ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ; ಪ್ರತಿಭಟಿಸಿದ ಮರಾಠಾ ಸಮುದಾಯ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 24: ಮಹಾನಗರ ಪಾಲಿಕೆ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದ ಛತ್ರಪತಿ ಶಿವಾಜಿಯ ಪ್ರತಿಮೆ ಮಂಗಳವಾರ ಉರುಳಿದೆ. ಎರಡು ದಶಕಗಳ ಹೋರಾಟದ ನಂತರ 2019ರಲ್ಲಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಆದರೆ, ಅದು ಇನ್ನೂ ಉದ್ಘಾಟನೆಗೊಂಡಿರಲಿಲ್ಲ. ಶಿವಾಜಿಯ ಪ್ರತಿಮೆ ಉರುಳಿರುವುದಕ್ಕೆ ಮರಾಠಾ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದರು.

ಈ ಘಟನೆ ವಿವಾದಕ್ಕೆ ಸಿಲುಕುವ ಮುನ್ನ, ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಲ್ ಮಾತನಾಡಿ, ಪ್ರತಿಮೆಯನ್ನು 100 ದಿನಗಳಲ್ಲಿ ಪುನಃ ಸ್ಥಾಪಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. 12.5 ಅಡಿ ಎತ್ತರದ, 8 ಅಡಿ ಅಗಲದ ಪ್ರತಿಮೆಯನ್ನು ಸುಮಾರು ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತಾದರೂ, ಉದ್ಘಾಟನೆಯಾಗಿರಲಿಲ್ಲ.

Hubballi: Chhatrapati Shivaji Statue Collapse; Maratha Community Members held Protest

Recommended Video

'ಎಲ್ಲಾ ನಾಯಕರ ತನಿಖೆಯಾಗಲಿ ಯಾರು ಏಕಪತ್ನಿವ್ರತಸ್ಥರು? ಯಾರಿಗೆಲ್ಲ ಅನೈತಿಕ ಸಂಬಂಧ ಇದೆ ಗೊತ್ತಾಗುತ್ತೆ' ಸಚಿವ ಸುಧಾಕರ್ ಹೇಳಿಕೆ | Oneindia Kannada

ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಎಸ್‌.ಸಿ ಬೆವೂರ್, ಈ ಘಟನೆಯ ಬಗ್ಗೆ ತನಿಖೆ ಕೋರಿ ಸ್ಯಾಟಲೈಟ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದರು. ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಪ್ರತಿಭಟನಾಕಾರರನ್ನು ಸಂತೋಷಪಡಿಸುವಲ್ಲಿ ಇದು ಯಶಸ್ವಿಯಾಯಿತು.

English summary
The statue of Chhatrapati Shivaji at Hubballi City Corporation Park collapsed on Tuesday, Maratha community members held protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X