ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಸಿರಿರುವ ತನಕ ರಾಜ್ಯ ವಿಭಜನೆಗೆ ಅವಕಾಶ ಕೊಡಲಾರೆ: ಯಡಿಯೂರಪ್ಪ

By Nayana
|
Google Oneindia Kannada News

Recommended Video

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗೋಕೆ ಬಿಡೋದಿಲ್ಲ ಅಂತಿದ್ದಾರೆ ಬಿ ಎಸ್ ಯಡಿಯೂರಪ್ಪ | Oneindia Kannada

ಹುಬ್ಬಳ್ಳಿ, ಜುಲೈ31: ಕರ್ನಾಟಕವನ್ನು ಇಬ್ಭಾಗ ಮಾಡಲು ನಾನು ಬದುಕಿರುವವರೆಗೂ ಅವಕಾಶ ಕೊಡುವುದಿಲ್ಲ, ರಾಜಕೀಯ ಸ್ವಾರ್ಥಕ್ಕಾಗಿ ಕುಮಾರಸ್ವಾಮಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಾಗ್ದಾಳಿ ನಡೆದಿದ್ದಾರೆ.

ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕೊನೆಯ ಉಸಿರುರುವವರೆಗೂ ರಾಜ್ಯವನ್ನು ಒಡೆಯಲು ಅವಕಾಶ ಕೊಡುವುದಿಲ್ಲ, ಕರ್ನಾಟಕ ಏಕೀಕರಣ ಆದ ಮೇಲೆ ಯಾವುದೇ ಮುಖ್ಯಮಂತ್ರಿ ರಾಜ್ಯವನ್ನ ಒಡೆದು ಆಳುವ ನೀತಿ ಅನುಸರಿಸಿರಲಿಲ್ಲ. ಅದರೆ, ಕುಮಾರಸ್ವಾಮಿ ಆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಒಡೆದು ಜೆಡಿಎಸ್‌ ಬಲಪಡಿಸಲು ದೇವೇಗೌಡ ಹುನ್ನಾರ: ಬಿಎಸ್‌ವೈರಾಜ್ಯ ಒಡೆದು ಜೆಡಿಎಸ್‌ ಬಲಪಡಿಸಲು ದೇವೇಗೌಡ ಹುನ್ನಾರ: ಬಿಎಸ್‌ವೈ

ಇಡೀ ರಾಜ್ಯಕ್ಕೆ ಅನ್ನ ಕೊಡುತ್ತಿರುವುದು ಉತ್ತರ ಕರ್ನಾಟಕ. ಬೆಳಕು ನೀಡುವುದು ಕಾರವಾರ. ಬಜೆಟ್​ನಲ್ಲಿ ಆಲಮಟ್ಟಿ ನೀರಾವರಿ ಯೋಜನೆಗೆ ನೈಯಾ ಪೈಸೆ ತೆಗೆದಿಟ್ಟಿಲ್ಲ. ಈ ಹಿಂದೆ ನೀರಾವರಿ ಯೋಜನೆಗೆ ಸಿದ್ದರಾಮಯ್ಯ ಕೂಡ ಅನ್ಯಾಯ ಮಾಡಿದ್ದಾರೆ.

BSY says wont allow to separate state till he alive

ಹೈದರಾಬಾದ್ ಕರ್ನಾಟಕದಲ್ಲಿ ಸಾಕಷ್ಟು ಹುದ್ದೆ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಮನಸ್ಸು ಮಾಡಿಲ್ಲ. ಆಲಮಟ್ಟಿ ಉದ್ಯಾನವನವನ್ನ ಅಭಿವೃದ್ಧಿ ಮಾಡಿಲ್ಲ. ಆದರೆ, ಕೆಆರ್‌ಎಸ್ ಅಭಿವೃದ್ಧಿ ಮಾಡಿದ್ದಾರೆ ಎಂದು ಟೀಕಿಸಿದರು.

ಉತ್ತರ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲವಿಲ್ಲ ಉತ್ತರ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲವಿಲ್ಲ

ಪ್ರತ್ಯೇಕ ರಾಜ್ಯದ ಹಿಂದೆ ಬಿಜೆಪಿ ಕುಮ್ಮಕ್ಕು ಇದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಕೆಂಡಾಮಂಡಲರಾದ ಬಿಎಸ್​ವೈ, ಯಾರೋ ತೆಲೆ ತಿರುಕ ಹೇಳಿದ್ದಾನೆ ಎಂದು ಟಾಂಗ್ ನೀಡಿದರು. ಶ್ರೀರಾಮುಲು, ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ಬೇಡಿಕೆ ಇಟ್ಟಿಲ್ಲ.

ಕುಮಾರಸ್ವಾಮಿ ರಾಜ್ಯ ಒಡೆಯಲು ಹೊರಟಿದ್ದಾರೆ: ಯಡಿಯೂರಪ್ಪ ಕುಮಾರಸ್ವಾಮಿ ರಾಜ್ಯ ಒಡೆಯಲು ಹೊರಟಿದ್ದಾರೆ: ಯಡಿಯೂರಪ್ಪ

ಬದಲಾಗಿ ಈ ಭಾಗದ ಜನರ ಭಾವನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯವನ್ನು ಒಡೆದು ಆಳುವುದೇ ಜೆಡಿಎಸ್​ನ ಮುಖ್ಯ ಉದ್ದೇಶವಾಗಿದ್ದು, ಬೆಂಕಿ ಹಚ್ಚುವ ಕೆಲಸವನ್ನು ಅಪ್ಪ ಮಕ್ಕಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ

ಬೆಳಗಾವಿಯಲ್ಲಿ ನೂರಾರು ಜನ ಸ್ವಾಮೀಜಿಗಳು ಪ್ರತ್ಯೇಕ ರಾಜ್ಯಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಂ ಪ್ರತಿಭಟನಾ ಸ್ಥಳಕ್ಕೆ ಬಂದು ಮನವೊಲಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ, ಆ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಪ್ರತಿಭಟನಾ ಸ್ಥಳಕ್ಕೆ ತೆರಳಿ, ಮನವೊಲಿಸುವ ಕೆಲಸ ಮಾಡುತ್ತೇನೆ ಎಂದರು.

English summary
State Bjp president B.S. Yeddiyurappa said that he will not allow to divide the state till he alive and accused chief minister H.D.Kumaraswamy that the latter dividing the people by caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X