• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಪಿಎಲ್ ಬೆಟ್ಟಿಂಗ್; ಹುಬ್ಬಳ್ಳಿಯಲ್ಲಿ ಮೂವರು ಅರೆಸ್ಟ್

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ಅಕ್ಟೋಬರ್ 9: ಹುಬ್ಬಳ್ಳಿಯಲ್ಲಿಐಪಿಎಲ್ ಪಂದ್ಯಾವಳಿ ಆರಂಭವಾದ ಬೆನ್ನಲ್ಲೇ ಕ್ರಿಕೆಟ್ ಬೆಟ್ಟಿಂಗ್ ದಂಧೆಯೂ ಜೋರಾಗಿ ಸಾಗುತ್ತಿದೆ.

ಇಂದು ಹಳೆ ಹುಬ್ಬಳ್ಳಿಯ ಕೆಂಪಗೇರಿಯಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 6,28,500 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಲ್ಲೇಶ್ವರದಲ್ಲಿ ಐಪಿಎಲ್ ಬೆಟ್ಟಿಂಗ್, 6 ಮಂದಿ ಬಂಧನ

ಚೇತನಾ ಕಾಲೋನಿ ನಿವಾಸಿ ಧರ್ಮೇಂದ್ರ ಚೌಧರಿ, ಕೇಶ್ವಾಪುರದ ಸದಾನಂದ ಬದ್ದಿ, ಜೆಸಿ ನಗರದ ಪಾರಸಮಲ್ ರಾಠೋಡ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದರು. ಖಚಿತ ಮಾಹಿತಿಯ ಆಧಾರದಲ್ಲಿ ಇಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧನಕ್ಕೆ ಪಡೆದುಕೊಂಡಿದ್ದಾರೆ. ಹಳೆ ಹುಬ್ಬಳ್ಳಿಯ ಖಾಲಿ ಜಾಗದಲ್ಲಿ ಐಪಿಲ್ ಬೆಟ್ಟಿಂಗ್ ದಂಧೆಯನ್ನು ನಡೆಸಲಾಗುತ್ತಿತ್ತು. ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಬಂಧನದ ವೇಳೆ ಬರೋಬ್ಬರಿ 6,28,500 ನಗದು ದೊರೆತಿದೆ. ಈ ಕುರಿತು ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಲ್ ಪಂದ್ಯಾವಳಿ ಆರಂಭವಾಗುತ್ತಿದ್ದಂತೆಯೇ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

English summary
CCB and CCIB police arrest three persons who were involved in IPL betting and siezed 6 lakhs of money in hubballi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X