪಷ್ಟ ಚಿತ್ರಣ ಇಲ್ಲದ ಕಾರಣ ಈಗಲೇ ಯಾವ ತಿರ್ಮಾನಕ್ಕೂ ಬರುವುದು ಸರಿಯಲ್ಲ ಎಂದು ಕೆಲವು ವ್ಯಾಪಾರಸ್ಥರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಐಷಾರಾಮಿ ವಸ್ತುಗಳ ಪಟ್ಟಿಗೆ ಸೇರಿರುವ ಚಾಕಲೇಟ್ ಇನ್ಮುಂದೆ ಮಕ್ಕಳಿಗೆ ಕಹಿಯಾಗುವುದಂತೂ ಗ್ಯಾರಂಟಿ.

English summary
After GST implementation Chocolate got highest tax 28 %, it’s drastically affected on this industry. Earlier it was just 14 %. Most of vendors and consumers fear about high taxation. Industry would suffer from this development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X