ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Budget 2022; ನೈಋತ್ಯ ರೈಲ್ವೆಗೆ 6,900 ಕೋಟಿ ರೂ. ಅನುದಾನ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 04; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ರ ಬಜೆಟ್ ಮಂಡನೆ ಮಾಡಿದ್ದಾರೆ. ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್‌ನಲ್ಲಿ ವಿಲೀನಗೊಂಡ ಬಳಿಕ ಮಂಡಿಸಲಾದ 6ನೇ ಬಜೆಟ್ ಇದಾಗಿದ್ದು, ರೈಲ್ವೆ ಇಲಾಖೆಗೆ ಬಜೆಟ್‌ನಲ್ಲಿ ಒಟ್ಟು 1.40 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ.

ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ವಲಯಕ್ಕೆ ಬಜೆಟ್‌ನಲ್ಲಿ ಸಿಕ್ಕ ಅನುದಾನದ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ವಲಯ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ನೈಋತ್ಯ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಕ್ಕಿದೆ.

ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 112 ಕೋಟಿ ಅನುದಾನ ಬಜೆಟ್; ಗದಗ-ವಾಡಿ ರೈಲು ಮಾರ್ಗಕ್ಕೆ 112 ಕೋಟಿ ಅನುದಾನ

ವಿವಿಧ ಯೋಜನೆಗಳಿಗಾಗಿ, ಮೂಲ ಸೌಕರ್ಯ ಅಭಿವೃದ್ಧಿಗಾಗಿ ಒಟ್ಟು 6,900 ಕೋಟಿ ರೂ.ಗಳನ್ನು ನೀಡಲಾಗಿದೆ. ಕಳೆದ ಬಾರಿಯ ಬಜೆಟ್‌ಗೆ ಹೋಲಿಕೆ ಮಾಡಿದರೆ ಶೇ 43ರಷ್ಟು ಅನುದಾನ ಹೆಚ್ಚಿಗೆ ನೀಡಲಾಗಿದೆ.

Budget 2022; ಬೆಂಗಳೂರು ಸಬ್ ಅರ್ಬನ್ ರೈಲಿಗೆ 450 ಕೋಟಿ Budget 2022; ಬೆಂಗಳೂರು ಸಬ್ ಅರ್ಬನ್ ರೈಲಿಗೆ 450 ಕೋಟಿ

ವಲಯದ ವ್ಯಾಪ್ತಿಯಲ್ಲಿನ ವಿದ್ಯುದೀಕರಣಕ್ಕೆ 611 ಕೋಟಿ ರೂ.ಗಳನ್ನು ನೀಡಲಾಗಿದೆ. ಕಳೆದ ಬಾರಿ ಬಜೆಟ್‌ನಲ್ಲಿ ವಿದ್ಯುದೀಕರಣಕ್ಕೆ 492 ಕೋಟಿ ರೂ. ಅನುದಾನ ಸಿಕ್ಕಿತ್ತು.

Railway Budget 2022; ರೈಲ್ವೆ ಇಲಾಖೆಯ ಪ್ರಮುಖ ಘೋಷಣೆಗಳು Railway Budget 2022; ರೈಲ್ವೆ ಇಲಾಖೆಯ ಪ್ರಮುಖ ಘೋಷಣೆಗಳು

ಮೂಲ ಸೌಕರ್ಯ ಅಭಿವೃದ್ದಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಹೊಸ ಮಾರ್ಗ, ಜೋಡಿ ಹಳಿ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ 2325 ಕೋಟಿ ರೂ.ಗಳನ್ನು ನೀಡಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಯಾರಿ, 100 ಕಾರ್ಗೊ ನಿಲ್ದಾಣಗಳ ಸ್ಥಾಪನೆ ಸೇರಿದಂತೆ ಹಲವು ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಲಾಗಿತ್ತು.

ಮೂಲ ಸೌಕರ್ಯ ಅಭಿವೃದ್ಧಿ

ಮೂಲ ಸೌಕರ್ಯ ಅಭಿವೃದ್ಧಿ

ಹಳಿಗಳ ಸುರಕ್ಷತೆ, ರಸ್ತೆ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. 625 ಕೋಟಿ ರೂ. ನೀಡಲಾಗಿದ್ದು ಹಳಿಗಳ ಆಧುನೀಕರಣ ನಡೆಯಲಿದೆ. 254 ಕೋಟಿ ರೂ.ಗಳನ್ನು ರಸ್ತೆ ಮೇಲ್ಸೆತುವೆ, ಅಂಡರ್‌ಪಾಸ್ ನಿರ್ಮಾಣಕ್ಕೆ ನಿಗದಿ ಮಾಡಲಾಗಿದೆ. ಈ ಕಾಮಗಾರಿಗಳಿಗೆ ಕಳೆದ ಬಜೆಟ್‌ಗೆ ಹೋಲಿಕೆ ಮಾಡಿದರೆ ಶೇ 46ರಷ್ಟು ಹೆಚ್ಚು ಅನುದಾನ ಸಿಕ್ಕಿದೆ. ಹಳಿಗಳ ಸುರಕ್ಷತೆ ಸುರಂಗ ನಿರ್ಮಾಣ, ಬ್ರಿಡ್ಜ್‌ಗಳ ನಿರ್ಮಾಣಕ್ಕೆ 680 ಕೋಟಿ ಅನುದಾನ ಸಿಕ್ಕಿದೆ.

ಪ್ರಯಾಣಿಕರ ಮೂಲ ಸೌಕರ್ಯ

ಪ್ರಯಾಣಿಕರ ಮೂಲ ಸೌಕರ್ಯ

ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸಲು ಉನ್ನತ ಗುಣಮಟ್ಟದ ಪ್ಲಾಟ್‌ ಫಾರಂ ನಿರ್ಮಾಣ, ಪಾದಚಾರಿ ಸೇತುವೆಗಳು, ದಿವ್ಯಾಂಗರಿಗೆ ಅನುಕೂಲವಾಗುವಂತಹ ಸೌಲಭ್ಯ ಕಲ್ಪಿಸಲು ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ನೀಡಲಾಗಿದೆ. ವಿಶ್ರಾಂತಿ ಗೃಹ ನಿರ್ಮಾಣ ಸೇರಿದಂತೆ ಇತರ ಸೌಲಭ್ಯ ನಿರ್ಮಾಣಕ್ಕೆ 75 ಕೋಟಿ ರೂ. ಅನುದಾನ ನೀಡಲಾಗಿದೆ.

ಹೊಸ ಮಾರ್ಗದ ವಿವರಗಳು

ಹೊಸ ಮಾರ್ಗದ ವಿವರಗಳು

ಬಜೆಟ್‌ನಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಹೊಸ ಮಾರ್ಗಗಳ ನಿರ್ಮಾಣಕ್ಕೆ 871 ಕೋಟಿ ರೂ. ನೀಡಲಾಗಿದೆ. ಇವುಗಳಲ್ಲಿ ಧಾರವಾಡ-ಕಿತ್ತೂರು ಹೊಸ ಮಾರ್ಗಕ್ಕೆ 20 ಕೋಟಿ, ಗದಗ-ವಾಡಿ ಮಾರ್ಗಕ್ಕೆ 187 ಕೋಟಿ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಕ್ಕೆ 50 ಕೋಟಿ ನೀಡಲಾಗಿದೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗಕ್ಕೆ 50 ಕೋಟಿ, ಬಾಗಲಕೋಟೆ-ಕುಡಚಿ ಮಾರ್ಗಕ್ಕೆ 50 ಕೋಟಿ ಸಿಕ್ಕಿದೆ. ರಾಯಗಢ-ತುಮಕೂರು (ವಯಾ ಕಲ್ಯಾಣ ದುರ್ಗ) ಮಾರ್ಗಕ್ಕೆ 100 ಕೋಟಿ ರೂ. ನೀಡಲಾಗಿದೆ.

ಜೋಡಿ ಹಳಿ ನಿರ್ಮಾಣಕ್ಕೆ ಅನುದಾನ

ಜೋಡಿ ಹಳಿ ನಿರ್ಮಾಣಕ್ಕೆ ಅನುದಾನ

ಬಜೆಟ್‌ನಲ್ಲಿ ಜೋಡಿ ಹಳಿ ನಿರ್ಮಾಣಕ್ಕೆ ನೈಋತ್ಯ ರೈಲ್ವೆ ವಲಯಕ್ಕೆ 1455 ಕೋಟಿ ರೂ. ಅನುದಾನ ನೀಡಲಾಗಿದೆ. ಇವುಗಳಲ್ಲಿ ಗದಗ-ಕೂಡಗಿ-ಹೊಟಗಿ ನಡುವೆ ಜೋಡಿ ಹಳಿ ನಿರ್ಮಾಣಕ್ಕೆ 200 ಕೋಟಿ, ಹುಬ್ಬಳ್ಳಿ-ಚಿಕ್ಕಜಾಜೂರು ಮಾರ್ಗಕ್ಕೆ 210 ಕೋಟಿ ರೂ. ನೀಡಲಾಗಿದೆ.

ಬೆಂಗಳೂರು ನಗರದಿಂದ ವಿವಿಧ ಪ್ರದೇಶಗಳಿಗೆ ರೈಲು ಸಂಪರ್ಕ ವ್ಯವಸ್ಥೆ ಬಲಪಡಿಸಲು ಆದ್ಯತೆ ನೀಡಲಾಗಿದೆ. ಯಶವಂತಪುರ-ಚನ್ನಸಂದ್ರ 115 ಕೋಟಿ ರೂ., ಯಲಹಂಕ ಪೆನುಕೊಂಡ 54 ಕೋಟಿ, ಪೆನುಕೊಂಡ-ಧರ್ಮಾವರಂ 60 ಕೋಟಿ, ಬೈಯಪ್ಪನಹಳ್ಳಿ-ಹೊಸೂರು 140 ಕೋಟಿ, ಅರಸೀಕೆರೆ-ತುಮಕೂರು ಮಾರ್ಗಕ್ಕೆ 518 ಕೋಟಿ ನೀಡಲಾಗಿದೆ.

English summary
In a budget 2022 government has allocated Rs. 6900 crore for the south western railway. 611 crore allotted for electrification works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X