ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯ 10 ಶಾಸಕರು ನಮ್ಮ ಜೊತೆ ಇದ್ದಾರೆ : ಜಮೀರ್

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪಗೆ ಸವಾಲ್ ಹಾಕಿ ಬಿಜೆಪಿ ಬಗ್ಗೆ ಮಾತಾಡಿದ ಜಮೀರ್ ಅಹ್ಮದ್ ಖಾನ್

ಹುಬ್ಬಳ್ಳಿ, ಮೇ 12 : 'ಮೈತ್ರಿ ಸರ್ಕಾರದ 20 ಶಾಸಕರು ನಮ್ಮ ಜೊತೆ ಇರುವುದಾಗಿ ಬಿಜೆಪಿಯವರು ಹೇಳುತ್ತಾರೆ. ನಮ್ಮ ಜೊತೆಯೂ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ' ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಅಹಮದ್ ಖಾನ್ ಅವರು, 'ಬಿಜೆಪಿಯವರು 20 ಶಾಸಕರ ಹೆಸರು ಬಿಡುಗಡೆ ಮಾಡಿದರೆ, ನಾವು ಸಹ ಬಿಜೆಪಿಯ 10 ಶಾಸಕರ ಹೆಸರು ಹೇಳುತ್ತೇವೆ' ಎಂದು ಸವಾಲು ಹಾಕಿದರು.

ಕಾಂಗ್ರೆಸ್ ನ 20 ಶಾಸಕರು ರಾಜೀನಾಮೆ ನೀಡುತ್ತಾರೆ: ಬಿಎಸ್ ವೈಕಾಂಗ್ರೆಸ್ ನ 20 ಶಾಸಕರು ರಾಜೀನಾಮೆ ನೀಡುತ್ತಾರೆ: ಬಿಎಸ್ ವೈ

'ಬಿಜೆಪಿಯವರು ಸುಮ್ಮನೆ ಬೊಗಳೆ ಬಿಡುತ್ತಾರೆ. ಮೇ 23 ಅಲ್ಲ, ಇನ್ನೂ ಎರಡು ದಿನ ಹೆಚ್ಚುವರಿಯಾಗಿ ತೆಗೆದುಕೊಂಡು 25ಕ್ಕೆ ಸರ್ಕಾರ ರಚನೆ ಮಾಡಲಿ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದರು.

ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಹಾದಿ ಸುಗಮ?ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಹಾದಿ ಸುಗಮ?

BZ Zameer Ahmed Khan

'ಮೇ 23ರ ನಂತರ ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ?' ಎಂದು ಜಮೀರ್ ಅಹಮದ್ ಖಾನ್ ಪ್ರಶ್ನಿಸಿದರು.

ಓದುಗರ ಅಭಿಪ್ರಾಯ : ಕರ್ನಾಟಕ ಬಿಜೆಪಿ ಅಧ್ಯಕ್ಷರು ಬದಲಾಗಬೇಕುಓದುಗರ ಅಭಿಪ್ರಾಯ : ಕರ್ನಾಟಕ ಬಿಜೆಪಿ ಅಧ್ಯಕ್ಷರು ಬದಲಾಗಬೇಕು

ಕರ್ನಾಟಕದಲ್ಲಿ ಬೇಸ್‌ ಇಲ್ಲ : 'ಬಿಜೆಪಿಯವರಿಗೆ ಕರ್ನಾಟಕದಲ್ಲಿ ಯಾವುದೇ ಬೇಸ್ ಇಲ್ಲ. 2008ರಲ್ಲಿ ಎಚ್.ಡಿ.ಕುಮಾರಸ್ವಾಮಿ ತಮ್ಮ ವಾಗ್ದಾನದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದ್ದರೆ ಈ ವೇಳೆಗೆ ಆ ಪಕ್ಷವೇ ನಿರ್ನಾಮ ಆಗಿರುತ್ತಿತ್ತು. ಅಂದು ಕುಮಾರಸ್ವಾಮಿ ಮಾಡಿದ ತಪ್ಪಿನಿಂದ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದೆ' ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತೆ ಸಿಎಂ : 'ಐದು ವರ್ಷಗಳ ಕಾಲ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇರಲಿದೆ. ಅಲ್ಲಿಯ ತನಕ ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. 2022ರಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಲಿದ್ದಾರೆ' ಎಂದು ಜಮೀರ್ ವಿಶ್ವಾಸ ವ್ಯಕ್ತಪಡಿಸಿದರು.

English summary
10 BJP MLAs are in touch with us said minister and Congress leader B.Z.Zameer Ahmed Khan. Two days back B.S.Yeddyurappa said that 20 Congress MLA's in touch with him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X