ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಫ್‌ಐ, ಎಸ್‌ಡಿಪಿಐ ನಿಷೇಧಿಸಲು ಕೇಂದ್ರ ಚಿಂತನೆ: ಜಗದೀಶ್ ಶೆಟ್ಟರ್‌

|
Google Oneindia Kannada News

ಹುಬ್ಬಳ್ಳಿ, ಆಗಸ್ಟ್‌ 6: ಮತೀಯ ಗಲಭೆ ಕಾರಣವಾಗುತ್ತಿರುವ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ದೇಶಾದ್ಯಂತ ನಿಷೇಧಿಸುವ ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಯಾವುದೇ ಹಂತದಲ್ಲಾದರೂ ಈ ಸಂಘಟನೆಗಳು ನಿಷೇಧವಾಗಬಹುದು. ಆ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅಮೃತಮಹೋತ್ಸವ ಕಾರ್ಯಕ್ರಮ ಬಿಜೆಪಿಗೆ ನಡುಕ ಹುಟ್ಟಿಸಿದೆ ಎಂಬ ವಿರೋಧ ಪಕ್ಷದ ಮುಖಂಡರ ಹೇಳಿಕೆ ಬಗ್ಗೆ ಮಾತನಾಡಿ, " ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮದ ಬಗ್ಗೆ ಬಿಜೆಪಿಗೆ ನಡುಕ ಉಂಟಾಗಿಲ್ಲ. ಪಕ್ಷದ ಬೆಳವಣಿಗೆ, ಸಂಘಟನೆಗೆ ಇದರಿಂದ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಸೂಚನೆಯಂತೆ ವೇದಿಕೆಯ ಮೇಲೆ ಡಿ.ಕೆ. ಶಿವಕುಮಾರ್‌ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಅದರಿಂದ ಅವರದು ತೋರಿಕೆಯ ಒಗ್ಗಟ್ಟು ಅಷ್ಟೇ. ಕಾಂಗ್ರೆಸ್‌ನಲ್ಲಿನ ಆಂತರಿಕ ಜಗಳ ದೊಡ್ಡದಾಗುತ್ತಿದೆ. ಈ ಕಾರ್ಯಕ್ರವೇ ಕಾಂಗ್ರೆಸ್‌ಗೆ ದೊಡ್ಡ ಸಮಸ್ಯೆಯಾನ್ನುಂಟು ಮಾಡಲಿದೆ" ಎಂದರು.

Central Government Thinking to Ban SDPI and PFI in India: Jagdeesh Shetter

ಬಿಜೆಪಿ ಕಾರ್ಯಕ್ರಮಕ್ಕೂ ಜನ ಸೇರಿದ್ರು
ಆ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರಿದ್ದರ ಬಗ್ಗೆ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಮ್ಮಲ್ಲೂ ನಡೆದಿವೆ. ಬಿಜೆಪಿ ವತಿಯಿಂದ ನಡೆದ ಸಂಕಲ್ಪಯಾತ್ರೆ, ರೈತರ ಸಮಾವೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ 4-5 ಲಕ್ಷ ಜನ ಸೇರಿದ್ದರು. ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರ ಸೇರಿದ್ದೇನು ದೊಡ್ಡ ವಿಷಯವೇನೂ ಅಲ್ಲ. ಆ ಕಾರ್ಯಕ್ರಮಕ್ಕಾಗಿ ಅವರು ಬಹಳಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ದೇಶದಲ್ಲಿ ಕಾಂಗ್ರೆಸ್‌ ಸಂಘಟನೆ ದಿನೇ ದಿನೇ ಕುಸಿಯತ್ತಿದೆ. ರಾಜ್ಯವೂ ಶೀಘ್ರ ಕಾಂಗ್ರೆಸ್‌ ಮುಕ್ತವಾಗಲಿದೆ. ರಾಜ್ಯದಲ್ಲಿ 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ " ಎಂದು ಭವಿಷ್ಯ ನುಡಿದರು.

ಪಾಲಿಸ್ಟರ್ ಧ್ವಜ ಹಾರಿಸಲು ಬಿಜೆಪಿ ಅನುಮತಿ ನೀಡಿರುವುದನ್ನು ಕಾಂಗ್ರೆಸ್‌ ಟೀಕಿಸುತ್ತಿರುವ ಬಗ್ಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಖಾದಿಗೆ ಮಹತ್ವ ಬಂದಿದೆ. ಖಾದಿ ಕುಸಿದು ಬಿದ್ದಾಗ ಕಾಂಗ್ರೆಸ್ ಸ್ಪಂದಿಸಿರಲಿಲ್ಲ, ಈಗ ನಾಟಕ ಮಾಡಿಕೊಂಡು ಬೆಂಗೇರಿಯ ಝಾದಿ ಗ್ರಾಮೋದ್ಯೋಗಕ್ಕೆ ಹೋಗಿ ಪೋಸ್ ಕೊಟ್ಟಿ ಬಂದಿದ್ದಾರೆ.

ರಾಹುಲ್ ಗಾಂಧಿ ಕೂಡ ಅಲ್ಲಿಗೆ ಭೇಟಿ ನೀಡಿ ಬಂದಿದ್ದಾರೆ, ಆದರೆ ಅವರಿಗೆ ಅಲ್ಲಿ ಏನೂ ನಡೆಯುತ್ತಿದೆ ಎನ್ನುವುದೂ ಅವರಿಗೆ ಗೊತ್ತಿಲ್ಲ. ಖಾದಿ ಮಹತ್ವ ಇದ್ದೇ ಇದೆ. ಕೋಟ್ಯಂತರ ಧ್ವಜ ಬೇಕಾಗಿರುವುದರಿಂದ ಅನಿವಾರ್ಯವಾಗಿ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಲಾಗಿದೆ. ಆದರೆ ಈ ಬಾರಿ ಖಾದಿ ಧ್ವಜಗಳು ಹೆಚ್ಚು ಮಾರಾಟವಾಗಿವೆ. ಕಾಂಗ್ರೆಸ್ ಈ ವಿಚಾರವನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

English summary
State and Central Governments are thinking to ban SDPI and PFI Organization in India, Former Chief Minister Jagadish Shettar said in Hubli,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X