ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಳಿ ಮಾಂಸ ದರ ದಾಖಲೆ ಏರಿಕೆ, ಮಾಂಸಪ್ರಿಯರ ಟೀಕೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜುಲೈ 01 : ಕೋಳಿ ಮಾಂಸದ ಉತ್ಪಾದನೆಯಲ್ಲಿ ತೀವ್ರ ಇಳಿಮುಖವಾಗಿರುವುದರಿಂದ ಸಹಜವಾಗಿಯೇ ದರ ತೀವ್ರ ಏರಿಕೆ ಕಂಡಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೋಳಿ ಮಾಂಸದ ದರ ಹೊಲ್‌ಸೆಲ್ ಮಾರುಕಟ್ಟೆಯಲ್ಲಿ 100ರ ಗಡಿ ದಾಟಿದೆ.

ಆದರೆ ಅನಿಯಂತ್ರಿತ ಕಕ್ಕುಟ ಮಾರುಕಟ್ಟೆಯಲ್ಲಿ ದರದ ಹೊಯ್ದಾಟವು ಕೋಳಿ ಸಾಕಣೆದಾರರ ಈ ಸಂತಸವನ್ನು ಯಾವಾಗ ಕಸಿದುಕೊಳ್ಳುತ್ತೊ ಎಂಬ ಆತಂಕವೂ ಬೆನ್ನ ಹಿಂದೆಯೇ ಇದೆ.

Chicken rate in Hubballi touches record high

ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ಪ್ರತಿ ಕೆಜಿ ಕೋಳಿ ಮಾಂಸಕ್ಕೆ ಸರಾಸರಿ 104 ರೂಪಾಯಿ ದರದಲ್ಲಿ ಮಾರಾಟವಾಗಿದೆ. ರಾಜ್ಯದ ಬಹುತೇಕ ಪೌಲ್ಟ್ರಿಗಳು ಮರಿಗಳಿಗಾಗಿ ಪಶ್ಚಿಮ ಬಂಗಾಳವನ್ನು ಅವಲಂಬಿಸಿವೆ. ಆದರೆ, ಬೇಡಿಕೆಗೆ ಅನುಗುಣವಾಗಿ ಮರಿಗಳು ಸಿಗುತ್ತಿಲ್ಲ ಅಲ್ಲದೆ ಮರಿಗಳ ದರದಲ್ಲೂ ಹೆಚ್ಚಳವಾಗಿದೆ.

ಜಿಎಸ್ಟಿ ಬೆಲೆ ಏರಿಕೆ ಬಿಸಿː ಬಿಸ್ಕತ್ತು, ಆನ್ಲೈನ್ ಸೇವೆಗೂ ಕುತ್ತುಜಿಎಸ್ಟಿ ಬೆಲೆ ಏರಿಕೆ ಬಿಸಿː ಬಿಸ್ಕತ್ತು, ಆನ್ಲೈನ್ ಸೇವೆಗೂ ಕುತ್ತು

1 ದಿನದ ಮರಿ ದರ 40 ರೂಪಾಯಿಗೆ ಹೆಚ್ಚಳವಾಗಿದ್ದು, ಮರಿ ಬೆಳೆದು 2 ಕೆ.ಜಿ ತೂಕ ಆಗಬೇಕಾದರೆ ಅದಕ್ಕೆ 68 ರೂಪಾಯಿ ವೆಚ್ಚವಾಗುತ್ತದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದರಿಂದ ಸಹಜವಾಗಿಯೇ ಕೋಳಿ ಮಾಂಸದ ದರ ಹೆಚ್ಚಳವಾಗಿದೆ.

ಮಾಂಸಕ್ಕಾಗಿ ಪ್ರತಿದಿನ ಬೆಂಗಳೂರಿನಲ್ಲಿ 3 ಲಕ್ಷ, ಹುಬ್ಬಳ್ಳಿಯಲ್ಲಿ 20,000, ದಾವಣಗೆರೆಯಲ್ಲಿ 25,000, ಬೆಳಗಾವಿಯಲ್ಲಿ 30,000 ಕೋಳಿಗಳು ಮಾರಾಟವಾಗುತ್ತಿವೆ. ಆದರೆ, ದರ ಹೆಚ್ಚಳ ಹಾಗೂ ಬೇಡಿಕೆಗೆ ಅನುಗುಣವಾಗಿ ಕೋಳಿಮರಿಗಳು ಲಭ್ಯವಿಲ್ಲದಿರುವ ಕಾರಣ ದರ ಹೆಚ್ಚಳ ಅನಿವಾರ್ಯವಾಗಿದೆ ಎನ್ನುತ್ತಾರೆ ಪೌಲ್ಟ್ರಿ ಮಾಲೀಕರು.

ಸಾಮಾನ್ಯವಾಗಿ ಕೋಳಿ ಮಾಂಸಕ್ಕೆ ವರ್ಷದಲ್ಲಿ 6 ತಿಂಗಳು ಹೆಚ್ಚು ಬೇಡಿಕೆ ಇರುತ್ತದೆ. ಹಬ್ಬ, ಹೊಸ ವರ್ಷ ಮತ್ತಿತರ ಸಂದರ್ಭಗಳಲ್ಲಿ ಬೇಡಿಕೆ ತುಸು ಹೆಚ್ಚಾಗಿಯೇ ಇರುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು. ಬೇಡಿಕೆಯಷ್ಟು ಪೂರೈಕೆ ಇಲ್ಲದಿರುವ ಕಾರಣ ಈ ಬಾರಿ ವರ್ಷದ ಎಲ್ಲ ತಿಂಗಳಲ್ಲಿಯೂ ಬೇಡಿಕೆ ಹೆಚ್ಚು ಎನ್ನುವುದು ಅವರ ಅಭಿಪ್ರಾಯ.

ಗೋ ಮಾಂಸ ನಿಷೇಧದ ಪರಿಣಾಮ

ಇನ್ನೊಂದೆಡೆ ಕೇಂದ್ರ ಸರ್ಕಾರ ಗೋವುಗಳ ಮಾರಾಟಕ್ಕೆ ನಿರ್ಬಂಧ ಹಾಕುವ ಮೂಲಕ ಗೋ ಹತ್ಯೆ ನಿಷೇದಕ್ಕೆ ಮುಂದಾಗಿರುವುದು ಕೋಳಿ ಮಾಂಸದ ಬೇಡಿಕೆಯನ್ನು ಹೆಚ್ಚಳ ಮಾಡಿದೆ. ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ದರದಲ್ಲಿ ಏರಿಕೆಯಾಗಿದ್ದು, ಮಾಂಸ ಪ್ರಿಯರ ಅಸಮಾದಾನಕ್ಕೆ ಕಾರಣವಾಗಿದೆ.

English summary
Chicken rate has shot up drastically in wholesale market in Hubballi due to reduction of chicken production. Few people are blaming ban on cow slaughter by union government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X