ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಸ್ಮಾರ್ಟ್ ಸಿಟಿ, ಬಿಜೆಪಿ ಕಾರ್ಯಕರ್ತರು ಹೊಡೆದರು ಶೀಟಿ!

By ಹುಬ್ಬಳ್ಳಿ, ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆ.21 :12 ರಾಜ್ಯಗಳ 27 ನಗರಗಳನ್ನು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಅವಳಿ ನಗರ ಹುಬ್ಬಳ್ಳಿ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ನಗರದಲ್ಲಿ ಸಂಭ್ರಮ ಮನೆ ಮಾಡಿದೆ.

ನಗರದ ದುರ್ಗದಬೈಲ್ ನಲ್ಲಿ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಪ್ರಯತ್ನದಿಂದ 2ನೇ ಪಟ್ಟಿಯಲ್ಲಿ ಆಯ್ಕೆಯಾಗಿ ನಗರ ಅಭಿವೃದ್ಧಿ ಹೊಂದಲಿದೆ ಎಂದರು.

Hubballi

ಎಲ್ಲೆಲ್ಲಿ ಅಭಿವೃದ್ಧಿ : ನಗರದ ರೈಲ್ವೆ ಸ್ಟೇಷನ್ ನಿಂದ ದುರ್ಗದಬೈಲ್ ಪ್ರದೇಶ ಮತ್ತು ಗೋಕುಲ ರಸ್ತೆಯ ವಿಮಾನ ನಿಲ್ದಾಣದಿಂದ ತೋಳನಕೆರೆ ವ್ಯಾಪ್ತಿಯ 4.04 ಕಿ.ಮೀ. ಪ್ರದೇಶವನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಅಭಿವೃದ್ಧಿಗೊಳಿಸಲು ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ.

ಪಾಲಿಕೆಯು ಬೆಂಗಳೂರಿನ ಹೈಡೆಕ್ಸ್ ಸಂಸ್ಥೆಯಿಂದ ಸಲಹೆ ಪಡೆದುಕೊಂಡು 202 ಕಿ.ಮೀ ವಿಸ್ತೀರ್ಣದ ಮಹಾನಗರವನ್ನು ಪ್ಯಾನ್ ಸಿಟಿ ಸೆಲ್ಯೂಷನ್ ಅಡಿಯಲ್ಲಿ ಒಂದು ಸಾವಿರ ಎಕರೆ ವಿಸ್ತೀರ್ಣದಲ್ಲಿ ರೈಲ್ವೆ ಸ್ಟೇಷನ್ ನಿಂದ ವಿಮಾನ ನಿಲ್ದಾಣದವರೆಗೆ ಅಭಿವೃದ್ಧಿ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು.

ನಗರದದ್ಯಾಂತ ಸಂಚರಿಸಿ ಜನರಲ್ಲಿ ಸ್ಮಾರ್ಟ್ ಸಿಟಿ ಕುರಿತು ಜಾಗೃತಿ ಮೂಡಿಸಲು ವಾಹನವೊಂದನ್ನು ಬಿಡಲು ಪಾಲಿಕೆ ಮುಂದಾಗಿದೆ.

English summary
The bjp party workers celebrated the next set of 27 cities for financing under the Government flagship Smart City Mission. Hubballi announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X