ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಘಟಗಿ; ಮದ್ಯ ಸಿಗುತ್ತಿಲ್ಲ ಎಂದು ಸ್ಯಾನಿಟೈಸರ್ ಕುಡಿದು ಅಕ್ಕ ತಮ್ಮ ಸಾವು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 20: ದೇಶಾದ್ಯಂತ ಲಾಕ್ ಡೌನ್ ಇದ್ದು, ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಈ ನಡುವೆ ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಸಮಯದಲ್ಲಿ ಕೆಲವರು ಸ್ಯಾನಿಟೈಸರ್ ‌ಗಳನ್ನು ಸೇವಿಸುತ್ತಿರುವ ಸಂಗತಿಗಳೂ ನಡೆಯುತ್ತಿವೆ.

ಹೀಗೆಯೇ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ- ತಮ್ಮ ಸಾವನ್ನಪ್ಪಿರುವ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ. ಮದ್ಯ ಸಿಗುತ್ತಿಲ್ಲವಾದ್ದರಿಂದ ಇವರಿಬ್ಬರೂ ಸ್ಯಾನಿಟೈಸರ್ ಅನ್ನು ಸೇವಿಸಿದ್ದಾರೆ. ಈ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ಬೆಳಗ್ಗೆ ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ (45) ಸಾವನ್ನಪ್ಪಿದ್ದಾರೆ. ನಂತರ ಈತನ ಸಹೋದರಿ ಜಂಬಕ್ಕ ಕಟ್ಟಿಮನಿ (47) ಕೂಡ ಮೃತಪಟ್ಟಿದ್ದಾರೆ.

ಸ್ಯಾನಿಟೈಸರ್ ಸೇವನೆ ಜೀವಕ್ಕೆ ಅಪಾಯ ತರಲಿದೆ ಎಚ್ಚರಸ್ಯಾನಿಟೈಸರ್ ಸೇವನೆ ಜೀವಕ್ಕೆ ಅಪಾಯ ತರಲಿದೆ ಎಚ್ಚರ

ಲಾಕ್ ಡೌನ್ ವಿಧಿಸಿದಾಗಿನಿಂದ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಈ ಇಬ್ಬರೂ ತಿಂಗಳಿನಿಂದ ಮದ್ಯ ಸಿಗದೇ ಪರದಾಡಿದ್ದಾರೆ. ಕೊನೆಗೆ ಬೇರೆ ದಾರಿ ಹಿಡಿದು ಮೂರು ದಿನಗಳಿಂದ ಸ್ಯಾನಿಟೈಸರ್ ಸೇವಿಸಲು ಆರಂಭಿಸಿದ್ದರು. ಹೀಗಾಗಿ ಅನಾರೋಗ್ಯಕ್ಕೊಳಗಾದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

 Brother And Sister Died By Drinking Sanitizer In Kalaghatagi

ನಿನ್ನೆ ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ತಮ್ಮ ಸಾವನ್ನಪ್ಪಿದ್ದು, ಸಂಜೆಯೇ ಅಕ್ಕ ಕೂಡ ಸಾವನ್ನಪ್ಪಿದ್ದಾರೆ. ಬಗ್ಗೆ ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

English summary
Brother and sister died by drinking sanitizer in gambyapura village of kalaghatagi in hubballi district. They didnt get alcohol since lockdown. so they started to sanitizer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X